![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 28, 2019, 5:56 AM IST
ಮಹಾನಗರ: ‘ಉದಯವಾಣಿ’ಯು ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನವು ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರ್ಣಗೊಳಿಸುವ ಮೂಲಕ ಇನ್ನಷ್ಟು ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿ ಜನರಲ್ಲಿ ಜಲ ಸಾಕ್ಷರತೆಯನ್ನು ಮೂಡಿಸುವತ್ತ ಮುಂದುವರಿಯುತ್ತಿದೆ.
ನಿರಂತರ 50 ದಿನಗಳ ಕಾಲ ಮಳೆನೀರು ಸಂಗ್ರಹದ ಬಗ್ಗೆ ಜನರನ್ನು ಜಾಗೃತಗೊಳಿಸುವಲ್ಲಿ ನಮ್ಮ ಈ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಯಶಸ್ವಿಯಾಗುವ ಜತೆಗೆ ಓದುಗರು ಪತ್ರಿಕೆಯ ಆಶಯಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದಕ್ಕೆ ಇದೀಗ ಹರಿದು ಬರುತ್ತಿರುವ ಯಶೋಗಾಥೆಗಳೇ ಸಾಕ್ಷಿ. ಕೇವಲ ತಮ್ಮ ಮನೆಗಳಿಗಷ್ಟೇ ಅಲ್ಲ, ಪಕ್ಕದ ಮನೆಯವರಿಗೂ ಸ್ಫೂರ್ತಿಯಾಗುತ್ತಿರುವುದು ಜನರ ಆಸಕ್ತಿ ಹಾಗೂ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ತೋರಿಸುತ್ತಿದೆ. ಆ ಮೂಲಕ ನೀರಿಂಗಿಸುವ ಮತ್ತು ನೀರುಳಿತಾಯದ ಕ್ರಾಂತಿಗೆ ಜನರೂ ಪಾಲುದಾರರಾಗುತ್ತಿರುವುದು ಖುಷಿಯ ವಿಚಾರ. ಸಂಘ – ಸಂಸ್ಥೆಗಳು, ಚರ್ಚ್-ದೇವಸ್ಥಾನಗಳ ಕಟ್ಟಡ-ಬಾವಿಗಳಿಗೂ ಮಳೆಕೊಯ್ಲು ಅಳವಡಿಕೆ ನಡೆಯುತ್ತಿದೆ. ಈ ಅಭಿಯಾನದಿಂದ ಪ್ರೇರಣೆಗೊಂಡು ಹಲವು ಸಂಘಟನೆಗಳು ಮಳೆಕೊಯ್ಲು ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕೆ ಅಲ್ಲಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಿವೆ.
ಉದ್ಯೋಗ ಮೇಳದಲ್ಲಿ ಮಳೆಕೊಯ್ಲು
ಶ್ರೀನಿವಾಸ ವಿಶ್ವ ವಿದ್ಯಾನಿಲಯ ಹಾಗೂ ಶ್ರೀನಿವಾಸ ಸಮೂಹ ಸಂಸ್ಥೆಗಳ ವತಿಯಿಂದ ಪಾಂಡೇಶ್ವರದಲ್ಲಿರುವ ಸಿಟಿ ಕ್ಯಾಂಪಸ್‌ನಲ್ಲಿ ನಡೆದ ‘ಉದ್ಯೋಗ ಮೇಳ’ದಲ್ಲಿ ನಿರ್ಮಿತಿ ಕೇಂದ್ರ ಮತ್ತು ‘ಉದಯವಾಣಿ’ ಸಹಯೋಗದಲ್ಲಿ ಮಳೆ ನೀರು ಕೊಯ್ಲು ಮಾಹಿತಿ ಕೇಂದ್ರ ತೆರೆಯಲಾಗಿತ್ತು. ಮೇಳಕ್ಕೆ ಯುವಜನತೆ ಬರುವುದರಿಂದ ಅವರಲ್ಲಿ ಮಳೆಕೊಯ್ಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕೇಂದ್ರ ತೆರೆಯಲಾಗಿತ್ತು. ಸುಮಾರು 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಬಹುತೇಕರು ಮಳೆಕೊಯ್ಲು ಮಾಹಿತಿ ಕೇಂದ್ರಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಮಳೆಕೊಯ್ಲು ಅಳವಡಿಕೆಯ ವಿಧಾನಗಳ ಕುರಿತಂತೆ ನಿರ್ಮಿತಿ ಕೇಂದ್ರದವರು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಮಳೆಕೊಯ್ಲು ಅಳವಡಿಸುವ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಜತೆಗೆ ಕೆಲವರು ಅದನ್ನು ಮನೆಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸ್ಥಳದಲ್ಲೇ ಹೆಸರು ಕೂಡ ನೋಂದಣಿ ಮಾಡಿಕೊಡಿಸಿಕೊಂಡಿದ್ದಾರೆ.
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
ಚರ್ಚ್‌ನಲ್ಲಿ ಇಂದು ಮಳೆಕೊಯ್ಲು ಮಾಹಿತಿ
ಜೆಪ್ಪು ಸಿಎಸ್‌ಐ ಕಾಂತಿ ದೇವಾಲಯ ಮತ್ತು ‘ಉದಯವಾಣಿ’ ಸಹಯೋಗದೊಂದಿಗೆ ಮಳೆಕೊಯ್ಲು ಕುರಿತಾದ ವಿಶೇಷ ಮಾಹಿತಿ, ಪ್ರಾತ್ಯಕ್ಷಿಕೆ ಜು. 28ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಳೆಕೊಯ್ಲು ಕುರಿತು ಮಾಹಿತಿ ನೀಡಲಿದ್ದಾರೆ. ಸಿಎಸ್‌ಐ ಕಾಂತಿ ದೇವಾಲಯದ ಸೆಂಟನರಿ ಹಾಲ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಆಟಿ ಕೂಟದಲ್ಲಿ ಮಳೆಕೊಯ್ಲು
ಪದ್ಮಶಾಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ವತಿಯಿಂದ ಬೋಳೂರು ಮಠದಕಣಿ ರಸ್ತೆ ವೀರಭದ್ರನಗರದಲ್ಲಿ ಜು. 28ರಂದು ನಡೆಯುವ ‘ಆಟಿಡೊಂಜಿ ಎಂಕ್ಲೆನ ಐತಾರ’ ಕಾರ್ಯಕ್ರಮದಲ್ಲಿ ಮಳೆಕೊಯ್ಲು ಕುರಿತು ಮಾಹಿತಿ ವಿನಿಮಯ ನಡೆಯಲಿದೆ. ‘ಉದಯವಾಣಿ’ಯ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಳೆಕೊಯ್ಲು ಅಭಿಯಾನಕ್ಕೆ ಓದುಗರ ಸ್ಪಂದನೆ
ಅಭಿನಂದನೀಯ ಕಾರ್ಯ
‘ಉದಯವಾಣಿ’ಯ ಸಾಮಾಜಿಕ ಕಳಕಳಿ ಅಭಿನಂದನೀಯವಾಗಿದೆ ಈ ಅಭಿಯಾನವು ಹೀಗೆ ಮುಂದುವರಿಯಲಿ ಹಾಗೂ ಹಲವಾರು ಸಂಘ-ಸಂಸ್ಥೆಗಳು ಮುಂದೆ ಬಂದು ‘ಮನೆ ಮನೆಗೆ ಮಳೆಕೊಯ್ಲ’ ಅಭಿಯಾನ ಯಶಸ್ವಿಗೊಳಿಸೋಣ. ಪ್ರೇರಣೆ ಒದಗಿಸಿಕೊಟ್ಟ ಪತ್ರಿಕೆಯ ಕ್ರಮ ಶ್ಲಾಘನೀಯವಾಗಿದೆ.
-ದೀಪಕ್ ಶೆಟ್ಟಿ, ಕಾಟಿಪಳ್ಳ-ಕೃಷ್ಣಾಪುರ
ಮತ್ತಷ್ಟು ದಿನ ಮುಂದುವರಿಯಲಿ
‘ಉದಯವಾಣಿ ಸುದಿನ’ ಪ್ರಕಟಿಸುತ್ತಿರುವ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಮತ್ತಷ್ಟು ದಿನಗಳ ಕಾಲ ಮುಂದುವರಿಯಲಿ. ಮಳೆಕೊಯ್ಲು ವ್ಯವಸ್ಥೆಯನ್ನು ಮನೆ ಮನೆಗಳಲ್ಲಿ ಅಳವಡಿಕೆ ಮಾಡುವುದಲ್ಲದೆ, ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿಯೂ ಜಾಗೃತಿ ಮೂಡಿಸುವುದು ಅನಿವಾರ್ಯ. ಧಾರ್ಮಿಕ ಕೇಂದ್ರಗಳಲ್ಲಿ ನೀರಿನ ಬಳಕೆ ಹೆಚ್ಚು ಇರುವುದರಿಂದ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದು.
-ಮಹಮ್ಮದ್ ಇಸ್ಮಾಯಿಲ್,ನೋಟರಿ ಸುರತ್ಕಲ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.