ರೋಗಲಕ್ಷಣ ಇಲ್ಲದಿದ್ದರೂ ತಿಂಗಳಿನಿಂದ ಕೋವಿಡ್ ಪಾಸಿಟಿವ್! 6 ಬಾರಿ ಟೆಸ್ಟ್ ನಲ್ಲಿ ಪಾಸಿಟಿವ್
Team Udayavani, Jun 15, 2020, 11:30 AM IST
ಮಂಗಳೂರು: ಉಸಿರಾಟ ಸಮಸ್ಯೆ, ಜ್ವರ ಹೀಗೆ ಯಾವುದೇ ಸೋಂಕು ಲಕ್ಷಣ ಇಲ್ಲದೇ ಇದ್ದರೂ ರಾಜ್ಯದಲ್ಲಿ ಬಹಳಷ್ಟು ಮಂದಿಗೆ ಕೋವಿಡ್ -19 ಸೋಂಕು ಕಾಣಿಸಿಕೋಳ್ಳುತ್ತಿದೆ. ಅದರಲ್ಲೂ ಬಹಳಷ್ಟು ಮಂದಿಗೆ ಮತ್ತೊಂದು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬರುತ್ತಿದ್ದು, ಏಳು ದಿನಗಳಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಆದರೆ ಮಂಗಳೂರಿನ ಇಬ್ಬರು ವೃದ್ಧರಿಗೆ ಸೋಂಕು ಲಕ್ಷಣವಿಲ್ಲದೆ ಇದ್ದರೂ ಸೋಂಕು ಮೈಬಿಟ್ಟು ಹೋಗುತ್ತಿಲ್ಲ!
ಮಂಗಳೂರಿನ ಈ ಇಬ್ಬರು ಕೋವಿಡ್ 19 ಸೋಂಕಿತರನ್ನು ಆರು ಬಾರಿ ಟೆಸ್ಟ್ ಮಾಡಿಸಿದಾಗಲೂ ಆರು ಬಾರಿಯೂ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಕೋವಿಡ್-19 ಸೋಂಕಿತರ ಬಿಡುಗಡೆಯ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಈ ಸಮಯದಲ್ಲಿ ಈ ಇಬ್ಬರು ವೃದ್ದರ ಕೋವಿಡ್ ಪ್ರಕರಣ ವೈದ್ಯರಿಗೆ ಸವಾಲಿಗೆ ಪರಿಣಮಿಸಿದೆ.
ಮೇ.12ರಂದು ದುಬೈನಿಂದ ಬಂದಿದ್ದ 81 ವರ್ಷದ ವೃದ್ಧ ಮತ್ತು ಮೇ.18ರಂದು ದುಬೈನಿಂದ ಬಂದಿದ್ದ 76 ವರ್ಷದ ವೃದ್ದ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕು ದೃಢವಾಗಿ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಇನ್ನೂ ಬಿಡುಗಡೆ ಭಾಗ್ಯವಿಲ್ಲ ಎಂಬಂತಾಗಿದೆ.
ಆದರೆ ಇಬ್ಬರಿಗೂ ಯಾವುದೇ ಸೋಂಕು ಲಕ್ಷಣಗಳಿಲ್ಲ. ಆದರೆ ಆಸ್ಪತ್ರೆಯಲ್ಲಿ ಆರು ಬಾರಿ ಕೋವಿಡ್-19 ಟೆಸ್ಟ್ ನಡೆಸಿದರೂ ಪಾಸಿಟಿವ್ ವರದಿ ಬರುತ್ತಿರುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ 81 ವರ್ಷ ವೃದ್ದನ ಪತ್ನಿ, ಮಗಳಿಗೂ ಕೋವಿಡ್-19 ಪಾಸಿಟಿವ್ ಕಂಡು ಬಂದಿತ್ತು. ಸದ್ಯ ಅವರಿಬ್ಬರೂ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದರೂ ವೃದ್ಧ ಮಾತ್ರ ಆಸ್ಪತ್ರೆಯಲ್ಲೇ ಇದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.