ಪರಿಸರ ಕಾಳಜಿ ಪ್ರತಿಯೊಬರ ಜವಾಬ್ದಾರಿ: ವಂ| ಜೇಮ್ಸ್  ಡಿ’ಸೋಜಾ


Team Udayavani, Mar 18, 2019, 6:06 AM IST

18-march-5.jpg

ಮಂಗಳೂರು : ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 15ನೇ ವಾರದ ಶ್ರಮದಾನವನ್ನು ರವಿವಾರ ವೆಲೆನ್ಸಿಯಾ ಗೋರಿಗುಡ್ಡೆ ಪರಿಸರದಲ್ಲಿ ಆಯೋಜಿಸಲಾಗಿತ್ತು.  ವೆಲೆನ್ಸಿಯಾ ಚರ್ಚ್‌ ಬಳಿ ವಂ| ಜೇಮ್ಸ ಡಿ’ಸೋಜಾ, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್‌
ಲೋಬೋ ಶ್ರಮದಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ವಂ| ಜೇಮ್ಸ್‌ ಡಿ’ಸೋಜಾ, ನಾವಿರುವ ಈ ಪರಿಸರ ಮನುಕುಲಕ್ಕೆ ದೇವರು ನೀಡಿದ ಕೊಡುಗೆ ಆದ್ದರಿಂದ ಇದನ್ನು ಜವಾಬ್ದಾರಿಯಿಂದ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಈಗಾಗಲೇ ಮಾನವ ಪರಿಸರವನ್ನು ಹಾಳು ಮಾಡಿದ್ದಾನೆ. ಆದರೆ ಇದೀಗ ಅದನ್ನು ಸರಿಪಡಿಸಿ ಭವಿಷ್ಯದ ಜನಾಂಗಕ್ಕೆ ಉತ್ತಮ ಪರಿಸರವನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಸ್ವಚ್ಛತೆ ಪ್ರತಿನಿತ್ಯ ನಡೆಯುವ ಪ್ರಕ್ರಿಯೆಯಾಗಬೇಕು. ನಮ್ಮ ಪರಿಸರವನ್ನು ಕಾಪಾಡಲು ಎಲ್ಲರೂ ಕೈ ಜೋಡಿಸುವಂತಾಗಬೇಕು. ರಾಮಕೃಷ್ಣ ಮಿಷನ್‌ ನಾಲ್ಕು ವರ್ಷಗಳಿಂದ ಸ್ವಚ್ಛತೆ, ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಜನಜಾಗೃತಿ ಮಾಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.

ಸ್ವಚ್ಛತೆ ನಮ್ಮ ಜೀವನದ ಭಾಗವಾಗಲಿ
ಅನಿಲ್‌ ಲೋಬೋ ಮಾತನಾಡಿ, ಸ್ವಚ್ಛತೆ ನಮ್ಮ ಜೀವನದ ಭಾಗವಾಗಬೇಕು. ಹೇಗೆ ನಮ್ಮ ದೇಹವನ್ನು ನಿತ್ಯವೂ ಶುಚಿ ಮಾಡುತ್ತೇವೆಯೋ ಹಾಗೆ ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ನನ್ನ ಮನೆ, ನನ್ನ ಪರಿಸರ, ನನ್ನ ಊರು ಎನ್ನುವ ಭಾವ ನಮ್ಮಲ್ಲಿ ಬರಬೇಕು. ಇಂತಹ ಭಾವವನ್ನು ಜಾಗೃತಿಗೊಳಿಸುವಲ್ಲಿ ಇಂತಹ ಶ್ರಮದಾನಗಳು ಸಹಾಯಕಾರಿ ಎಂದು ತಿಳಿಸಿ ಶುಭ ಹಾರೈಸಿದರು. ವಂ| ಅರುಣ ಲೋಬೋ, ವಂ| ಜೊಸ್ವಿನ್‌ ಪ್ರವೀಣ್‌, ಕುದ್ರೋಳಿ ಗಣೇಶ್‌, ಪ್ಯಾಟ್ರಿಕ್‌ ಡಿ’ಸೋಜಾ, ಮನೋಹರ್‌ ಶೆಟ್ಟಿ, ಲಿಜಿ ಪಿಂಟೋ, ರಾಧಾಕೃಷ್ಣ ಪಡೀಲ್‌, ಪ್ರೊ| ಫ್ರಾನ್ಸಿಸ್‌ ಕ್ರಾಸ್ತಾ ಉಪಸ್ಥಿತರಿದ್ದರು.

ಶ್ರಮದಾನ
ಮೊದಲಾಗಿ ಸ್ವಚ್ಛ  ಎಕ್ಕೂರು ಕಾರ್ಯಕರ್ತರು ಗೋರಿಗುಡ್ಡೆಯಲ್ಲಿರುವ ಸ್ಮಶಾನದ ಮುಂಭಾಗದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿದರು. ಅಲ್ಲಿದ್ದ ಕಲ್ಲು ಮಣ್ಣುಗಳ ರಾಶಿಯನ್ನು ಜೇಸಿಬಿ ಬಳಸಿ ತೆಗೆಯಲಾಯಿತು. ಜತೆಗೆ ತ್ಯಾಜ್ಯಗಳಿಂದ ತುಂಬಿದ್ದ ತೋಡುಗಳನ್ನು ಸ್ವಚ್ಛಗೊಳಿಸಲಾಯಿತು. ಇದೀಗ ಅಲ್ಲಿಯ ಇಡೀ ಜಾಗದಲ್ಲಿ ಹೂಕುಂಡಗಳನ್ನಿಟ್ಟು ಆಕರ್ಷಣೀಯಗೊಳಿಸಲಾಗಿದೆ. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಡಾ| ಧನೇಶ್‌ ಕುಮಾರ ನೇತೃತ್ವದಲ್ಲಿ ವೆಲೆನ್ಸಿಯಾ ಚರ್ಚ್‌ ಬದಿಯ ರಸ್ತೆ, ಪಾದಚಾರಿ ಮಾರ್ಗಗಳನ್ನು ಹಸನು ಮಾಡಿದರು. ಸಂದೀಪ್‌ ಕೋಡಿಕಲ್‌, ಕಾರ್ಯಕರ್ತರು ವೆಲೆನ್ಸಿಯಾ ಸರ್ಕಲ್‌ ಬಳಿಯಿದ್ದ ತ್ಯಾಜ್ಯರಾಶಿಯನ್ನು ಸ್ವಚ್ಛಗೊಳಿಸಿದರು. ಬಳಿಕ ಅಲ್ಲಿ ಮಣ್ಣು ಹಾಕಿ ಹೂಗಿಡಗಳನ್ನಿಟ್ಟು ಮತ್ತೆ ಅಲ್ಲಿ ಯಾರೂ ಕಸ ಹಾಕದಂತೆ ಜಾಗವನ್ನು ಸುಂದರಗೊಳಿಸಿದರು. ಅದೇ ರೀತಿ ಗೋರಿಗುಡ್ಡ ನಾಲ್ಕನೇ ಅಡ್ಡ ರಸ್ತೆಯಲ್ಲಿದ್ದ ಕಲ್ಲುಗಳನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಉಳಿದಂತೆ ಆಶ್ರಮದ ಹಿರಿಯ ಸ್ವಯಂಸೇವಕರು ಗೋರಿಗುಡ್ಡ ರಸ್ತೆಯಲ್ಲಿ ಶ್ರಮದಾನ ಮಾಡಿದರು. ಪ್ರಮುಖರಾದ ದಿಲ್‌ರಾಜ್‌ ಆಳ್ವ ಶ್ರಮದಾನದ ನೇತೃತ್ವ ವಹಿಸಿದ್ದರು.

ಮನೆ ಮನೆ ಭೇಟಿ
ಸೂಟರ ಪೇಟೆ, ಗೋರಿಗುಡ್ಡ ಮತ್ತು ವೆಲೆನ್ಸಿ ಯಾ ಪರಿಸರದ ಆಯ್ದ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಸ್ವಚ್ಛತಾ ಜಾಗೃತಿ ಮಾಡಲಾಯಿತು. ಎರಡು ತಂಡಗಳಲ್ಲಿ ಒಟ್ಟು 300 ಮನೆಗಳನ್ನು ಸಂಪರ್ಕಿಸಲಾಯಿತು. ಅನಿರುದ್ಧ ನಾಯಕ್‌, ಸುರೇಶ್‌ ಶೆಟ್ಟಿ ಸ್ವಯಂ ಸೇವಕರನ್ನು ಮಾರ್ಗದರ್ಶಿಸಿದರು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಸೂಕ್ತವಾಗಿ ವಿಲೇವಾರಿ ಮಾಡುವಂತೆ ವಿನಂತಿಸಲಾಯಿತು. 

ಸ್ವಚ್ಛ  ಸೋಚ್‌ ವಿಚಾರ ಸಂಕಿರಣಗಳು
ಈ ಬಾರಿ ಕೊನೆಯ ಹಂತದಲ್ಲಿ ಒಟ್ಟು ಏಳು ಕಾಲೇಜುಗಳಲ್ಲಿ ಸೆಮಿನಾರ್‌ಗಳನ್ನು ಆಯೋಜಿಸಲಾಯಿತು. ಕಳೆದ ವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಲಯ ಉಜಿರೆ, ನಿಟ್ಟೆ ಫಿಸಿಯೋಥೆರಪಿ ಕಾಲೇಜು ದೇರಳಕಟ್ಟೆ, ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀಧ.ಮ. ಐಐಟಿ ಕಾಲೇಜು ವೇಣೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಕಾರ್ಮೆಲ್‌ ಪದವಿ ಕಾಲೇಜು ಬಂಟ್ವಾಳ ಹಾಗೂ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಸೆಮಿನಾರಗಳನ್ನು ಹಮ್ಮಿಕೊಳ್ಳಲಾಯಿತು. ಈ ಗೋಷ್ಠಿಗಳು ಸ್ವಚ್ಛತೆಗೆ ಸಂಬಂಧಿಸಿದ ಭಾಷಣ, ಚರ್ಚೆ, ಪ್ರತಿಜ್ಞಾ ವಿಧಿ ಹಾಗೂ ಹಸಿಕಸ ಒಣಕಸದ ನಿರ್ವಹಣೆ ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿದ್ದವು. ಶ್ರೀಲತಾ ಯು, ಎ, ಪ್ರೋ. ಶೇಷಪ್ಪ ಅಮೀನ್‌, ನಿವೇದಿತಾ ಕಾಮತ್‌, ಸರಿತಾ ಶೆಟ್ಟಿ, ಹಾಗೂ ಗೋಪಿನಾಥ್‌ ರಾವ್‌ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿದ್ದರು. ಸ್ವತ್ಛ ಸೋಚ್‌ ಅಭಿಯಾನದ ಪ್ರಧಾನ ಸಂಯೋಜಕ ರಂಜನ್‌ ಬೆಳ್ಳರ್ಪಾಡಿ ಕಾರ್ಯಕ್ರಮಗಳನೇತೃತ್ವ ವಹಿಸಿದ್ದರು. ಇಲ್ಲಿಯ ತನಕ ಒಟ್ಟು 48 ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳು ಜರುಗಿದವು. ಎಂ.ಆರ್‌.ಪಿ.ಎಲ್‌. ಸಂಸ್ಥೆ ಈ ಅಭಿಯಾನಗಳಿಗೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

ಮಾರ್ಗಸೂಚಕ ಫಲಕಗಳ ನವೀಕರಣ
ನಗರದ ಅನೇಕ ಕಡೆಗಳಲ್ಲಿ ಮಾರ್ಗಸೂಚಕ ಫಲಕಗಳ ಬಣ್ಣ ಮಾಸಿಹೋಗಿ ದಾರಿಹೋಕರಿಗೆ ಸರಿಯಾಗಿ ಹೆಸರುಗಳು ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಅಂತಹ ಬೋರ್ಡ್‌ಗಳನ್ನು ನವೀಕರಿಸಲಾಗುತ್ತಿದೆ. ಇಂದು ವೆಲೆನ್ಸಿಯಾ ಬಲ 2ನೇ ಅಡ್ಡರಸ್ತೆ, ಗೋರಿಗುಡ್ಡ ಬಲ 2ನೇ ಅಡ್ಡರಸ್ತೆ, ಗೋರಿಗುಡ್ಡ ಬಲ 4ನೇ ಅಡ್ಡರಸ್ತೆ ಹೀಗೆ ಮೂರು ನಾಮ ಫಲಕಗಳನ್ನು ನವೀಕರಿಸಲಾಗಿದೆ. ಆಸನಗಳ ಅಳವಡಿಕೆ ಹಲವು ವಾರಗಳಿಂದ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದೂ ಕೂಡ ಉದಯ ಕೆ.ಪಿ., ಲೋಕೇಶ್‌ ಕೊಟ್ಟಾರ ಸಹಿತ ಹಲವು ಜನ ಸ್ವಯಂ ಸೇವಕರು ಅಲ್ಲಿ ಶ್ರಮದಾನ ಮಾಡಿದರು. ಈ ವಾರ ಕುಳಿತುಕೊಳ್ಳುವ ಆಸನಗಳನ್ನು ಅಲ್ಲಿ ಅಳವಡಿಸಿ ಅದಕ್ಕೆ ಬಣ್ಣ ಬಳಿದು ಚೆಂದಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರು.

ಟಾಪ್ ನ್ಯೂಸ್

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.