ಸಿಟಿ ಬಸ್‌ ಸಮಯ ಪಾಲನೆಗೆ ಸಿಸಿ ಕೆಮರಾ ನಿಗಾ

ಬಸ್‌ ಸಿಬಂದಿ, ಮಾಲಕರ ನಡುವೆ ಸಮನ್ವಯ ಸಾಧಿಸುವ ಉದ್ದೇಶ

Team Udayavani, May 30, 2022, 11:18 AM IST

cc-camera

ಮಹಾನಗರ: ಸಮಯ ಪಾಲನೆ ವಿಷಯದಲ್ಲಿ ಸಿಟಿ ಬಸ್‌ ಸಿಬಂದಿ ಮತ್ತು ಮಾಲಕರ ನಡುವಣ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಮಂಗಳೂರಿನ ಐದು ಕಡೆಗಳಲ್ಲಿ ಸೋಲಾರ್‌ ಸಿಸಿ ಕೆಮರಾ ಅಳವಡಿಸಲು ಬಸ್‌ ಮಾಲಕ ಒಕ್ಕೂಟ ನಿರ್ಧರಿಸಿದೆ.

ಮೊದಲನೇ ಹಂತದಲ್ಲಿ ನಂತೂರಿ ನಲ್ಲಿ ಈಗಾಗಲೇ ಸೋಲಾರ್‌ ಸಿಸಿ ಕೆಮರಾ ಅಳವಡಿಸಲಾಗಿದ್ದು, ಬಸ್‌ಗಳ ಚಲನವಲನಗಳ ಬಗ್ಗೆ ನಿಗಾ ಇಡಲಾ ಗುತ್ತಿದೆ. ಕೆಲವೊಂದು ಸಿಟಿ ಬಸ್‌ಗಳಲ್ಲಿ ಸಮರ್ಪಕ ಸಮಯ ಪಾಲನೆ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದು ಸಿಬಂದಿ ನಡುವಣ ಜಗಳಕ್ಕೆ ಕಾರಣ ವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿ ವಲಯ ಸಿಟಿ ಬಸ್‌ ಮಾಲಕರ ಒಕ್ಕೂಟವು ನಗರದ ಕೆಲವು ಬಸ್‌ ಪಾಯಿಂಟ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಿ ನಿಗಾ ಇಡಲು ಮುಂದಾಗಿದೆ.

ಸದ್ಯ ಮಂಗಳಾದೇವಿ ಕಡೆಯಿಂದ ಕಂಕನಾಡಿ- ನಂತೂರು- ಲಾಲ್‌ಬಾಗ್‌ -ಕೂಳೂರು-ಸುರತ್ಕಲ್‌ -ಕಾಟಿಪಳ್ಳ ರೂಟ್‌ಗೆ ದಿನಂಪ್ರತಿ ಸುಮಾರು 38 ಬಸ್‌ಗಳು ಕಾರ್ಯಾಚರಿಸುತ್ತವೆ. ಈ ರೂಟ್‌ನ ಕೆಲವು ಬಸ್‌ ಗಳ ಸಮಯ ಪಾಲನೆಯ ಬಗ್ಗೆ ಚಾಲಕರು, ನಿರ್ವಾಹಕರ ಗಲಾಟೆಯ ದೂರುಗಳು ಮಾಲಕರಿಗೆ ಬರುತ್ತಿದ್ದವು. ಪೊಲೀಸ್‌ ಇಲಾಖೆಯಿಂದಲೂ ಹಲವು ಬಾರಿ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅನುಮತಿಯೊಂದಿಗೆ ಸಿಸಿ ಕೆಮರಾ ಅಳವಡಿಸಲಾಗಿದೆ.

ಸೋಲಾರ್‌ ಸಿ.ಸಿ. ಕೆಮರಾ ವ್ಯವಸ್ಥೆ ಹೇಗೆ?

ಸೌರ ವಿದ್ಯುತ್‌ ಸಹಾಯದಿಂದ ಈ ಸಿಸಿ ಕೆಮರಾ ಕಾರ್ಯನಿರ್ವಹಿಸುತ್ತದೆ. ನಂತೂರಿನಲ್ಲಿ ಸುಮಾರು 15 ಅಡಿ ಎತ್ತರದ ಕಂಬದಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಸೋಲಾರ್‌ ಪ್ಯಾನಲ್‌ ಮುಖೇನ ಇದರಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತದೆ. 5 ಜಿ ವೈಫೈ ರೂಟರ್‌ ಅಳವಡಿಸಲಾಗಿದ್ದು, ಅದಕ್ಕೆ ಮೊಬೈಲ್‌ ಸಿಮ್‌ ಜೋಡಿಸಲಾಗಿದೆ. ಮೂರು ಮೆಗಾಪಿಕ್ಸೆಲ್‌ ಕೆಮರಾ ಅಳವಡಿಸಲಾಗಿದೆ. 40 ವ್ಯಾಟ್‌ ಸೋಲಾರ್‌ ಪ್ಯಾನಲ್‌ಗೆ 12 ಎಎಚ್‌ ಬ್ಯಾಟರಿಯನ್ನು ಅಳವಡಿಸಲಾಗಿದೆ. 128 ಜಿ.ಬಿ. ಮೊಮೊರಿ ಕಾರ್ಡ್‌ ಮುಖೇನ ವೀಡಿಯೋ ಸಂಗ್ರಹವಾಗಿ ಈ ವೀಡಿಯೋ ಫೂಟೇಜ್‌ಗಳನ್ನು ನೆಟ್‌ವರ್ಕ್‌ ಮುಖೇನ ಮೊಬೈಲ್‌, ಕಂಪ್ಯೂಟರ್‌ಗಳಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಐದು ಕಡೆ ಕೆಮರಾ

ಕರಾವಳಿ ವಲಯ ಸಿಟಿ ಬಸ್‌ ಮಾಲಕರ ಒಕ್ಕೂಟದಿಂದ ನಂತೂರಿ ನಲ್ಲಿ ಈಗಾಗಲೇ ಸೋಲಾರ್‌ ಸಿಸಿ ಕೆಮರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸುರತ್ಕಲ್‌ 2 ಕಡೆಗಳಲ್ಲಿ, ಬಿಜೈ ಕೆಎಸ್ಸಾರ್ಟಿಸಿ ಖಾಸಗಿ ಬಸ್‌ ತಂಗುದಾಣ ಬಳಿ, ಲಾಲ್‌ಬಾಗ್‌ನಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಸ್ಟೇಟ್‌ಬ್ಯಾಂಕ್‌ನಿಂದ ಲಾಲಾಬಾಗ್‌- ಕಾಟಿಪಳ್ಳ ನಡುವೆ ಸುಮಾರು 70 ಬಸ್‌ಗಳು ಸಂಚರಿಸುತ್ತವೆ. ಆ ಭಾಗದ ಕೆಲವು ಕಡೆಗಳಲ್ಲಿಯೂ ಕೆಲವು ಕಡೆ ಸಿಸಿ ಕೆಮರಾ ಅಳವಡಿಸಲು ಚಿಂತಿಸಲಾಗಿದೆ. ರಾಮಚಂದ್ರ ಪಿಲಾರ್‌, ಕರಾವಳಿ ವಲಯ ಸಿಟಿ ಬಸ್‌ ಮಾಲಕರ ಒಕ್ಕೂಟ ಪ್ರ.ಕಾರ್ಯದರ್ಶಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.