ಸೈಬರ್ ಠಾಣೆಗೆ ತಜ್ಞ ತನಿಖಾಧಿಕಾರಿ ಇಲ್ಲ!
Team Udayavani, Aug 26, 2019, 5:18 AM IST
ಮಹಾನಗರ: ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿ ರೂಪು ಗೊಳ್ಳುತ್ತಿರುವ ಜತೆಗೆ ಸೈಬರ್ ಅಪರಾಧಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧಗಳ ತನಿಖೆ ನಡೆಸಲು ಪರಿಣತ ತನಿಖಾಧಿಕಾರಿಯೇ ಇಲ್ಲ!
ಇಲ್ಲಿ 5 ತಿಂಗಳುಗಳಿಂದ ಖಾಯಂ ಪೊಲೀಸ್ ಇನ್‌ಸ್ಪೆಕ್ಟರ್ ಇರಲಿಲ್ಲ; ಎರಡು ದಿನಗಳ ಹಿಂದೆ ಒಬ್ಬರನ್ನು ನೇಮಕ ಮಾಡಲಾಗಿದೆ. ಠಾಣೆಯಲ್ಲಿ ಇದ್ದ ಇಬ್ಬರು ಸಬ್ ಇನ್‌ಪೆಕ್ಟರ್‌ಗಳೂ ಜೂನ್‌ನಲ್ಲಿ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ ಅವರ ಹುದ್ದೆಗಳೂ ಖಾಲಿ ಇವೆ.
ಪ್ರಮುಖ ಹುದ್ದೆಗಳೂ ಖಾಲಿ
ಸೈಬರ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಸವಿತೃ ತೇಜ ಕಳೆದ ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗುವಾಗ ವರ್ಗವಾಗಿದ್ದು, ತೆರ ವಾದ ಸ್ಥಾನಕ್ಕೆ ಚುನಾವಣೆ ಸಂದರ್ಭದಲ್ಲಿ ಸತೀಶ್ ನೇಮಕಗೊಂಡಿದ್ದರು. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಜೂ. 20ರಂದು ಸತೀಶ್ ಕೂಡ ಮಾತೃ ಠಾಣೆ (ಎಸಿಬಿ)ಗೆ ಮರಳಿದ್ದಾರೆ. ಸವಿತೃ ತೇಜ ಸಾಮಾನ್ಯ ವರ್ಗಾವಣೆಗೊಂಡು ಬೆಂಗಳೂರಿಗೆ (ಐಎಸ್‌ಡಿ) ತೆರಳಿದ್ದರಿಂದ ವಾಪಸಾಗಿಲ್ಲ. ಈ ಠಾಣೆಯಲ್ಲಿ ಎಸ್‌ಐ ಆಗಿದ್ದ ಚಂದ್ರಶೇಖರಯ್ಯ ಸುರತ್ಕಲ್ ಠಾಣೆಗೂ ಇನ್ನೋರ್ವ ಎಸ್‌ಐ ಕುಮಾರೇಶನ್ ಪಣಂಬೂರು ಠಾಣೆಗೂ ವರ್ಗವಾಗಿದ್ದಾರೆ. ಉಳಿದಂತೆ ಇತರ 18 ಮಂದಿ ಸಿಬಂದಿ ಮಾತ್ರ ಇದ್ದಾರೆ.
ಇದೀಗ ಎರಡು ದಿನಗಳ ಹಿಂದೆ ಈ ಹಿಂದೆ ಮಂಗಳೂರಿನಲ್ಲಿ ಕೆಲಸ ಮಾಡಿದ್ದ ಓರ್ವ ಇನ್ಸ್‌ಪೆಕ್ಟರ್ ಅವರನ್ನು ಎರಡು ದಿನಗಳ ಹಿಂದೆ ಸೈಬರ್ ಠಾಣೆಗೆ ನೇಮಕ ಮಾಡಿದ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ಉದಯವಾಣಿಗೆ ತಿಳಿಸಿದ್ದಾರೆ.
ಪ್ರತೀ ದಿನ 2- 3 ಹೊಸ ಪ್ರಕರಣ
ಠಾಣೆಯ ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ 185 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ತನಿಖಾಧಿಕಾರಿಯಾಗಿರುವ ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆಯೇ 5 ತಿಂಗಳಿಂದ ಖಾಲಿ ಇದ್ದದ್ದು, ವಿಳಂಬಕ್ಕೆ ಕಾರಣ. ಪ್ರತೀ ದಿನ 2- 3 ಹೊಸ ಸೈಬರ್ ಅಪರಾಧ ಪ್ರಕರಣಗಳು ಸೇರ್ಪಡೆಗೊಳ್ಳುತ್ತಿದ್ದು, ಪಟ್ಟಿ ಬೆಳೆಯುತ್ತಲೇ ಇದೆ.
ಕೆಲವು ದಿನಗಳ ಹಿಂದೆ ಪ್ರಕರಣವೊಂದರ ತನಿಖೆ ತುರ್ತಾಗಿ ನಡೆಯಬೇಕಿತ್ತು. ಆಗ ಅನಿವಾರ್ಯವಾಗಿ ಬಂದರು (ಮಂಗಳೂರು ಉತ್ತರ) ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜು ಅವರಿಗೆ ತನಿಖೆಯ ಪ್ರಭಾರವನ್ನು ಆಯುಕ್ತರು ವಹಿಸಿದ್ದರು. ಆದರೆ ಅವರಿಗೆ ಬಂದರು ಠಾಣೆಯ ಜವಾಬ್ದಾರಿಯೂ ಇರುವುದರಿಂದ ಸೈಬರ್ ಠಾಣೆ ಬಗ್ಗೆ ಗಮನ ಸಾಧ್ಯವಾಗುತ್ತಿರಲಿಲ್ಲ.
•ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.