Mangaluru: ತಣ್ಣೀರುಬಾವಿ-ಸುಲ್ತಾನ್‌ಬತ್ತೇರಿ ಮಧ್ಯೆ ಕಾಂಕ್ರೀಟ್ ಸೇತುವೆ
ತೂಗುಸೇತುವೆ ಯೋಜನೆ ರದ್ದು , ವಾಹನ ಸಂಚಾರಕ್ಕೂ ಪೂರಕ; ಸೇತುವೆ 2 ದಶಕಗಳ ಹಿಂದಿನ ಕನಸು; ಸೇತುವೆ ಉದ್ದ 480 ಮೀ.
Team Udayavani, Aug 5, 2024, 5:27 PM IST
ಮಹಾನಗರ: ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ಜೊತೆ ಸ್ಥಳೀಯರ ಸಂಪರ್ಕಕ್ಕೂ ಮಹತ್ವದ ಕೊಡುಗೆ ನೀಡುವ ಉದ್ದೇಶದಲ್ಲಿ ಸುಲ್ತಾನ್ ಬತ್ತೇರಿ- ತಣ್ಣೀರುಬಾವಿ ಮಧ್ಯೆ ಫಲ್ಗುಣಿ ನದಿಗೆ ಅಡ್ಡಲಾಗಿ ಕಾಂಕ್ರೀಟ್ ಸೇತುವೆ ನಿರ್ಮಿಸು ವುದಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಮುಂದಾಗಿದೆ.
ಈ ಹಿಂದೆ ಇಲ್ಲಿ ತೂಗು ಸೇತುವೆ ನಿರ್ಮಿಸುವುದಕ್ಕೆಂದು ಯೋಜಿಸಲಾಗಿತ್ತು, ಆದರೆ ಸ್ಥಳೀಯರು ತೂಗುಸೇತುವೆ ಮಾಡಿ ಪ್ರಯೋಜನವಿಲ್ಲ, ಕೇವಲ ಜನರು ಕಾಲ್ನಡಿಗೆಯಲ್ಲಿ ಸಂಚರಿಸುದು ಮಾತ್ರವಲ್ಲ ವಾಹನವೂ ಸಂಚರಿಸುವಂತಹ ಅವಕಾಶ ಬೇಕು ಎಂಬ ಆಗ್ರಹ ಇರಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಇಲ್ಲಿ ಖಾಯಂ ಕಾಂಕ್ರೀಟ್ ಸೇತುವೆಯನ್ನೇ ನಿರ್ಮಿಸಲಿದೆ.
ಈ ನದಿಯಲ್ಲಿ ಮೀನುಗಾರರು ದೋಣಿಯೊಂದಿಗೆ ಸಂಚರಿಸಬೇಕಾಗಿರುವುದರಿಂದ ನದಿಯ ಹೈಟೈಡ್ ರೇಖೆಯಿಂದ 10 ಮೀಟರ್‌ನಷ್ಟು ಎತ್ತರದಲ್ಲಿರುವಂತೆ 100 ಮೀಟರ್ ಉದ್ದದ ಸೇತುವೆ ನಿರ್ಮಿ ಸಲಾಗುತ್ತದೆ. ಇವುಗಳಿಗೆ ಇಕ್ಕೆಲಗ ಳಲ್ಲೂ ತಲಾ 90 ಮೀಟರ್ ಉದ್ದದ ರ್‍ಯಾಂಪ್ ನಿರ್ಮಿಸ ಲಾಗುವುದು, ಅಲ್ಲದೆ ಇಕ್ಕೆಲಗ ಳಲ್ಲೂ ತಲಾ 100 ಮೀಟರ್ ಕೂಡು ರಸ್ತೆಯೂ ಇರಲಿದೆ. ಎಲ್ಲವೂ ಸೇರಿದಂತೆ ಸೇತುವೆ ಉದ್ದ 480 ಮೀ. ಇರಲಿದೆ.
ಇದು ಇಪಿಸಿ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಯೋಜನೆಯಾಗಿದ್ದು, ಅಂತಿಮ ನಕ್ಷೆ ಇತ್ಯಾದಿಗಳನ್ನು ಕಾಮ ಗಾರಿ ವಹಿಸಿಕೊಳ್ಳುವ ಸಂಸ್ಥೆಯವರು ರೂಪಿಸಲಿದ್ದಾರೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಶಕದ ಹಿಂದಿನ ಯೋಜನೆ
ಸುಲ್ತಾನ್‌ಬತ್ತೇರಿ – ತಣ್ಣೀರುಬಾವಿ ಸೇತುವೆ ನಿರ್ಮಾಣ ಎರಡು ದಶಕಗಳ ಹಿಂದಿನ ಕನಸು. ಆಗಿನ ಶಾಸಕ ಎನ್.ಯೋಗೀಶ್ ಭಟ್ ಅವರಿದ್ದಾಗಲೇ ಯೋಜನೆ ರೂಪಿಸಲಾಗಿತ್ತು. ಆಗ ಸೇತುವೆ ಮೇಲೆ ವಾಹನ ಸಂಚರಿಸುವ ಯೋಜನೆ ಇರಲಿಲ್ಲ, ಕೇವಲ ಪ್ರವಾಸೋದ್ಯಮಕ್ಕೆ ನೆರವಾಗುವ ಹಾಗೂ ಸ್ಥಳೀಯರಿಗೆ ನಡೆದಾಡುವುದಕ್ಕೆ ಮಾತ್ರವೇ ಅವಕಾಶ ವಿತ್ತು. 3 ಮೀಟರ್ ಅಗಲದ ಒಟ್ಟು 410 ಮೀಟರ್ ಉದ್ದದ 12 ಕೋಟಿ ರೂ.ನ ಯೋಜನೆ ಇದಾಗಿತ್ತು. 2012ರಲ್ಲಿ ಪ್ರಾರಂಭಗೊಂಡ ಈ ಯೋಜನೆಗೆ ನದಿ ಪಾತ್ರದಲ್ಲಿ ಪೈಲಿಂಗ್ ಕೆಲಸ ನಡೆದಿದ್ದು, ಬಳಿಕ ಹಣ ಬಿಡುಗಡೆಯಾಗದೆ ಅಲ್ಲಿಗೇ ಸ್ಥಗಿತಗೊಂಡಿತ್ತು.
ಆ ಬಳಿಕ ಮಂಗಳೂರು ಸ್ಮಾರ್ಟ್‌ಸಿಟಿ ಈ ಯೋಜನೆ ಮುಂದುವರಿಸುವುದಕ್ಕೆ ಯೋಜನೆ ರೂಪಿಸಿತ್ತು. ತನ್ನ ಸೀಲಿಂಕ್ ಯೋಜನೆಯಡಿಯಲ್ಲಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಹಿಂದೆ ನಡೆದಿರುವ ಸುಮಾರು 1 ಕೋಟಿ ರೂ. ವೆಚ್ಚದ ಕೆಲಸ ಹಾಗೂ ಈಗಿನ ಹೊಸ ಯೋಜ ನೆಯ ಕೆಲಸ ಹೊಂದಾಣಿಕೆಯಾಗದ ಅದನ್ನು ಸೇರಿಸಿಕೊಳ್ಳುವಂತಿಲ್ಲ, ಇದನ್ನು ಪ್ರತ್ಯೇಕ ವಾಗಿಯೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಣ್ಣೀರುಬಾವಿ ಹತ್ತಿರವಾಗಲಿದೆ
ಮಂಗಳೂರಿನ ಸುಲ್ತಾನ್‌ಬತ್ತೇರಿ ಸಾಮಾನ್ಯವಾಗಿ ಪ್ರವಾಸಿಗರು ಭೇಟಿ ನೀಡುವ ಪ್ರದೇಶ. ಇದನ್ನು ತಣ್ಣೀರುಬಾವಿಗೆ ಬೆಸೆಯುವುದರಿಂದ ಈ ಭಾಗದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯಬಹುದುಎನ್ನುವುದು ಇದರ ಮುಖ್ಯ ಉದ್ದೇಶ. ಪ್ರಸ್ತುತ ತಣ್ಣೀರುಬಾವಿಗೆ ಹೋಗುವುದಕ್ಕೆ ಕೂಳೂರು ಮೂಲಕ ಸುತ್ತಾಗಿ ಹೋಗಬೇಕುಅಥವಾ ಬಂದರಿಗೆ ಹೋಗಿ ಅಲ್ಲಿಂದ ಬೆಂಗ್ರೆಗೆ ಫೆರಿ ಮೂಲಕ ಬರಬೇಕು. ಈ ಪ್ರಮೇಯ ತಪ್ಪಿಸಿ, ನೇರವಾಗಿ ನಗರದಿಂದಲೇ ತಣ್ಣೀರುಬಾವಿಗೆ ಹೋಗಿಬರಬಹುದಾಗಿದೆ.
ಬೋ ಸ್ಟ್ರಿಂಗ್ ಸೇತುವೆ
ಇದು ಬೋ ಸ್ಟ್ರಿಂಗ್ ಎಂದರೆ ಬಿಲ್ಲಿನಾಕಾರದ ಕಮಾನಿನ ಸೇತುವೆ. ಸ್ಥಳೀಯರು ವಾಹನ ಸಂಚಾರಕ್ಕೆ ಪೂರಕ ಸೇತುವೆ ಬೇಕು ಎಂಬ ಒತ್ತಾಯ ಇರಿಸಿದ್ದರಿಂದ ಇಲ್ಲಿ ತೂಗು ಸೇತುವೆ ಕೈ ಬಿಡಲಾಗಿದೆ. ಅಂತಿಮ ವಿನ್ಯಾಸ ಇತ್ಯಾದಿಗಳನ್ನು ಟೆಂಡರ್ ಪಡೆಯುವ ಸಂಸ್ಥೆಯೇ ಸಿದ್ಧಪಡಿಸಲಿದೆ.
-ಅರುಣ್‌ಪ್ರಭ , ಜಿಎಂ (ತಾಂತ್ರಿಕ), ಮಂಗಳೂರು ಸ್ಮಾರ್ಟ್‌ಸಿಟಿ
– ವೇಣುವಿನೋದ್ ಕೆ.ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.