ಕೋವಿಡ್ ಹೆಚ್ಚಳ: ದ.ಕ. ಆಸ್ಪತ್ರೆಗಳಲ್ಲಿ ಜಾಗವಿಲ್ಲ!
120 ಐಸಿಯು ಬೆಡ್, 117 ವೆಂಟಿಲೇಟರ್, 611 ಹೈ ಆಕ್ಸಿಜನ್ ಬೆಡ್‌ಗಳು ಭರ್ತಿ!
Team Udayavani, Sep 6, 2020, 5:45 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ದಿನೇದಿನೆ ಏರುತ್ತಿದ್ದು, ವೆಂಟಿಲೇಟರ್ ಮತ್ತು ಐಸಿಯು ಬೆಡ್ ಭರ್ತಿಯಾದ ಪರಿಣಾಮ ರೋಗಿಗಳು ತುರ್ತು ಚಿಕಿತ್ಸೆಗೆ ಪರದಾಡುವಂತಾಗಿದೆ. ಸರಕಾರಿ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 30 ಬೆಡ್‌ಗಳಿದ್ದು, ಅಷ್ಟೇ ವೆಂಟಿಲೇಟರ್‌ಗಳಿವೆ. ಅಲ್ಲದೆ ವಾರ್ಡ್‌ನಲ್ಲಿ ಹೈ ಡಿಪೆಂಡೆನ್ಸಿ ಯುನಿಟ್ ತೆರೆದು ಹೆಚ್ಚುವರಿಯಾಗಿ 15 ವೆಂಟಿಲೇಟರ್ ಬೆಡ್ ಹಾಕಲಾಗಿದೆ. 380 ಹೈ ಆಕ್ಸಿಜನ್ ಬೆಡ್ ಇದೆ. ಕೊರೊನಾಕ್ಕೆ ಚಿಕಿತ್ಸೆ ನೀಡುವ ಜಿಲ್ಲೆಯ 9 ಖಾಸಗಿ ಆಸ್ಪತ್ರೆಗಳು ಮತ್ತು ವೆನ್ಲಾಕ್ ಸಹಿತ ಒಟ್ಟು 120 ಐಸಿಯು ಬೆಡ್, 117 ವೆಂಟಿಲೇಟರ್ ಬೆಡ್ ಮತ್ತು 611 ಹೈ ಆಕ್ಸಿಜನ್ ಬೆಡ್‌ಗಳು ಕೊರೊನಾ ರೋಗಿ ಗಳಿಗೆ ಮೀಸಲಾಗಿವೆ. ಸದ್ಯ ಇವೆಲ್ಲವೂ ಭರ್ತಿಯಾಗಿದ್ದು, ಹೊಸದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಅಗತ್ಯವಿರುವವರು ದಾರಿಕಾಣದಾಗಿದ್ದಾರೆ.
ಆಸ್ಪತ್ರೆಗಳ ಅಸಹಾಯಕತೆ
ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕೆಂಬ ನಿಯಮವನ್ನು ಎಲ್ಲ ಆಸ್ಪತ್ರೆಗಳು ಪಾಲಿಸಿವೆ. ಐಸಿಯುವನ್ನು ಸಾಮಾನ್ಯ ಐಸಿಯು, ಕೋವಿಡ್ ಐಸಿಯು ಮತ್ತು ಕೋವಿಡ್ ಶಂಕಿತರಿಗಿರುವ ಐಸಿಯು ಎಂದು ವಿಭಾಗಗಳನ್ನು ಮಾಡಿ
ಕೊಳ್ಳಲಾಗಿದೆ. ಅಪಘಾತ ಸಹಿತ ಯಾವುದೇ ತತ್‌ಕ್ಷಣದ ಚಿಕಿತ್ಸೆ ಅಗತ್ಯವಿರುವವರು ಬಂದರೂ ಸಾಮಾನ್ಯ ಐಸಿಯುವಿಗೆ ಸ್ಥಳಾಂತರಿಸುವ ಮುನ್ನ ಕೊರೊನಾ ಪರೀಕ್ಷೆ ಅಗತ್ಯ. ವರದಿಯ ಬಳಿಕ ನೆಗೆಟಿವ್ ಇದ್ದಲ್ಲಿ ಸಾಮಾನ್ಯ ಐಸಿಯುಗೆ, ಪಾಸಿಟಿವ್ ಬಂದಲ್ಲಿ ಕೋವಿಡ್ ಐಸಿಯುಗೆ ಸ್ಥಳಾಂತರಿಸಲಾಗುತ್ತದೆ. ವರದಿ ಬರುವ ಮೊದಲೇ ಸಾಮಾನ್ಯ ಐಸಿಯುಗೆ ಕಳುಹಿಸಿದರೆ ಬಳಿಕ ಪಾಸಿಟಿವ್ ಎಂದಾದಲ್ಲಿ ಆತನಿಂದ ಸಾಮಾನ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುವರಿಗೂ ಕೊರೊನಾ ಹರಡುವ ಸಾಧ್ಯತೆ ಇರುವುದರಿಂದ ಈ ರೀತಿಯ ಮುನ್ನೆಚ್ಚರಿಕೆ ಅನಿವಾರ್ಯವೂ ಆಗಿದೆ. ಹೀಗಾಗಿ ಆಸ್ಪತ್ರೆ ಮಂದಿಯೂ ಅಸಹಾಯಕರಾಗಿದ್ದಾರೆ.
ರೋಗಿಯ ಪರದಾಟ
ವೆನ್ಲಾಕ್‌ನ ಐಸಿಯುವಿನಲ್ಲಿ ಹಾಸಿಗೆ ಲಭ್ಯವಿಲ್ಲ ಎಂಬುದಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ರೋಗಿ ಕಡೆಯವರಿಗೆ ಅಲ್ಲಿಯೂ ಐಸಿಯು ಫುಲ್ ಎಂಬ ಉತ್ತರ ಸಿಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವವರಿಗೆ ಪ್ರಾಣಾಪಾಯವೂ ಎದುರಾಗುತ್ತಿದೆ. ಹೊರ ಜಿಲ್ಲೆಯವರೂ ಮಂಗಳೂರಿಗೆ ಚಿಕಿತ್ಸೆಗೆ ಬರುವುದರಿಂದ ಹೆಚ್ಚಿನ ಒತ್ತಡ ಇಲ್ಲಿದೆ.
ಕೊನೆಯವರೆಗೆ ಕಾಯಬೇಡಿ
ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳಗಿನ ಮಕ್ಕಳು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಆರಂಭಿಕ ಲಕ್ಷಣ ಕಂಡು ಬಂದಾಗಲೇ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಬೇಕು. ಕೊನೆಯವರೆಗೆ ಕಾದು ರೋಗ ಉಲ್ಬಣಗೊಂಡ ಮೇಲೆ ಆಸ್ಪತ್ರೆಗೆ ಧಾವಿಸಿದರೆ ಐಸಿಯು, ವೆಂಟಿಲೇಟರ್ ಸಮಸ್ಯೆ ಎದುರಾಗಿ ಪ್ರಾಣಕ್ಕೆರವಾಗುವ ಸಾಧ್ಯತೆ ಇರುತ್ತದೆ. ಜನರೇ ಜಾಗೃತರಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ಮನವಿ ಮಾಡಿದ್ದಾರೆ.
1077ಕ್ಕೆ ಕರೆ ಮಾಡಿ
ಗಂಭೀರ ಸ್ಥಿತಿಯಲ್ಲಿರುವ ರೋಗಿ ಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಅಗತ್ಯವಿದ್ದು, ದಾಖಲಾಗಲು ಏನೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ 1077ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಐಸಿಯು ಕೊರತೆಯಿದೆ: ಡಿಸಿ
ಹೊರಜಿಲ್ಲೆಯ ರೋಗಿಗಳು ಬರುತ್ತಿರುವುದರಿಂದ ಸದ್ಯ ಐಸಿಯು ಸಮಸ್ಯೆ ಎದುರಾಗಿದೆ. ಸರಕಾರದ ಕಡೆಯಿಂದ 103 ವೆಂಟಿಲೇಟರ್‌ಗಳನ್ನು ಹೆಚ್ಚುವರಿಯಾಗಿ ತರಿಸಿದ್ದು, ಕೆಲವನ್ನು ಬಳಸಿಕೊಳ್ಳಲಾಗುತ್ತಿದೆ. ಉಳಿದವುಗಳನ್ನು ಶೀಘ್ರ ವಿತರಿಸಲಾಗುವುದು. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸುಮಾರು 50 ಐಸಿಯು ಬೆಡ್, 5-8 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.
– ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.