ಶಾಂತಿ, ಸೌಹಾರ್ದಕ್ಕಾಗಿ ಮ್ಯಾರಥಾನ್
Team Udayavani, Jan 8, 2018, 2:42 PM IST
ಉಳ್ಳಾಲ: ಮ್ಯಾರಥಾನ್‌ನಲ್ಲಿ ಎಲ್ಲರೂ ಭಾಗವಹಿಸುವ ಅವಕಾಶವನ್ನು ಚರ್ಚ್ ಶತಮಾನೋತ್ಸವ ಸಮಿತಿ ಕಲ್ಪಿಸಿದೆ. ಇತಿಹಾಸ ಪ್ರಸಿದ್ಧ ಚರ್ಚ್ ಸಮಾಜದ ಶಕ್ತಿಯಾಗಿದೆ. ಶತಮಾನೋತ್ಸವದ ಕಾರ್ಯಕ್ರಮ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಅದು ಉಳ್ಳಾಲದ ಪ್ರತಿಯೊಬ್ಬರ ಕಾರ್ಯಕ್ರಮವಾಗುವ ನಿಟ್ಟಿನಲ್ಲಿ ಆಚರಿಸುವ ಅವಶ್ಯಕತೆಯಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚ್ ನ ಶತಮಾನೋತ್ಸವದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಆಡಂಕುದ್ರುವಿನಿಂದ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ತನಕ ಶಾಂತಿ ಹಾಗೂ ಸೌಹಾರ್ದಕ್ಕೆ ಪ್ರತೀಕವಾಗಿ ಭಾನುವಾರ ನಡೆದ ಮ್ಯಾರಾಥಾನ್‌ಗೆ ಆಡಂಕುದ್ರುವಿನಲ್ಲಿ ಶಾಸಕ ಜೆ..ಆರ್. ಲೋಬೋ ಚಾಲನೆ ನೀಡಿದರು.
ಬಳಿಕ ಮಾತನಾಡಿ ಲೋಬೋ, ಸ್ವಸ್ಥ ಸಮಾಜ ನಿರ್ಮಾಣವಾದರೆ ಮಾನಸಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿದ್ದು, ಸರ್ವಧರ್ಮದವರನ್ನು ಒಟ್ಟಾಗಿಸಿ ಮ್ಯಾರಥಾನ್‌ನಂತಹ ಕಾರ್ಯಕ್ರಮವನ್ನು ಚರ್ಚ್ ಶತಮಾನೋತ್ಸವ ಸಮಿತಿ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಮಾದರಿ ಕಾರ್ಯಕ್ರಮಗಳು ಮುಂದೆಯೂ ನಡೆಯಬೇಕು ಎಂದು ಹೇಳಿದರು.
ದಾಯ್ಜಿವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತನಾಡಿ, ಸದ್ಯ ಜಿಲ್ಲೆಯಲ್ಲಿ ಅಶಾಂತಿಯನ್ನು ಕದಡುವ ಪ್ರಯತ್ನಗಳು
ನಡೆಯುತ್ತಿದ್ದು, ಒಬ್ಬರ ಹಿತಾಸಕ್ತಿಗೆ ಸಮಾಜದ ಎಲ್ಲರೂ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಾಮರಸ್ಯವನ್ನು ಕಾಪಾಡುವ ಮತ್ತು ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಮ್ಯಾರಥಾನ್
ಸ್ಪೂರ್ತಿಯಾಗಿದೆ. ಎಲ್ಲ ಯುವಜನತೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ಚರ್ಚ್‌ನ ಧರ್ಮಗುರು ಡಾ| ಜೆ.ಬಿ. ಸಲ್ದಾನ, ಶತಮಾನೋತ್ಸವ ಸಮಿತಿ ಪ್ರಧಾನ ಸಂಚಾಲಕ ಸುರೇಶ ಭಟ್ನಗರ, ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ , ಅಂತಾರಾಷ್ಟ್ರೀಯ ಕ್ರೀಡಾಪಟು ರೋಶನ್ ಫೆರಾವೊ, ಸಹಾಯಕ ಧರ್ಮಗುರು ಫಾ| ಸ್ಟ್ಯಾನಿ, ಫಾ| ಲೈಝಿಲ್, ಸಿಸ್ಟರ್ ಅನಿತಾ, ವಿನಿತಾ, ನಗರಸಭೆಯ ಸದಸ್ಯೆ ರಝಿಯಾ ಇಬ್ರಾಹಿಂ, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ನಗರಸಭೆಯ ಸದಸ್ಯ ಸುಂದರ್ ಉಳಿಯ, ಬಾಜಿಲ್ ಡಿ’ಸೋಜಾ, ಮಾಜಿ ಸದಸ್ಯ ಭಗವಾನ್ ದಾಸ್, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ದೈಹಿಕ ಶಿಕ್ಷಕರು ಸಹಿತ ಸಾವಿರ ಮಂದಿ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡರು.
ಸುಮಾರು 4.25 ಕಿ.ಮೀ. ಕ್ರಮಿಸಿದರು. ಮ್ಯಾರಾಥಾನ್‌ಗೆ ಉಳ್ಳಾಲ ಪೊಲೀಸರು ರಾ.ಹೆ. 66ರಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಟ್ಟರು. ಸಂತ ಸೆಬೆಸ್ಟಿಯನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ ನಿರ್ವಹಿಸಿದರು.
ವಿಜೇತರು
ಮ್ಯಾರಥಾನ್‌ನಲ್ಲಿ ಪುರುಷರ ವಿಭಾಗದಲ್ಲಿ ಅಮನ್ ಮದನಿ ಅಲೇಕಳ ಪ್ರಥಮ, ಹನುಮ ಗೌಡ ದ್ವಿತೀಯ ಹಾಗೂ ಸೃಜನ್ ಶೆಟ್ಟಿ ತೃತೀಯ ಪ್ರಶಸ್ತಿಯನ್ನು ಪಡೆದರೆ, ಮಹಿಳೆಯರ ವಿಭಾಗದಲ್ಲಿ ಪೂರ್ಣಿಮಾ ಪ್ರಥಮ, ಪೃಥ್ವಿಜಾ ದ್ವಿತೀಯ ಹಾಗೂ ಸ್ಟೆನಿಲ್ಲಾ ಡಿ’ಸೋಜಾ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.