ಸ್ವಚ್ಛ ಸರ್ವೇಕ್ಷಣ ಸ್ಪರ್ಧೆ: ಇಂದು ಮಂಗಳೂರಿಗೆ ಕೇಂದ್ರ ಸಮೀಕ್ಷೆ ತಂಡ
Team Udayavani, Apr 1, 2022, 11:39 AM IST
ಲಾಲ್‌ಬಾಗ್: ದೇಶಾದ್ಯಂತ ನಗರ ಸ್ವಚ್ಛತೆ ಪರಿಕಲ್ಪನೆ ಯಲ್ಲಿ ನಡೆಯಲಿರುವ ನಗರದ ‘ಸ್ವಚ್ಛ ಸರ್ವೇಕ್ಷಣ-2022’ಕ್ಕೆ ಮಂಗಳೂರು ನಗರ ಸ್ಪರ್ಧಿಸುತ್ತಿದ್ದು, ಎ. 1ರಿಂದ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲ ಯದ ಸಮೀಕ್ಷೆ ತಂಡ ಮಂಗಳೂರಿನಲ್ಲಿ ಮಹತ್ವದ ಸಮೀಕ್ಷೆ ಆರಂಭಿಸುವ ಸಾಧ್ಯತೆಯಿದೆ.
ಈ ಬಾರಿಯ ಸ್ವತ್ಛ ಸರ್ವೇಕ್ಷಣ 2022ರಲ್ಲಿ 3ರಿಂದ 10 ಲಕ್ಷದ ಜನ ಸಂಖ್ಯೆಯುಳ್ಳ ದೇಶದ ಸುಮಾರು 99 ನಗರ ಸ್ಥಳೀಯ ಸಂಸ್ಥೆಗಳು ಪಾಲ್ಗೊ ಳ್ಳಲಿದೆ. ಅದರಲ್ಲಿ ಮಂಗಳೂರು ಪಾಲಿಕೆ ಕೂಡ ಒಂದು. ಕೇಂದ್ರ ಸಮೀಕ್ಷೆ ತಂಡದಲ್ಲಿ ಇಲಾ ಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ವತ್ಛತ ಪರಿಕಲ್ಪನೆಯ ಜಾರಿಯಲ್ಲಿ ತಜ್ಞರು ಭಾಗವಹಿಸಲಿದ್ದಾರೆ. ಮುಂದಿನ 2-3 ದಿನದವರೆಗೆ ತಂಡವು ನಗರದ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಸ್ಥಳ ಭೇಟಿ ನಿಗೂಢ!
ಸಮೀಕ್ಷೆ ತಂಡ ಭೇಟಿ ನೀಡುವ ಸ್ಥಳ ಯಾವುದು? ಎಂಬ ಬಗ್ಗೆ ಮಂಗ ಳೂರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ. ಸಮೀಕ್ಷೆ ತಂಡ ಕೂಡ ನಗರಕ್ಕೆ ಆಗಮಿಸುವವರೆಗೆ ಮಂಗಳೂರಿನ ಯಾವ ಪ್ರದೇಶಕ್ಕೆ ಭೇಟಿ ನೀಡಬೇಕು ಎಂಬ ಬಗ್ಗೆ ಮಾಹಿತಿ ಹೊಂದಿರುವುದಿಲ್ಲ. ತಂಡ ದವರು ಮಂಗಳೂರಿನಲ್ಲಿ ಲಾಗಿನ್ ಆದ ಬಳಿಕವಷ್ಟೇ ಸ್ಥಳದ ಬಗ್ಗೆ ಗೊತ್ತಾಗಲಿದೆ. ಆ ಅನಂತರವಷ್ಟೇ ಪಾಲಿಕೆಗೆ ಮಾಹಿತಿ ಸಿಗಲಿದೆ. ನಗರದ ದತ್ತಾಂಶ, ಇಲ್ಲಿನ ಅಭಿವೃದ್ಧಿ ಸಹಿತ ವಿವಿಧ ವಿಚಾರಗಳನ್ನು ಪಾಲಿಕೆ ಅಪ್ ಲೋಡ್ ಮಾಡಿದೆ. ಅದರಂತೆ ತಂಡ ಪರಿಶೀಲಿಸಲಿದೆ.
ಕಳೆದ ವರ್ಷ ರಾಜ್ಯದಲಿ 9ನೇ ರ್‍ಯಾಂಕ್
ಕೇಂದ್ರ ವಸತಿ ಮತ್ತು ನಗರ ವ್ಯವ ಹಾರಗಳ ಸಚಿವಾಲಯವು ಸ್ಥಳೀಯ ಸಂಸ್ಥೆಗಳಿಗೆ ಪ್ರತೀ ವರ್ಷ ಸ್ವತ್ಛ ಸರ್ವೇಕ್ಷಣ ಅಭಿಯಾನ ನಡೆಸುತ್ತದೆ. 2018-19ರಲ್ಲಿ ನಡೆಸಲಾದ ಅಭಿಯಾನದಲ್ಲಿ 3ರಿಂದ 10 ಲಕ್ಷದವರೆಗಿನ ಜನಸಂಖ್ಯೆಯ ವಿಭಾಗದಲ್ಲಿ ಮಂಗಳೂರು ಘನ ತ್ಯಾಜ್ಯ ನಿರ್ವಹಣೆಯಲ್ಲಿ “ಅತ್ಯುತ್ತಮ ಮಧ್ಯಮ ನಗರ’ ಎಂಬ ಹೆಗ್ಗಳಿಕೆ ಪಾತ್ರವಾಗಿ ಐದನೇ ಸ್ಥಾನ ಪಡೆದಿತ್ತು. ಇತರ ನಗರಕ್ಕೆ ಹೋಲಿಕೆ ಮಾಡಿದರೆ ಇಲ್ಲಿ ಘನ ತ್ಯಾಜ್ಯ ನಿರ್ವಹಣೆ ಅತ್ಯುತ್ತಮವಾಗಿತ್ತು ಎಂದು ಉಲ್ಲೇಖ ಮಾಡಲಾಗಿತ್ತು. 2019ರಲ್ಲಿ ಪಚ್ಚನಾಡಿ ತ್ಯಾಜ್ಯ ದುರಂತದ ಬಳಿಕ ಸ್ವತ್ಛತೆ ವಿಚಾರದಲ್ಲಿ ಪಾಲಿಕೆಗೆ ದೊಡ್ಡ ಹಿನ್ನಡೆ ಉಂಟಾಗಿತ್ತು. ಹಾಗಾಗಿ 2019-20ನೇ ಸಾಲಿನ ಅಭಿಯಾನದಲ್ಲಿ ಪಾಲಿಕೆ ಸ್ಪರ್ಧೆ ಮಾಡಿರಲಿಲ್ಲ. 2020-21ನೇ ಸಾಲಿನಲ್ಲಿ ಸ್ಪರ್ಧೆಗಿಳಿದು ರಾಜ್ಯದಲ್ಲಿ 9ನೇ ರ್‍ಯಾಂಕ್ ಗಳಿಸಿತ್ತು.
ಸ್ವಚ್ಛ ಸರ್ವೇಕ್ಷಣದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಿ
ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕಾಗಿ ಮಂಗಳೂರು ಪಾಲಿಕೆಯು ಈ ಬಾರಿ ಸ್ಪರ್ಧೆಯಲ್ಲಿದೆ. ಸಮೀಕ್ಷೆ ತಂಡ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ಸ್ಪರ್ಧೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹುಮುಖ್ಯ. ಸಾಮಾಜಿಕ ಜಾಲತಾಣ ಸಹಿತ ಡಿಜಿಟಲ್ ಮಾಧ್ಯಮದಲ್ಲಿ ಸ್ವಚ್ಛತಾ ಕಾರ್ಯಕ್ರಮದ ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಪ್ರಾಯ ತಿಳಿಸಬಹುದು. ಇದರಿಂದಾಗಿ ನಗರದ ಸ್ವತ್ಛ ಸರ್ವೇಕ್ಷಣೆ ಸ್ಪರ್ಧೆಗೆ ಹೆಚ್ಚು ಬಲ ದೊರೆಯಲಿದೆ. – ಅಕ್ಷಯ್ ಶ್ರೀಧರ್, ಆಯುಕ್ತರು, ಮಹಾನಗರ ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.