![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 9, 2019, 12:33 AM IST
ಉಡುಪಿ/ಮಂಗಳೂರು:ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಸಿದ್ಧತೆ ಅಂಗವಾಗಿ ಎಐಸಿಸಿ ಕಾರ್ಯದರ್ಶಿಗಳಾದ ಪಿ.ಸಿ. ವಿಷ್ಣುನಾಥನ್, ಮಾಣಿಕಮ್ ಠಾಗೂರ್, ಮಧು ಯಕ್ಷಿ ಗೌಡಅವರು ಮಂಗಳೂರಿನಲ್ಲಿ ಫೆ. 9ರಂದು ಉಡುಪಿ-ಚಿಕ್ಕಮಗಳೂರು, ಕಾರವಾರ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಕುರಿತು ಮಾಹಿತಿ ಕಲೆ ಹಾಕುವರು.
ಬೆಳಗ್ಗೆ 11ರಿಂದ 1 ಗಂಟೆವರೆಗೆ ಉಡುಪಿ ಚಿಕ್ಕಮಗಳೂರು, 2ರಿಂದ 4ರ ವರೆಗೆ ಕಾರವಾರ ಮತ್ತು ಸಂಜೆ 4ರಿಂದ 6ರ ವರೆಗೆ ದ.ಕ. ಕ್ಷೇತ್ರದ ಸಭೆ ಜರಗಲಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಹಿಂದಿನ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು, ಸಚಿವರು, ಶಾಸಕರು, ಕೆಪಿಸಿಸಿ, ಎಐಸಿಸಿ ಜಿಲ್ಲಾ ಉಸ್ತುವಾರಿ ಪ್ರಭಾರಿಗಳು, ಮಾಜಿ ಸಚಿವರು, ಮಾಜಿ ಶಾಸಕರು, ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ತಾ.ಪಂ. ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಕೆಪಿಸಿಸಿ-ಎಐಸಿಸಿ ಸದಸ್ಯರು, ವಿವಿಧ ಘಟಕಗಳ ಜಿಲ್ಲಾಧ್ಯಕ್ಷರು ಅಭಿಪ್ರಾಯ ನೀಡುವರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಚಿಕ್ಕಮಗಳೂರು ಮೂಲದ ಅನಿವಾಸಿ ಕನ್ನಡಿಗರ ಸಮಿತಿ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣರೊಂದಿಗೆ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ| ವಿಜಯ ಕುಮಾರ್, ಉಡುಪಿಯ ಮುಖಂಡರಾದ ಅಮೃತ್ ಶೆಣೈ, ಪ್ರಖ್ಯಾತ ಶೆಟ್ಟಿಯವರ ಹೆಸರೂ ಕೇಳಿಬರುತ್ತಿದೆ. ವಿನಯಕುಮಾರ್ ಸೊರಕೆಯವರು ದ.ಕ. ಕ್ಷೇತ್ರದತ್ತಲೂ ಕಣ್ಣಿಟ್ಟಿದ್ದಾರೆ.
ದ.ಕ. ಜಿಲ್ಲೆಯ ಪೈಕಿ ಮಾಜಿ ಸಚಿವ ರಮಾನಾಥ ರೈ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ, ಮುಖಂಡರಾದ ಯು.ಕೆ. ಮೋನು, ಮಿಥುನ್ ರೈ, ರಾಜಶೇಖರ ಕೋಟ್ಯಾನ್ ಹೆಸರು ಚಾಲ್ತಿಯಲ್ಲಿದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.