ದಕ್ಷಿಣ ಕನ್ನಡ: ಹಿಂಗಾರು ಬೇಸಾಯ ಆರಂಭ; 4,895 ಹೆ. ಭತ್ತ ಬೆಳೆಯುವ ಗುರಿ
Team Udayavani, Nov 9, 2020, 4:46 AM IST
ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಗಾರು (ರಬಿ) ಭತ್ತದ ಬೆಳೆಯಲ್ಲಿ 4,895 ಹೆಕ್ಟೇರ್ ಗುರಿ ಇರಿಸಿಕೊಳ್ಳಲಾಗಿದೆ. ಈ ವರ್ಷ ಮುಂಗಾರು ಮಳೆ ಅವಧಿ ಮೀರಿ ಸುರಿದ ಹಿನ್ನೆಲೆಯಲ್ಲಿ ಖಾರಿಫ್‌ನ ಕಟಾವು ವಿಳಂಬವಾಗಿದೆ. ಇದು ಹಿಂಗಾರು ಭತ್ತದ ಬೆಳೆ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಪ್ರಸ್ತುತ 60 ಹೆ. ಪ್ರದೇಶದಲ್ಲಿ ಹಿಂಗಾರು ಭತ್ತದ ಕೃಷಿ ಆರಂಭಿಸಲಾಗಿದ್ದು, ಮುಂಗಾರು ಬೆಳೆ ಕಟಾವು ಕಾರ್ಯ ಪೂರ್ಣಗೊಂಡ ಬಳಿಕ ಇದು ಚುರುಕುಗೊಳ್ಳಲಿದೆ.
ಹಿಂಗಾರು ಬೆಳೆಯಲ್ಲಿ ರೈತರಿಗೆ ವಿತರಿ ಸಲು ಪ್ರಸ್ತುತ ಜಯ ಹಾಗೂ ಜ್ಯೋತಿ ತಳಿ ಸೇರಿ ಒಟ್ಟು 253.5 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇರಿಸಿಕೊಳ್ಳಲಾಗಿದ್ದು, 75.5 ಕ್ವಿಂ. ಬೀಜವನ್ನು ವಿತರಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ ಜಯ 75 ಕ್ವಿಂ., ಜ್ಯೋತಿ 35 ಕ್ವಿಂ., ಒಟ್ಟು 110 ಕ್ವಿಂ., ಬಂಟ್ವಾಳದಲ್ಲಿ ಜಯ 60.25 ಕ್ವಿಂ., ಜ್ಯೋತಿ 20 ಕ್ವಿಂ., ಒಟ್ಟು 80.25 ಕ್ವಿಂ., ಬೆಳ್ತಂಗಡಿಯಲ್ಲಿ ಜಯ 19.75 ಕ್ವಿಂ., ಜ್ಯೋತಿ 25 ಕ್ವಿಂ., ಒಟ್ಟು 44.75 ಕ್ವಿಂ. ಪುತ್ತೂರಿನಲ್ಲಿ ಜಯ 1.5 ಕ್ವಿಂ., ಜ್ಯೋತಿ 14 ಕ್ವಿಂ., ಒಟ್ಟು 15.5 ಕ್ವಿಂ., ಸುಳ್ಯದಲ್ಲಿ ಜಯ 3 ಕ್ವಿಂ. ಬಿತ್ತನೆ ಬೀಜ ಸಂಗ್ರಹವಿದೆ. ಈ ವರೆಗೆ ಮಂಗಳೂರಿನಲ್ಲಿ 54.75 ಕ್ವಿಂ., ಬಂಟ್ವಾಳದಲ್ಲಿ 27 ಕ್ವಿಂ. ಹಾಗೂ ಪುತ್ತೂರಿನಲ್ಲಿ 2.75 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದೆ. 2019-20ನೇ ಸಾಲಿನಲ್ಲಿ ಒಟ್ಟು 6,250 ಹೆ. ಪ್ರದೇಶದಲ್ಲಿ ರಬಿ ಭತ್ತದ ಬೆಳೆ ಗುರಿ ಇರಿಸಿಕೊಳ್ಳಲಾಗಿತ್ತು. ಆದರೆ 2,486 ಹೆಕ್ಟೇರ್ ಸಾಧನೆ ಮಾತ್ರ ಸಾಧ್ಯವಾಗಿತ್ತು.
ಮಂಗಳೂರು ತಾಲೂಕಿನಲ್ಲಿ 2,000 ಹೆ. ಗುರಿಯಲ್ಲಿ 565 ಹೆ., ಬಂಟ್ವಾಳದಲ್ಲಿ 1,500 ಹೆ.ನಲ್ಲಿ 1,050 ಹೆ., ಬೆಳ್ತಂಗಡಿಯಲ್ಲಿ 2,000 ಹೆ.ನಲ್ಲಿ 540 ಹೆ., ಪುತ್ತೂರಿನಲ್ಲಿ 500 ಹೆ.ನಲ್ಲಿ 81 ಹೆ. ಹಾಗೂ ಸುಳ್ಯದಲ್ಲಿ 250 ಹೆ.ಗುರಿಯಲ್ಲಿ ಪೂರ್ತಿಯಾಗಿ ಬೆಳೆ ಸಾಧನೆ ಮಾಡಲಾಗಿತ್ತು.
ಖಾರಿಫ್: ಶೇ. 67ರಷ್ಟು ಕಟಾವು
ಮುಂಗಾರು (ಖಾರಿಫ್) ಭತ್ತದ ಬೆಳೆಯಲ್ಲಿ 11,247.5 ಹೆ.ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತ ಬೆಳೆಯಲ್ಲಿ ನ. 7ರ ವರೆಗೆ 7,523 ಹೆ.ಪ್ರದೇಶದ ಕಟಾವು ಮುಗಿದಿದ್ದು, ಶೇ. 67 ಪ್ರಗತಿ ಸಾಧಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ 5,720 ಹೆ.ನಲ್ಲಿ 4,100 ಹೆ., ಬಂಟ್ವಾಳದಲ್ಲಿ 3,065 ಹೆ.ನಲ್ಲಿ 1,200 ಹೆ., ಬೆಳ್ತಂಗಡಿಯಲ್ಲಿ 1,820 ಹೆ.ನಲ್ಲಿ 1,780 ಹೆ., ಪುತ್ತೂರಿನಲ್ಲಿ 392.5 ಹೆ.ನಲ್ಲಿ 283 ಹೆ. ಹಾಗೂ ಸುಳ್ಯದಲ್ಲಿ 250 ಹೆ.ನಲ್ಲಿ 160 ಹೆ. ಪ್ರದೇಶದ ಭತ್ತದ ಕಟಾವು ಕಾರ್ಯ ಮುಗಿದಿದೆ.
ಕೇಶವ್ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.