![Kharge (2)](https://www.udayavani.com/wp-content/uploads/2024/12/Kharge-2-1-415x240.jpg)
ಯಕ್ಷಗಾನ ಜ್ಞಾನಪದ ಕಲೆ: ಆಸ್ರಣ್ಣ
Team Udayavani, Nov 10, 2018, 12:35 PM IST
![10-november-9.gif](https://www.udayavani.com/wp-content/uploads/2018/11/10/10-november-9-620x299.gif)
ಮಂಗಳೂರು: ಯಕ್ಷಗಾನವು ಜಾನಪದ ಕಲೆಯೂ ಹೌದು ಜ್ಞಾನಪದ ಕಲೆಯೂ ಹೌದು. ಯಾಕೆಂದರೆ ಯಕ್ಷಗಾನವು ಆನಂದದ ಜತೆ ಜ್ಞಾನವನ್ನೂ ಕೊಡುತ್ತದೆ. ಆದ್ದರಿಂದ ಜ್ಞಾನಾನಂದ ನೀಡುವ ಯಕ್ಷಗಾನವನ್ನು ಜ್ಞಾನಪದ ಕಲೆ ಎನ್ನಬಹುದು ಎಂದು ಕಟೀಲು ದೇಗುಲದ ಅರ್ಚಕ ಕಮಲಾದೇವಿ ಆಸ್ರಣ್ಣ ಹೇಳಿದ್ದಾರೆ. ಸೋಮವಾರ ಶ್ರೀಕೃಷ್ಣ ಯಕ್ಷ ಸಭಾ ಮಂಗಳೂರು ವತಿಯಿಂದ ಕುಡುಪು ಅನಂತಪದ್ಮನಾಭ ದೇವಸ್ಥಾನದ ಆಶ್ರಯದಲ್ಲಿ 17ನೇ ವರ್ಷದ ಯಕ್ಷಗಾನ ಸಪ್ತಾಹದ ಸಮಾರೋಪದಲ್ಲಿ ಅವರು ಮಾತನಾಡಿದರು.
ದೇವಸ್ಥಾನದ ಅರ್ಚಕ ಸಂಜೀವ ಭಟ್ ಕುಡುಪು ಮಾತಾಡಿ, ದೇವಸ್ಥಾನಗಳಲ್ಲಿ ಯಕ್ಷಗಾನವನ್ನು ಆಯೋಜಿಸುವುದರಿಂದ ಕಲೆ ಇನ್ನಷ್ಟು ಬೆಳಗುತ್ತದೆ. ಕ್ಷೇತ್ರವೂ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು. ಬ್ರಹ್ಮಕಲಶ ಸಮಿತಿಯ ಸುದರ್ಶನ ಕುಡುಪು ಮಾತಾಡಿ, ಕುಡುಪಿನಲ್ಲಿ ಯಕ್ಷಗಾನವು ಉತ್ತಮವಾಗಿ ಮೂಡಿಬಂದಿದೆ. ಕಡಿಮೆ ವಿದ್ಯೆ ಇದ್ದವರೂ ಯಕ್ಷಗಾನದಲ್ಲಿ ಉತ್ತಮ ಕಲಾವಿದರಾಗಿ ಮೆರೆಯುವುದು ಯಕ್ಷಗಾನದ ಹೆಚ್ಚುಗಾರಿಕೆ. ಯಕ್ಷಗಾನದ ಉಡುಗೆ ತೊಡುಗೆ ಯನ್ನು ಮ್ಯೂಸಿಯಂನಲ್ಲಿ ನೋಡುವಂತಾಗಿರದೆ ಈ ಕಲೆ ಇನ್ನಷ್ಟು ಬೆಳಗಲಿ ಎಂದು ಆಶಿಸಿದರು. ಯಕ್ಷಗಾನ ಕಲಾವಿದ ಎಡನೀರು ಹರಿನಾರಾಯಣ ಭಟ್ ಅವರನ್ನು ಕಮಲಾದೇವಿ ಆಸ್ರಣ್ಣ ಅವರು ಸಮ್ಮಾನಿಸಿದರು.
ಸುಜನ್‌ದಾಸ್ ಕುಡುಪು, ಹರಿಕೃಷ್ಣ ಪುನರೂರು, ಇಸ್ಕಾನ್‌ನ ಕಾರುಣ್ಯ ಸಾಗರ್ ಸ್ವಾಮಿ, ಪದ್ಮನಾಭ ಕೋಟ್ಯಾನ್, ಬಾಲಕೃಷ್ಣ ಭಟ್, ಕುಡುಪು ಸಂಜೀವ ಭಟ್, ಜತ್ತಪ್ಪ ಆಳ್ವ, ಹರಿರಾವ್ ಕೈಕಂಬ, ಕೆ.ಎಸ್. ಕಲ್ಲೂರಾಯ, ಜಯಂತ್ ಭಟ್, ಕಿಶೋರ್ ಶೆಟ್ಟಿ, ಗೋಪಾಲ ಕೃಷ್ಣ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ಕುಡುಪು ಸಮ್ಮಾನ ಪತ್ರ ವಾಚಿಸಿ ನೆರವಾದ ಎಲ್ಲರನ್ನೂ ಸ್ಮರಿಸಿ, ವಂದಿಸಿದರು. ಸುಧಾಕರ ರಾವ್ ಪೇಜಾವರ ಅವರು ಸ್ವಾಗತಿಸಿದರು. ನರಕಾಸುರ ಮೋಕ್ಷ- ಗರುಡ ಗರ್ವಭಂಗ ಎನ್ನುವ ಯಕ್ಷಗಾನ ನಡೆಯಿತು.
ಟಾಪ್ ನ್ಯೂಸ್
![Kharge (2)](https://www.udayavani.com/wp-content/uploads/2024/12/Kharge-2-1-415x240.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.