ಕೋಟಿ ರೂ. ಮಂಜೂರಾದರೂ ನನಸಾಗದ ಯೋಜನೆ
ಫುಟ್‌ಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಕೆ
Team Udayavani, Sep 19, 2019, 5:00 AM IST
ನೆಹರೂ ಮೈದಾನದ ಫುಟ್‌ಬಾಲ್ ಕ್ರೀಡಾಂಗಣ.
ಮಹಾನಗರ: ಮೂರು ವರ್ಷಗಳ ಹಿಂದೆ ನಗರದ ನೆಹರೂ ಮೈದಾನಿನ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಸುವ ಪ್ರಸ್ತಾವನೆ ಈಗ ಹಳ್ಳ ಹಿಡಿದಿದ್ದು, ಮಂಗಳೂರಿನಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಪಂದ್ಯಾಟ ನಡೆಸುವ ಕ್ರೀಡಾಭಿ ಮಾನಿಗಳು ಹಾಗೂ ಕ್ರೀಡಾಪಟುಗಳ ಕನಸಿಗೆ ನಿರಾಸೆ ಮೂಡಿಸಿದೆ.
ನಗರದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಪಂದ್ಯಾಟವನ್ನು ಆಯೋಜಿಸುವ ಉದ್ದೇಶವನ್ನಿಟ್ಟು, ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಸಲುವಾಗಿ ಈ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದ್ದರು. ಅಂದಿನ ಕ್ರೀಡಾ ಸಚಿವರಾಗಿದ್ದ ಅಭಯಚಂದ್ರ ಜೈನ್ ಅವರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕ್ರೀಡಾಂಗಣ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನೆಹರೂ ಮೈದಾನಿನಲ್ಲಿ ಫುಟ್‌ಬಾಲ್ ಕ್ರೀಡಾಂಗಣದ ಹುಲ್ಲು ಹಾಸಿಗೆ ರಾಜ್ಯ ಸರಕಾರವು ಒಂದು ಕೋಟಿ ರೂ. ಅನುದಾನವನ್ನು ಈಗಾಗಲೇ ಮಂಜೂರು ಮಾಡಿದ್ದು, ಇದರಲ್ಲಿ 25 ಲಕ್ಷ ರೂ. ಬಿಡುಗಡೆಯಾಗಿ ದೆ. ಮಂಗಳಾ ಕ್ರೀಡಾಂಗಣ ಸಮಿತಿಯಿಂದ 8 ಲಕ್ಷ ರೂ. ಸೇರಿ ಒಟ್ಟಾರೆ 33 ಲಕ್ಷ ರೂ. ಹಣವನ್ನು ಕ್ರೀಡಾ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಈಗಾಗಲೇ ನೀಡಿದೆ.
ಸರಕಾರದಿಂದ ಅನುಮತಿ ಸಿಕ್ಕಿಲ್ಲ
ಫುಟ್‌ಬಾಲ್ ಕ್ರೀಡಾಂಗಣಕ್ಕೆ ಹುಲ್ಲು ಹಾಸಿನ ಕಾಮಗಾರಿಗೆಂದು ಲೋಕೋ ಪಯೋಗಿ ಇಲಾಖೆಯು ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆಂದು ಈ ಹಿಂದೆಯೇ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ಯಾವುದೇ ಗುತ್ತಿಗೆದಾರರು ಟೆಂಡರ್‌ಗೆ ಅರ್ಜಿ ಹಾಕಿರಲಿಲ್ಲ. ಕಳೆದ ವರ್ಷ ಕರೆದ ಮೂರನೇ ಟೆಂಡರ್‌ನಲ್ಲಿ ಗುತ್ತಿಗೆದಾರರೊಬ್ಬರು ಹೆಚ್ಚುವರಿ 13 ಲಕ್ಷ ರೂ. (ಶೇ. 19ರಷ್ಟು ಹೆಚ್ಚಳ) ನಮೂದಿಸಿ ಟೆಂಡರ್ ಸಲ್ಲಿಸಿದ್ದರು.
ಅನುಮತಿ ದೊರೆತರೆ ಕಾಮಗಾರಿ ಆರಂಭ
ನೆಹರೂ ಮೈದಾನಿನ ಫುಟ್‌ಬಾಲ್ ಕ್ರೀಡಾಂಗಣದ ಹುಲ್ಲುಹಾಸಿಗೆ ಸರಕಾರವು 25 ಲಕ್ಷ ರೂ. ಬಿಡುಗಡೆ ಮಾಡಿದೆ. ಎರಡು ಬಾರಿ ಟೆಂಡರ್ ವಹಿಸಲು ಯಾರೂ ಮುಂದೆ ಬರಲಿಲ್ಲ. ಮೂರನೇ ಬಾರಿ ಶೇ. 19ರಷ್ಟು ಹೆಚ್ಚುವರಿ ಹಣಕ್ಕೆ ಗುತ್ತಿಗೆದಾರರೊಬ್ಬರು ಟೆಂಡರ್ ವಹಿಸಿದ್ದು, ಈ ಮೊತ್ತಕ್ಕೆ ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳುತ್ತದೆ.
– ಪ್ರದೀಪ್ ಡಿ’ಸೋಜಾ,, ಪ್ರಭಾರ ಉಪನಿರ್ದೇಶಕ, ಯುವ ಸಬಲೀಕರಣ,ಕ್ರೀಡಾ ಇಲಾಖೆ
ಯೋಜನೆಯಲ್ಲೇನಿದೆ?
ನೂತನ ಯೋಜನೆಯ ಪ್ರಕಾರ ಮೈದಾನಿನಲ್ಲಿ ಟರ್ಫ್ ಅಳವಡಿಸಲಾಗುತ್ತದೆ. ಇದರನ್ವಯ ಕ್ರೀಡಾಂಗಣವನ್ನು ಹುಲ್ಲು ಹಾಸಿನಲ್ಲಿ ಆಕರ್ಷಣೀಯ ಮಾಡಲಾಗುತ್ತದೆ. ರಾತ್ರಿ ವೇಳೆ ಪಂದ್ಯಗಳು ನಡೆಸಲು ಪೆಡ್‌ಲೈಟ್ ಹಾಕಲಾಗುತ್ತದೆ. ಇನ್ನು, ಮಳೆನೀರು ಸರಾಗವಾಗಿ ಹರಿ ಯಲು ಒಳಚರಂಡಿ ವ್ಯವಸ್ಥೆ ಕೂಡ ಈ ಯೋಜನೆಯಲ್ಲೇ ಬರಲಿದೆ.
ಬೆಂಗಳೂರಿಗೆ ತೆರಳಿ ಮನವಿ ಮಾಡುತ್ತೇವೆ
ಫುಟ್‌ಬಾಲ್ ಮೈದಾನಕ್ಕೆ ಹುಲ್ಲುಹಾಸು ಅಳವಡಿಸುವ ಯೋಜನೆಗೆ ಹಣ ಬಿಡುಗಡೆಯಾದರೂ, ಯಾವುದೇ ಕೆಲಸಗಳಿನ್ನೂ ಆರಂಭಗೊಳ್ಳಲಿಲ್ಲ. ಈ ಬಗ್ಗೆ ಸದ್ಯದಲ್ಲಿಯೇ ಬೆಂಗಳೂರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಮಾಡ ಲಿ ದ್ದೇವೆ.
- ಡಿ.ಎಂ. ಅಸ್ಲಾಂ, ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.