ಕರಾವಳಿ ಅಪರಾಧ ಸುದ್ದಿಗಳು
Team Udayavani, Apr 16, 2019, 10:28 AM IST
ಕಾರು ಢಿಕ್ಕಿ: ಮಹಿಳೆ ಸಾವು; ಇಬ್ಬರಿಗೆ ಗಾಯ
ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಸೋಮನಾಥ ಕಟ್ಟೆ ಬಳಿ ಸೋಮವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಪಾದಚಾರಿ ಮಹಿಳೆ ಸಾವನ್ನಪ್ಪಿದ್ದು, ಮತ್ತಿಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.ವಳಚ್ಚಿಲ್ ನಿವಾಸಿ ಮೀನಾಕ್ಷಿ (55) ಸಾವನ್ನಪ್ಪಿದವರು. ಗೀತಾ (50) ಮತ್ತು ಗೌತಮಿ (22) ಗಾಯಗೊಂಡವರು.
ಈ ಮೂವರು ಅಡ್ಯಾರ್ ದೇವಸ್ಥಾನದ ಜಾತ್ರೆಗೆ ಬಂದಿದ್ದರು. ಬಳಿಕ ರಾತ್ರಿ 2 ಗಂಟೆ ವೇಳೆಗೆ ಸಮೀಪದ ಮುಗಿಲಗುಡ್ಡೆಯಲ್ಲಿರುವ ಸಂಬಂಧಿಕರ ಮನೆಗೆ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರಿನಿಂದ ಬಿ.ಸಿ. ರೋಡ್ ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಯರಿಗೆ ಢಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಮೀನಾಕ್ಷಿ ಸಾವನ್ನಪ್ಪಿದ್ದು, ಉಳಿದಿಬ್ಬರು ಗಾಯಗೊಂಡರು. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ನಗರ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಂಬಾರು: ಮನೆ ಮಹಡಿಯಿಂದ ಬಿದ್ದು ಯುವ ಎಂಜಿನಿಯರ್ ಸಾವು
ಬಜಪೆ,: ಮಳವೂರು ಗ್ರಾಮ ಪಂಚಾ ಯತ್ ವ್ಯಾಪ್ತಿಯ ಕರಂಬಾರು ಕೊಪ್ಪಳದ ನಿವಾಸಿ ದೀಕ್ಷಿತ್ (22) ಎ.14ರಂದು ಮನೆಯ ಮಹಡಿ ನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಮಳವೂರು ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ್ ಬಂಗೇರ ಹಾಗೂ ಶೈಲಜಾ ದಂಪತಿಯ ಇಬ್ಬರು ಪುತ್ರಲ್ಲಿ ಹಿರಿಯವರಾಗಿದ್ದ ಅವರು ಕಳೆದ ವರ್ಷ ಮೆಕ್ಯಾನಿಲ್ ಎಂಜಿನಿಯರಿಂಗ್ ಮುಗಿಸಿ, ಉದ್ಯೋಗ ತರಬೇತಿ ಪಡೆಯುತ್ತಿದ್ದರು.ಲಕ್ಷ್ಮಣ್ ಬಂಗೇರರ ಮನೆಯ ಎರಡನೇ ಮಹಡಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿತ್ತು. ದೀಕ್ಷಿತ್ ರವಿವಾರ ಸಂಜೆ ಕಾಮಗಾರಿ ಪರಿಶೀಲಿಸುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದಿದ್ದರು. ತಲೆಗೆ ಗಂಭೀರ ಏಟಾಗಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು ಢಿಕ್ಕಿ: ಬೈಕ್ ಸವಾರ ಸಾವು
ಕಾಪು : ಮಲ್ಪೆಯಿಂದ ಕಟಪಾಡಿಗೆ ಬರುತ್ತಿದ್ದ ಬೈಕಿಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ಮೂಲತಃ ಪೆರ್ಡೂರು ನಿವಾಸಿ, ಪ್ರಸ್ತುತ ಕಟಪಾಡಿ ಅಗ್ರಹಾರದಲ್ಲಿ ವಾಸವಿದ್ದ ಸುರೇಶ್ ದೇವಾಡಿಗ (48) ಮೃತಪಟ್ಟವರು. ಅವರು ಮಲ್ಪೆಯ ಬಾರ್‌ನಲ್ಲಿ ಕೆಲಸದಲ್ಲಿದ್ದು, ಉದ್ಯಾವರ ಹಲಿಮಾ ಸಾಬುj ಸಭಾಂಗಣದ ಬಳಿ ಅಪಘಾತ ಸಂಭವಿಸಿದೆ. ಕಾರು ಚಾಲಕ ವಾಹನ ಸಹಿತ ಪರಾರಯಾಗಿದ್ದು, ಅದನ್ನು ಮಣಿಪಾಲದಲ್ಲಿ ಪೊಲೀಸರು ವಶಪಡಸಿದ್ದಾರೆ.
ಸುರೇಶ್ ಮಲ್ಪೆಯಲ್ಲಿ ಉದ್ಯೋಗ ದಲ್ಲಿದ್ದ ಕಾರಣ ಕಟಪಾಡಿ ಅಗ್ರಹಾರದ ಪತ್ನಿಯ ಮನೆಯಲ್ಲಿದ್ದರು. ಪತ್ನಿ ಗೃಹಿಣಿಯಾಗಿದ್ದು, ಪುತ್ರ 7ನೇ ತರಗತಿ ಮತ್ತು ಪುತ್ರಿ ನಾಲ್ಕನೇ ತರಗತಿ ಓದುತ್ತಿದ್ದಾರೆ. ಈಗ ಕುಟುಂಬದ ಆಧಾರ ಸ್ಥಂಭವೇ ಕುಸಿದಂತಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.