“ಬಯಲು ಕಸ ಮುಕ್ತ ಪ್ರದೇಶವನ್ನಾಗಿಸಲು ಸಹಕಾರ ಅಗತ್ಯ’
Team Udayavani, Jun 5, 2019, 6:00 AM IST
ಉಳ್ಳಾಲ: ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾ. ಪಂ. ವಠಾರದಲ್ಲಿ ಪ್ಲಾಸ್ಟಿಕ್ ಮತ್ತು ಇತರ ಘನ ತ್ಯಾಜ್ಯಗಳನ್ನು ಹೆಕ್ಕಿ, ವಿಂಗಡಿಸಿ, ಪ್ಲಾಸ್ಟಿಕ್ ಸಂಪನ್ಮೂಲ(ತ್ಯಾಜ್ಯ) ಕೇಂದ್ರದಲ್ಲಿ ಸಂಗ್ರಹಿಸಿಡುವ ಶ್ರಮದಾನ ನಡೆಯಿತು.
ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿ ಜೂ. 5ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಗೆ ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿ ವಠಾರ ಮತ್ತು ಪಂಚಾಯತ್‌ಗೆ ಸೇರಿದ 10 ಎಕ್ರೆ ಪ್ರದೇಶವನ್ನು ಬಯಲು ಕಸ ಮುಕ್ತ ಪ್ರದೇಶವನ್ನಾಗಿಸಿ ಆ ಮೂಲಕ ಗ್ರಾಮದ ಎಲ್ಲ ಮನೆ, ಶಾಲೆ, ಅಂಗನ ವಾಡಿ ಮತ್ತಿತರ ಸಾರ್ವಜನಿಕ ಪ್ರದೇಶ ವನ್ನು ತ್ಯಾಜ್ಯ ಮುಕ್ತಗೊಳಿಸಲು ಪಂಚಾ ಯತ್‌ನೊಂದಿಗೆ ನಾಗರೀಕರು ಕೈ ಜೋಡಿ ಸಬೇಕು ಎಂದರು.
ಸ್ವಚ್ಛ ಶುದ್ಧ ಪ್ಲಾಸ್ಟಿಕ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಗ್ರಾಮಸ್ಥರು ಸ್ವತ್ಛ ಶುದ್ಧ ಪ್ಲಾಸ್ಟಿಕ್‌ನ್ನು ನೀಡಿ ಸಮರ್ಪಕ ನಿರ್ವಹಣೆಗೆ ಸಹಕರಿಸಬೇಕು ಎಂದರು. ಕಾರ್ಯದರ್ಶಿ ರುಕ್ಮಯದಾಸ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣಮೂಲ್ಯ, ಸಿಬಂದಿ ಸದಾನಂದ, ಪ್ರೇರಕಿ ಜಯಾ, ಬೆಳ್ಳಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಅಶ್ವಿನಿ, ಅಂಜಲಿ, ಘನ ತ್ಯಾಜ್ಯ ವ್ಯಾಪಾರಿ ಇಸ್ಮಾಯಿಲ್ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.