ಪಾಲಿಕೆ ವ್ಯಾಪ್ತಿ: ಅಂಚೆ ಇಲಾಖೆಯಿಂದ ಗ್ರಾಹಕ ಸ್ನೇಹಿ ಸೇವೆ
ಅಂಚೆ ಕಚೇರಿಯಲ್ಲಿ ನೀರಿನ ಬಿಲ್ ಪಾವತಿ; ಹತ್ತು ಸಾವಿರಕ್ಕೂ ಹೆಚ್ಚಿನ ಮಂದಿಗೆ ಪ್ರಯೋಜನ
Team Udayavani, Mar 25, 2022, 10:18 AM IST
ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯ ನೀರಿನ ಬಿಲ್ ಪಾವತಿಗೆ ಈ ಹಿಂದೆ ಮಂಗಳೂರು ವನ್ ಸೆಂಟರ್‌ನಲ್ಲಿ ಕ್ಯೂ ನಿಲ್ಲಬೇಕಿತ್ತು. ಆದರೆ ಇದೀಗ ಅಂಚೆ ಇಲಾಖೆ ಮೂಲಕ ನೀರಿನ ಬಿಲ್ ಪಾವತಿಗೆ ಅವಕಾಶ ನೀಡಲಾಗಿದ್ದು, ಮೂರೂವರೆ ತಿಂಗಳುಗಳಲ್ಲಿ ಸುಮಾರು 10,000ಕ್ಕೂ ಹೆಚ್ಚಿನ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಗ್ರಾಹಕ ಸ್ನೇಹಿ ಸೇವೆಯನ್ನು ಅಂಚೆ ಇಲಾಖೆ ನೀಡುತ್ತಿದ್ದು, 2021ರ ನವೆಂಬರ್ ತಿಂಗಳಿನಿಂದ ಮನಪಾ ವ್ಯಾಪ್ತಿಯ ನೀರಿನ ಬಿಲ್ ಪಾವತಿ ಸೇವೆಯನ್ನು ಆರಂಭಿಸಿತ್ತು. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರತೀ ದಿನ ಸುಮಾರು 100 ಮಂದಿ ಬಿಲ್ ಪಾವತಿ ಮಾಡುತ್ತಿದ್ದಾರೆ.
ಇದರಿಂದಾಗಿ ತಿಂಗಳಿಗೆ ಸುಮಾರು 10 ಲಕ್ಷ ರೂ. ಮೊತ್ತ ಪಾವತಿ ಆಗುತ್ತಿದೆ. ಈ ಹಿಂದೆ ವಾಮಂಜೂರು, ಕುಡುಪು, ಪಚ್ಚನಾಡಿ ಸಹಿತ ಸಿಟಿಗಿಂತ ದೂರದ ಪ್ರದೇಶದ ಮಂದಿಗೆ ಬಿಲ್ ಪಾವತಿ ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಪಾಲಿಕೆ ಮತ್ತು ಅಂಚೆ ವಿಭಾಗವು ಒಡಂಬಡಿಕೆ ಮುಖೇನ ಈ ಸೇವೆಯನ್ನು ಆರಂಭ ಮಾಡಿದೆ. ನೀರಿನ ಬಿಲ್‌ನ ಪ್ರತಿ ತಾರದೆ ಕೇವಲ ಬಿಲ್‌ನಲ್ಲಿ ನಮೂದಾಗಿರುವ ಸೀಕ್ವೆನ್ಸ್ ನಂಬರ್ ಹೇಳಿಯೂ ಬಿಲ್ ಕಟ್ಟಲು ಅವಕಾಶ ನೀಡಲಾಗಿದೆ. ಪ್ರಸ್ತುತ ಈ ಸೇವೆಯು ಮನಪಾ ವ್ಯಾಪ್ತಿಗೊಳಪಟ್ಟ ನೀರಿನ ಬಿಲ್‌ಗಳಿಗೆ ಮಾತ್ರ ಲಭ್ಯವಿದೆ. ಸಾರ್ವಜನಿಕರು ಮನೆಯ ನೀರಿನ ಬಿಲ್ 1,000 ರೂ. ದೊಳಗೆ ಬಂದಿದ್ದರೆ ಜಿಎಸ್‌ಟಿ ಒಳಗೊಂಡ ಸೇರಿ ಸೇವಾ ಶುಲ್ಕ ಸೇರಿ 6 ರೂ. ಹೆಚ್ಚುವರಿ ಪಾವತಿ ಮಾಡಬೇಕು. ಇನ್ನು, 1,001 ರೂ.ನಿಂದ 2,500 ರೂ.ವರೆಗೆ 12 ರೂ., 2,501 ರೂ.ನಿಂದ 5,000 ರೂ. ವರೆಗೆ 18 ರೂ., 5,000 ರೂ.ಗಿಂತ ಮೇಲ್ಪಟ್ಟು 24 ರೂ. ಸೇವಾ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಯಾವೆಲ್ಲಾ ಅಂಚೆಕಚೇರಿಯಲ್ಲಿ ಸೇವೆ?
ಪಾಲಿಕೆ ವ್ಯಾಪ್ತಿಯ ಬಹುತೇಕ ಅಂಚೆ ಕಚೇರಿಗಳಲ್ಲಿಯೂ ಈ ಸೇವೆ ಲಭ್ಯವಿದೆ. ಅಶೋಕನಗರ, ಮೀನುಗಾರಿಕೆ ಕಾಲೇಜು, ಕುಳಾಯಿ, ಪಣಂಬೂರು, ಬೈಕಂಪಾಡಿ, ಗಾಂಧೀನಗರ, ಕುಲಶೇಖರ ಪ್ರಧಾನ ಅಂಚೆ ಕಚೇರಿ, ಶಕ್ತಿನಗರ, ಬಜಾಲ್, ಹಂಪನಕಟ್ಟೆ, ಕೂಳೂರು, ಶ್ರೀನಿವಾಸ ನಗರ, ಬಲ್ಮಠ, ಕಂಕನಾಡಿ, ಲೀವೆಲ್, ಸುರತ್ಕಲ್, ಬಿಜೈ, ಕಾಟಿಪಳ್ಳ, ಮಂಗಳೂರು ಕಲೆಕ್ಟರೇಟ್, ವಾಮಂಜೂರು, ಬೋಳೂರು, ಕಾವೂರು, ಮಂಗಳೂರು ಪ್ರಧಾನ ಅಂಚೆ ಕಚೇರಿ, ಜಿಲ್ಲಾ ನ್ಯಾಯಾಲಯ, ಕೊಡಿಯಾಲಬೈಲ್, ಮರ್ಕೆರ ಹಿಲ್ಸ್(ಮಲ್ಲಿಕಟ್ಟೆ), ಫಳ್ನೀರ್, ಕೊಂಚಾಡಿ, ಪಡೀಲ್ ಅಂಚೆ ಕಚೇರಿಗಳಲ್ಲಿ ಮನಪಾ ನೀರಿನ ಬಿಲ್ ಪಾವತಿಗೆ ಅವಕಾಶ ನೀಡಲಾಗಿದೆ.
ಸಾರ್ವಜನಿಕ ಸ್ನೇಹಿ ವ್ಯವಸ್ಥೆ
ಸಾರ್ವಜನಿಕ ಸ್ನೇಹಿ ಸೇವೆ ನೀಡಲು ಅಂಚೆ ಇಲಾಖೆ ಬದ್ಧವಾಗಿದೆ. ಇದೇ ಕಾರಣಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಅಂಚೆ ಇಲಾಖೆಯಲ್ಲಿಯೂ ನೀರಿನ ಬಿಲ್ ಪಾವತಿಗೆ ಅವಕಾಶ ನೀಡಲಾಗಿದೆ. ಸದ್ಯ ಪ್ರತೀ ದಿನ ನೂರಕ್ಕೂ ಹೆಚ್ಚು ಮಂದಿ ನೀರಿನ ಬಿಲ್ ಪಾವತಿ ಮಾಡುತ್ತಿದ್ದಾರೆ. ಕೈಗಾರಿಕಾ ವಲಯಕ್ಕಿಂತಲೂ ಹೆಚ್ಚಾಗಿ ಮನೆಗಳಲ್ಲಿನ ನೀರಿನ ಬಿಲ್ ಪಾವತಿ ಆಗುತ್ತಿದೆ. ಮಂಗಳೂರಿನ ಬಹುತೇಕ ಅಂಚೆ ಕಚೇರಿಯಲ್ಲಿ ಈ ಸೇವೆ ಲಭ್ಯವಿದ್ದು, ಸಾರ್ವಜನಿಕರು ಪ್ರಯೋಜನಪಡೆಯಬಹುದು. -ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕ, ಮಂಗಳೂರು ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.