Chaddi Gang; ಬಿಜೈ: ಮನೆ ಬಾಗಿಲು ಒಡೆದು ಕಳವು; ಚಡ್ಡಿಗ್ಯಾಂಗ್‌ನ ಮತ್ತೊಂದು ಕೃತ್ಯ?
Team Udayavani, Jul 14, 2024, 12:13 PM IST
ಮಂಗಳೂರು: ನಗರದ ಬಿಜೈ ನ್ಯೂ ರೋಡ್ ನ ಮನೆಯೊಂದರ ಬಾಗಿಲು ಒಡೆದು ಕಳವು ಮಾಡಿರುವ ಘಟನೆ ಇಂದು (ಜು.13ರ ಶನಿವಾರ) ಬೆಳಕಿಗೆ ಬಂದಿದೆ.
ಮನೆಯವರು ಕಳೆದ ನಾಲ್ಕೈದು ದಿನಗಳಿಂದ ಮನೆಯಲ್ಲಿರಲಿಲ್ಲ. ಇಂದು ಬೆಳಗ್ಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲು ಒಡೆದು ಕಳವು ಮಾಡಿರುವುದು ಗೊತ್ತಾಗಿದೆ. ನಗದು ಮತ್ತು ಇತರ ಕೆಲವು ಸೊತ್ತುಗಳನ್ನು ಕಳವು ಮಾಡಲಾಗಿದೆ.
ಇದು ಕೆಲವು ದಿನಗಳ ಹಿಂದೆಯೇ ನಡೆದಿರುವ ಕೃತ್ಯ ಆಗಿರಬೇಕು. ನಗರದಲ್ಲಿ ಇತ್ತೀಚೆಗೆ ದರೋಡೆ, ಕಳ್ಳತನಗಳನ್ನು ನಡೆಸಿರುವ ಚಡ್ಡಿ ಗ್ಯಾಂಗೇ ಈ ಕೃತ್ಯವನ್ನು ಕೂಡ ನಡೆಸಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.