ಹುಲಿವೇಷ, ಟ್ಯಾಬ್ಲೊ ನೋಡಲು ಕಿಕ್ಕಿರಿದ ಜನ
Team Udayavani, Oct 18, 2018, 12:39 PM IST
ಎಕ್ಕಾರು: ದಸರಾ ಮಹೋತ್ಸವ ಸಮಿತಿ ಎಕ್ಕಾರು ವತಿಯಿಂದ ಇಲ್ಲಿನ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಶ್ರೀ ಕುಂಭಕಂಠಿಣೀ ದೈವದ ಗೋಪುರದ ಬಳಿ ಪಾರ್ಥನೆಯೊಂದಿಗೆ 60ನೇ ವರ್ಷದ ದಸರಾ ಮಹೋತ್ಸವ ಮೆರವಣಿಗೆಯು ಶ್ರೀ ಕ್ಷೇತ್ರ ಕಟೀಲು ಶ್ರೀ ದೇವಿ ಸನ್ನಿಧಿಗೆ ಹೊರಟಿತು.
60ನೇ ವರ್ಷದ ದಸರಾ ಮೆರವಣಿಗೆ ಈ ಬಾರಿ ಅದ್ದೂರಿಯಾಗಿ ನಡೆದಿದೆ. ಸುಮಾರು 12 ಟ್ಯಾಬ್ಲೊಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಟ್ಯಾಬ್ಲೊಗಳಲ್ಲಿ ಮೋದಿ ಟ್ಯಾಬ್ಲೊ ನೋಡಲು ಜನರ ನೂಕುನುಗ್ಗಲು ಕಾಣಸಿಕ್ಕಿತು. ಬೆಂಗಾವಲು ರಕ್ಷಣಾ ಪಡೆಯೊಂದಿಗೆ ಕಪ್ಪು ಕಾರಿನಲ್ಲಿ ಆಗಮಿಸಿದ ಮೋದಿ, ಬಳಿಕ ಭಾಷಣ ಮಾತನಾಡುತ್ತಿದ್ದಂತೆ ಮೋದಿಯೇ ಬಂದಂತಾಯಿತು.
103 ಹುಲಿ ವೇಷಧಾರಿಗಳು ಈ ಬಾರಿಯ ವಿಶೇಷವಾಗಿದೆ. ಸಣ್ಣ ಮಕ್ಕಳ ಹುಲಿ ವೇಷ ಜತೆ ಹಿರಿಯರ ಹುಲಿವೇಷಗಳು, ಸಿಂಹಗಳ ಕುಣಿತ ಹೆಚ್ಚು ಅಕರ್ಷಣೆಯನ್ನು ಪಡೆಯಿತು. ಹೆಚ್ಚಿನವರು ಹರಕೆಯ ರೂಪದಲ್ಲಿ ಈ ವೇಷವನ್ನು ಹಾಕಿದ್ದರು.
ವ್ರತಧಾರಿಯಾಗಿ ಹುಲಿ ವೇಷ ಹಾಕುವವರು ಬೆಳಗ್ಗೆ ಬಂದಿದ್ದು, 20 ಮಂದಿಯಷ್ಟು ಪೈಂಟರ್‌ಗಳು ಹುಲಿ ವೇಷದ ಬಣ್ಣಗಳನ್ನು ಹಾಕುವಲ್ಲಿ ಮಗ್ನರಾಗಿದ್ದರು. ಜನಪದ ಶೈಲಿಯ ಟ್ಯಾಬ್ಲೊಗಳು ಜನರನ್ನು ಆಕರ್ಷಿಸಿದವು. ಎಕ್ಕಾರಿನಿಂದ ಕಟೀಲಿನವರೆಗೆ ಮೆರವಣಿಗೆಯಲ್ಲಿ ಬೊಂಬೆ, ಚೆಂಡೆ, ಡೋಲು, ವೀರಗಾಸೆ, ಭಜನೆ, ಸಮವಸ್ತ್ರ ಧರಿಸಿದ ಯುವತಿ, ಯುವಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.