ನೇತ್ರಾವತಿ ನದಿ ಪಕ್ಕ ಮುರಿದು ಬಿದ್ದ ಪಾದಚಾರಿ ಸೇತುವೆ
ಉಳ್ಳಾಲ ಹೊಗೆ ಪ್ರದೇಶಕ್ಕೆ ಸುತ್ತು ಬಳಸಿ ಪಯಣ
Team Udayavani, Jun 16, 2023, 3:46 PM IST
ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ನೇತ್ರಾವತಿ ಸೇತುವೆ ಸಮೀಪದಿಂದ ಉಳ್ಳಾಲ ಜಪ್ಪಿನಮೊಗರುವಿನ ಹೊಗೆ ಪ್ರದೇಶಕ್ಕೆ ಸುಲಭ ಸಂಪರ್ಕದ ನದಿ ಬದಿಯ ಪಾದಚಾರಿ ಸೇತುವೆ ತುಂಡಾಗಿ ಬಿದ್ದು ಜನರು ಸುತ್ತಿ ಬಳಸಿ ಸಂಚರಿಸಬೇಕಾದ ಸಂಕಷ್ಟ ಎದುರಾಗಿದೆ.
ತೊಕ್ಕೊಟ್ಟು ಭಾಗದಿಂದ ಮಂಗಳೂರು ಕಡೆಗೆ ಬರುವಾಗ ನೇತ್ರಾವತಿ ಸೇತುವೆ ಆರಂಭವಾಗುವಾಗ ಎಡಭಾಗದಲ್ಲಿರುವ ಹಾದಿಯಲ್ಲಿ (ನೇತ್ರಾವತಿ ನದಿಯ ಬದಿಯಲ್ಲಿ) ಸುಮಾರು 700 ಮೀ.ನಷ್ಟು ಸಾಗಿದರೆ ಹೊಗೆ ಪ್ರದೇಶಕ್ಕೆ ತೆರಳಲು ಸಾಧ್ಯವಿದೆ. ನಿತ್ಯ ನೂರಾರು ಮಂದಿ ಇದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಇಲ್ಲಿನ ಜನರು ವಾಹನದಲ್ಲಿ ಹೋಗಬೇಕಾದರೆ ಹೊಗೆ ಪ್ರದೇಶದಿಂದ ತೊಕ್ಕೊಟ್ಟು ಒಳಪೇಟೆಯಾಗಿ ಆಗಮಿಸಿ ಬರಬೇಕಾಗುತ್ತದೆ; ಸುಮಾರು 6 ಕಿ.ಮೀ. ಸಂಚರಿಸಬೇಕು. ಪಾಲಿಕೆ ವ್ಯಾಪ್ತಿಗೆ ಬರುವ ಜಪ್ಪಿನಮೊಗರಿನ ಹೊಗೆ ಪ್ರದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶದ ಜನರು ಹೆದ್ದಾರಿಗೆ ಬಂದರೆ ಹಲವು ಬಸ್‌ಗಳು ಸಿಗುತ್ತವೆ. ಆದರೆ ಪಾದಚಾರಿ ಸೇತುವೆ ಮುರಿದು ಬಿದ್ದ ಪರಿಣಾಮ ಅವರು ತೊಕ್ಕೊಟ್ಟಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇತುವೆ ಪಿಲ್ಲರ್ ಡ್ಯಾಮೇಜ್
ಹಲವು ವರ್ಷಗಳ ಹಿಂದೆ ನಿರ್ಮಿಸಿದ ಪಾದಚಾರಿ ಸೇತುವೆ ವಿವಿಧ ಕಾರಣದಿಂದ ಸಮಸ್ಯೆ ಆಗಿ ಹಲವು ಸಂದರ್ಭದಲ್ಲಿ ರಿಪೇರಿ ಕಂಡಿತ್ತು. ಆದರೆ ಇತ್ತೀಚೆಗೆ ಉಪ್ಪು ನೀರಿನ ಕಾರಣದಿಂದ ಪಾದಚಾರಿ ಸೇತುವೆಯ ಪಿಲ್ಲರ್ ಭಾಗವೇ ಕುಸಿದು ಬಿದ್ದಿದ್ದು ರಿಪೇರಿ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಕೆಲವು ಸಮಯದಿಂದ ಸುತ್ತೂ ಬಳಸಿ ಹೋಗುತ್ತಿದ್ದಾರೆ.
ಶಾಶ್ವತ ಸೇತುವೆ ಯೋಜನೆ
ಹಲವು ವೆಲ್ಡಿಂಗ್ ಕೆಲಸ ಮಾಡುವವರನ್ನು ಕರೆಸಿ ಸೇತುವೆ ಸರಿ ಮಾಡುವ ಪ್ರಯತ್ನ ಮಾಡಲಾಯಿತಾದರೂ ಫಲ ನೀಡಿಲ್ಲ. ಬೋಟ್‌ನಲ್ಲಿ ಸಾಮಗ್ರಿಗಳನ್ನು ಕೊಂಡೊಯ್ಯಲೂ ಆಗುತ್ತಿಲ್ಲ. ಹೀಗಾಗಿ ಪ್ರಮುಖ ಪಿಲ್ಲರ್ ಕೆಲಸ ನಿರ್ವಹಿಸಲು ಸಮಸ್ಯೆ ಆಗಿದೆ. ಕುಡಿಯುವ ನೀರಿನ ಪೈಪ್‌ಲೈನ್‌ಗೂ ಇಲ್ಲಿ ಸಮಸ್ಯೆ ಆಗಿತ್ತು. ಆದರೆ ಅದನ್ನು ಇತ್ತೀಚೆಗೆ ಸರಿಪಡಿಸಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಅವರು ಸುಮಾರು 2 ಕೋಟಿ ರೂ. ವಿಶೇಷ ಅನುದಾನದಲ್ಲಿ ಹೊಗೆ ಪ್ರದೇಶಕ್ಕೆ ನೇತ್ರಾವತಿ ಸೇತುವೆ ಭಾಗದಿಂದ ರಸ್ತೆ ನಿರ್ಮಿಸಿ ಬಳಿಕ ಪಾದಚಾರಿ ಸೇತುವೆ ಇರುವ ಜಾಗದಲ್ಲಿ ವಾಹನ ಓಡಾಡುವ ಶಾಶ್ವತ ಸೇತುವೆ ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದಾರೆ ಎಂದು ಕಾರ್ಪೋರೆಟರ್ ವೀಣಾಮಂಗಳ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.