ಆರ್ಥಿಕ ಉನ್ನತಿಯಲ್ಲಿ ಸಿಎಗಳ ಪಾತ್ರ ಮಹತ್ತರ
Team Udayavani, Jul 7, 2018, 1:48 PM IST
ಮಂಗಳೂರು: ಆರ್ಥಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಲೆಕ್ಕ ಪರಿಶೋಧಕರು ಸಲಹೆಗಾರರಾಗಿ, ಮಾರ್ಗದರ್ಶಕರಾಗಿ ಅತ್ಯುನ್ನತ ಸೇವೆ ನೀಡುತ್ತಾರೆ. ಒಟ್ಟು ಆರ್ಥಿಕ ಉನ್ನತಿಯಲ್ಲಿ ಅವರ ಪಾತ್ರ ಮಹತ್ತರ ಎಂದು ಭಾರತ್ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಜಿ. ಪೈ ಹೇಳಿದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮಂಗಳೂರು ಶಾಖೆ ವತಿಯಿಂದ ಡಾ| ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ “ಸ್ವಾಧ್ಯಾಯ’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಅವರು, ಯುವಜನತೆ ಈ ಕ್ಷೇತ್ರದ ಉದ್ಯೋಗಾವಕಾಶವನ್ನು ಬಳಸಿಕೊಳ್ಳಬೇಕು. ಮಂಗಳೂರು ಶಾಖೆ ರಾಷ್ಟ್ರಮಟ್ಟದಲ್ಲೇ ಗಮನ ಸೆಳೆದಿದೆ ಎಂದು ಶ್ಲಾಘಿಸಿದರು. ಭಾರತ್ ಫೋರ್ಜ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಸಾಲೆತ್ತೂರು ಮಾತನಾಡಿ, ಲೆಕ್ಕಪರಿಶೋಧಕ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು, ಸ್ವಾಧ್ಯಾಯ ಸಮ್ಮೇಳನ ಪೂರಕ ಎಂದರು.
ಕರ್ಣಾಟಕ ಬ್ಯಾಂಕಿನ ಮಹಾ ಪ್ರಬಂಧಕ ವೈ.ವಿ. ಬಾಲಚಂದ್ರ, ಕೇಂದ್ರ ಸಮಿತಿ ಸದಸ್ಯ ಮತ್ತು ಐಡಿಟಿಸಿ ಮುಖ್ಯಸ್ಥ ಮಧುಕರ್ ಹಿರೇಗಂಗೆ ಮಾತನಾಡಿದರು.ಕೇಂದ್ರ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ರಂಜಿತ್ ಕುಮಾರ್ ಅಗರ್ವಾಲ್ ಅಧ್ಯಕ್ಷತೆ ವಹಿಸಿದ್ದರು. ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಶಿವಾನಂದ ಪೈ ಸ್ವಾಗತಿಸಿದರು. ಕೇಂದ್ರೀಯ ಸಮಿತಿ ಸದಸ್ಯ ದೇಬಾಶಿಸ್ ಮಿತ್ರ, ಮಂಗಳೂರು ಶಾಖೆಯ ಕಾರ್ಯದರ್ಶಿ ರವಿರಾಜ ಬೈಕಂಪಾಡಿ, ಐಸಿಎಐಯ ಮಂಗಳೂರು ಶಾಖೆಯ ನಿಕಟಪೂರ್ವ ಅಧ್ಯಕ್ಷ ಭಾರ್ಗವ ತಂತ್ರಿ, ಅನಂತ ಪದ್ಮನಾಭ, ಸುಬ್ರಹ್ಮಣ್ಯ ಕಾಮತ್ ಕೆ., ಅಬ್ದುರ್ ರೆಹಮಾನ್ ಮುಸ್ಬಾ , ಕೇಶವ ಬಳಕುರಾಯ, ಅರವಿಂದ ಕೃಷ್ಣ , ಈಡಿಲ್ ಡಿ’ಸಿಲ್ವಾ ಉಪಸ್ಥಿತರಿದ್ದರು.
“ಬ್ಯಾಂಕ್ ಲೆಕ್ಕ ಪರಿಶೋಧನೆಗೆ ಹೊಸ ತಂತ್ರಾಂಶ’
ಮಂಗಳೂರು: ಬ್ಯಾಂಕ್‌ಗಳ ಲೆಕ್ಕ ಪರಿಶೋಧನೆಯಲ್ಲಿ ಲೋಪಗಳನ್ನು ತಡೆಗಟ್ಟಲು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಆರ್‌ಬಿಐ ಸಮ್ಮತಿಯೊಂದಿಗೆ ಹೊಸ ತಂತ್ರಾಂಶ ಸಿದ್ಧಪಡಿಸಿದ್ದು, ಮೂರು ಬ್ಯಾಂಕ್‌ಗಳು ಅಳವಡಿಸಿವೆ ಎಂದು ಐಸಿಎಐ ಪಿಡಿಸಿ ಅಧ್ಯಕ್ಷ ರಂಜಿತ್ ಕುಮಾರ್ ಅಗರ್‌ವಾಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು, ಸಿಂಡಿಕೇಟ್ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನೂತನ ತಂತ್ರಾಂಶವನ್ನು ಲೆಕ್ಕ ಪರಿಶೋಧನೆಗೆ ಅಳವಡಿಸಿವೆ. ಈ ವರ್ಷ ಇನ್ನೂ 10 ಬ್ಯಾಂಕ್‌ಗಳು ಅಳವಡಿಸುವ ನಿರೀಕ್ಷೆ ಇದೆ. ಈ ವ್ಯವಸ್ಥೆಯಲ್ಲಿ ತಂತ್ರಾಂಶವೇ ರ್‍ಯಾಂಡಮ್ ಆಗಿ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡುತ್ತದೆ. ಅವರ ಮೂಲಕವೇ ಲೆಕ್ಕ ಪರಿಶೋಧನೆ ಮಾಡಿಸಬೇಕಾಗುತ್ತದೆ. ಇದು ಬ್ಯಾಂಕುಗಳ ಲೆಕ್ಕಪರಿಶೋಧನೆಯಲ್ಲಿ ಪ್ರಭಾವ ಬೀರುವುದನ್ನು ತಪ್ಪಿಸುತ್ತದೆ ಎಂದರು.
ಲೆಕ್ಕ ಪರಿಶೋಧನೆ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಬ್ಲಾಕ್‌ಚೈನ್ ವ್ಯವಸ್ಥೆ ಪೂರಕವಾಗಿದೆ. ಯುಎಇಯಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿ ನಡೆಯುತ್ತಿದೆ. ತೆಲಂಗಾಣದಲ್ಲಿ ಪ್ರಸ್ತುತ ಇದು ಅನುಷ್ಠಾನಗೊಳ್ಳುತ್ತಿದೆ ಎಂದರು. ಸಿಎ ವಿದ್ಯಾರ್ಥಿಗಳಿಗೆ ಪ್ರಸ್ತುತ ಐಸಿಎಐ ವೀಡಿಯೋ ಮುದ್ರಿತ ಆನ್‌ಲೈನ್ ಕೌಡ್ ತರಗತಿಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಉಪನ್ಯಾಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮನನ ಮಾಡಲು ಅನುವಾಗುವಂತೆ ಐಸಿಎಐ ವರ್ಚುವಲ್ ತರಗತಿಗಳನ್ನು ಆರಂಭಿಸುತ್ತಿದೆ ಎಂದವರು ತಿಳಿಸಿದರು. ಕಾಲೇಜು ವಿದ್ಯಾರ್ಥಿಗಳಲ್ಲಿ ಜಿಎಸ್‌ಟಿ ತೆರಿಗೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಲೆಕ್ಕ ಪರಿಶೋಧಕರಿಂದ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾಗಿದೆ ಮತ್ತು ಸಂಗ್ರಹ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಪ್ರಮಾಣವೂ ಕಡಿಮೆಯಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Siddapura: ಕಂಟೇನರ್ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.