68ರ ಹರೆಯದಲ್ಲೂ ಸೈಕಲ್‌ ಪ್ರವಾಸ

Team Udayavani, Oct 21, 2022, 11:58 AM IST

10

ಮಹಾನಗರ: ಇವರು ಸಂಜಯ್‌ ಮಯೂರೆ. ಮಹಾರಾಷ್ಟ್ರದ 68ರ ಹಿರಿಯರು. ನಿವೃತ್ತರಾಗಿ ಮನೆಯಲ್ಲಿ ಹಾಯಾಗಿರುವ ವಯಸ್ಸಿನಲ್ಲೂ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್‌ನಲ್ಲಿ ಪ್ರವಾಸ ಹೊರಟಿದ್ದಾರೆ.

ಅ. 2ರಂದು ಮುಂಬಯಿಯ ಗೇಟ್‌ ವೇ ಆಫ್‌ ಇಂಡಿಯಾದಿಂದ ಸೈಕಲ್‌ ಪ್ರವಾಸ ಆರಂಭಿಸಿದ್ದಾರೆ. ಬರೋಬ್ಬರಿ 30 ಕಿಲೋ ತೂಕದ ಲಗೇಜ್‌ ಕೂಡ ಇದೆ. ಇದರಲ್ಲಿ ಟೆಂಟ್‌, ಸ್ಲೀಪಿಂಗ್‌ ಬ್ಯಾಗ್‌, ದೈನಂದಿನ ಬಳಕೆ ವಸ್ತು, ಸೈಕಲ್‌ ರಿಪೇರಿ ಸಾಮಗ್ರಿ ಸೇರಿದೆ. ಇದೆಲ್ಲದರ ಜತೆಗೆ ಸೈಕಲ್‌ ತುಳಿಯುತ್ತಾ ಸಾಗುತ್ತಾರೆ. ಏರಿಳಿತವಿಲ್ಲದ ಹಾದಿಯಾದರೆ ದಿನಕ್ಕೆ 100 ಕಿ.ಮೀ.ನಷ್ಟು ತುಳಿಯುತ್ತಾರೆ.

1970ರಿಂದಲೇ ಸೈಕ್ಲಿಂಗ್‌ ಮಾಡುತ್ತಿರುವ ಸಂಜಯ್‌ ನನಗೆ ಬಿಪಿ, ಶುಗರ್‌ ಯಾವುದೇ ಕಾಯಿಲೆ ಇಲ್ಲ, ಫಿಟ್‌ ಇದ್ದೇನೆ ಎಂದು ಖುಷಿಯಿಂದ ನುಡಿಯುತ್ತಾರೆ. ಮಹಾರಾಷ್ಟ್ರದ ಬುಲ್ಡ್‌ವಾನಾದ ನಿವಾಸಿಯಾಗಿರುವ ಅವರು ಜಿಲ್ಲಾ ಕಚೇರಿಯಲ್ಲಿ ಡೆಪ್ಯುಟಿ ತಹಶೀಲ್ದಾರರಾಗಿ ನಿವೃತ್ತರಾದವರು. ಅವರ ಪತ್ನಿ ನಿವೃತ್ತ ಬ್ಯಾಂಕ್‌ ಅಧಿಕಾರಿ.

ಪ್ರವಾಸದ ಸಂದರ್ಭ ಕನಿಷ್ಠ ವೆಚ್ಚವಿರುತ್ತದೆ, ಆದಷ್ಟೂ ಪೊಲೀಸ್‌ ಸ್ಟೇಶನ್‌, ರಾಮಕೃಷ್ಣ ಮಿಷನ್‌ನಂತಹ ತಾಣಗಳಲ್ಲಿ ಉಳಿದುಕೊಳ್ಳುತ್ತೇನೆ. ಟೆಂಟ್‌ ಕೂಡ ಇರುವುದರಿಂದ ಸಮಸ್ಯೆಯಾಗುವುದಿಲ್ಲ. ಒಂದು ವರ್ಷದಲ್ಲಿ 27 ರಾಜ್ಯ, ಅಲ್ಲದೆ ಬಾಂಗ್ಲಾ, ಭೂತಾನ್‌ ಸೇರಿದಂತೆ 20 ಸಾವಿರ ಕಿ.ಮೀ. ಸಂಚರಿಸಿ ಮನೆ ಸೇರುವುದು ಅವರ ಗುರಿ.

ಈ ಮೊದಲು 17 ದೇಶಗಳನ್ನು ಸೈಕಲ್‌ನಲ್ಲಿ ಸುತ್ತಿರುವ ಅವರು 2004 ರಲ್ಲಿ ಅಥೆನ್ಸ್‌ ಒಲಿಂಪಿಕ್ಸ್‌ಗೆ ಸೈಕಲ್‌ ತುಳಿಯುತ್ತಾ ತಲಪಿದ್ದುದು ಅವರ ಸಾಧನೆ. ಈ ಬಾರಿಯ ಪ್ರವಾಸದಲ್ಲಿ ಅವರದ್ದು ಮುಖ್ಯವಾಗಿ ಪರಿಸರವನ್ನು ಉಳಿಸುವುದು, ಸೈಕಲ್‌ ಸದ್ಬಳಕೆ ಹೆಚ್ಚಿಸುವ ಸಂದೇಶ ಪಸರಿಸುವ ಗುರಿ ಇದೆ.

ಪ್ರವಾಸದಲ್ಲಿ ಯಾವ ಸಮಸ್ಯೆಯಾಗುವುದಿಲ್ಲ, ಎಲ್ಲರೂ ಸ್ನೇಹ ಪೂರ್ವಕವಾಗಿ ನಡೆದು ಕೊಳ್ಳುತ್ತಾರೆ, ಬೆಳಗ್ಗೆ ಮನೆಯವರೊಂದಿಗೆ ಮಾತನಾಡುತ್ತೇನೆ, ಅವರೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.