ಕರಾವಳಿ ಅಪರಾಧ ಸುದ್ದಿಗಳು
Team Udayavani, Apr 28, 2019, 10:34 AM IST
ಅರಂತೋಡು: ಗ್ಯಾಸ್ ವಿತರಣೆ ವಾಹನಕ್ಕೆ ಬೆಂಕಿ
ಅರಂತೋಡು: ಇಲ್ಲಗೆ ಸಮೀಪದ ಕಿರ್ಲಾಯದಲ್ಲಿ ಶುಕ್ರವಾರ ಸಂಜೆ ಗ್ಯಾಸ್ ವಿತರಣೆಯ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲು ಗಾಡಿ ಸಂಪೂರ್ಣ ಸುಟ್ಟು ಹೋಗಿದೆ.
ಅರಂತೋಡಿನ ಎಚ್.ಪಿ. ಗ್ಯಾಸ್ ಸಿಲಿಂಡರ್‌ಗಳನ್ನು ತಾಜುದ್ದೀನ್ ಟರ್ಲಿ ಅವರು ಕಮಿಷನ್ ಆಧಾರದಲ್ಲಿ ತನ್ನ ವಾಹನದಲ್ಲಿ ಮನೆ ಮನೆಗಳಿಗೆ ವಿತರಣೆ ಮಾಡುತ್ತಿದ್ದರು. ಕಿರ್ಲಾಯಕ್ಕೆ ತಲುಪಿದಾಗ ವಾಹನದಲ್ಲಿ ಹೊಗೆ ಕಂಡು ಬಂತು. ಕೂಡಲೇ ಅವರು ವಾಹನವನ್ನು ನಿಲ್ಲಿಸಿದ್ದು, ಆಗ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅಗ್ನಿ ಶಾಮಕದಳದವರು ಬಂದು ಬೆಂಕಿ ನಂದಿಸಿದರು. ಗ್ಯಾಸ್ ತುಂಬಿದ್ದ ಮೂರು ಸಿಲಿಂಡರ್‌ಗಳು ಕೆಲವು ಖಾಲಿ ಸಿಲಿಂಡರ್‌ಗಳಿದ್ದವು. ಸುಮಾರು 25,000 ರೂ. ಹಾಗೂ ಇತರ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
*
ಕಾರುಗಳು ಢಿಕ್ಕಿ: ನಾಲ್ವರಿಗೆ ಗಾಯ
ಕುಂಬಳೆ: ಕಾಸರಗೋಡು ಹೊರ ವಲಯದ ಕಾಲಿಕ್ಕಡವು ಆಣೂರು ತಿರುವು ರಸ್ತೆಯಲ್ಲಿ ಕಾರುಗಳೆರಡು ಢಿಕ್ಕಿ ಹೊಡೆದು ನಾಲ್ವರು ಗಾಯಗೊಂಡಿದ್ದಾರೆ.
ಕರಿವೆಳ್ಳೂರಿನ ವಿವಾಹ ಸಮಾರಂಭವೊಂದಕ್ಕೆ ತೆರಳುತ್ತಿದ್ದ ಕಾಸರಗೋಡು ಜಿಲ್ಲಾ ಸಿ.ಪಿ.ಎಂ.ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ಟರ್ (65) ಕಾರು ಚಾಲಕ ರಾಜನ್ ಪಾಲಾಯಿ (58) ಅವರು ಪಯ್ಯನ್ನೂರು ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಪರಶಿನಕಡವು ಕೇÒತ್ರಕ್ಕೆ ತೆರಳಿ ಮರಳುತ್ತಿದ್ದ ಇನ್ನೊಂದು ಕಾರಿನಲ್ಲಿದ್ದ ಕುಂಡಂಗುಳಿ ನಿವಾಸಿ ಕೆ.ಮೋಹನನ್ (42) ಮತ್ತು ಪತ್ನಿ ಶೋಭಾ (37) ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.