ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿ ಪ್ರಾತಿನಿಧ್ಯ ಸಿಗುವುದೆ ?
ವಿಧಾನ ಪರಿಷತ್: ಐವನ್ ಸಹಿತ ಐವರ ಸದಸ್ಯತ್ವ ಅವಧಿ ಜೂ. 23ಕ್ಕೆ ಮುಕ್ತಾಯ
Team Udayavani, Jun 17, 2020, 10:17 AM IST
- ಐವನ್ ಡಿ'ಸೋಜಾ, ವಿಧಾನ ಪರಿಷತ್ ಸದಸ್ಯರು
ಮಂಗಳೂರು: ವಿಧಾನ ಪರಿಷತ್‌ನ ನಾಮನಿರ್ದೇಶಿತ ಸದಸ್ಯರ ಪೈಕಿ 5 ಮಂದಿಯ ಸದಸ್ಯತ್ವದ ಅವಧಿ 2020 ಜೂ.23ಕ್ಕೆ ಕೊನೆಗೊಳ್ಳಲಿದ್ದು ಅದರಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ನ ಐವನ್ ಡಿ’ಸೋಜಾ ಕೂಡ ಒಬ್ಬರು. ಖಾಲಿಯಾಗುವ ಅವರ ಸ್ಥಾನಕ್ಕೆ ದ.ಕ ಜಿಲ್ಲೆಯವರನ್ನೇ (ಬಿಜೆಪಿ/ಕಾಂಗ್ರೆಸ್) ನಾಮನಿರ್ದೇಶನ ಮಾಡಲಾಗುವುದೇ ಎಂಬ ಕುತೂಹಲವಿದೆ. ಸದ್ಯ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಐವನ್ ಡಿ’ಸೋಜಾ ಮತ್ತು ಹರೀಶ್ ಕುಮಾರ್ ದ.ಕ. ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಐವನ್ ಅವರ ಅವಧಿ ಕೊನೆಗೊಂಡ ಬಳಿಕ ಉಳಿಯುವುದು ಹರೀಶ್ ಕುಮಾರ್ ಮಾತ್ರ. ಅವರ ಸದಸ್ಯತ್ವದ ಅವಧಿ 2024ರ ವರೆಗೆ ಇರುತ್ತದೆ.
ರಾಜ್ಯದಲ್ಲಿ ಈಗ ಬಿಜೆಪಿ ಸರಕಾರ ಇರುವುದರಿಂದ ಐವನ್ ಅವರ ಪುನರ್ ನಾಮ ನಿರ್ದೇಶನವಾಗಲಿ, ಅವರಿಂದ ತೆರವಾಗುವ ಸ್ಥಾನಕ್ಕೆ ಬೇರೊಬ್ಬ ಕಾಂಗ್ರೆಸಿಗರ ನಾಮ ನಿರ್ದೇಶನ ಕಷ್ಟಸಾಧ್ಯ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಬಲ ಹೆಚ್ಚಿರುವುದರಿಂದ ಚುನಾವಣೆ ನಡೆಯುವ 11 ಸ್ಥಾನಗಳ ಪೈಕಿ ಕಾಂಗ್ರೆಸಿಗರಿಗೆ ಗೆಲ್ಲುವ ಅವಕಾಶ 2 ಸ್ಥಾನಕ್ಕೆ ಮಾತ್ರ. ಐವನ್ ಸ್ಥಾನಕ್ಕೆ ಬಿಜೆಪಿಯಿಂದ ನಾಮ ನಿರ್ದೇಶನ ಮಾಡುವ ಬಗ್ಗೆಯೂ ಚಿಂತನೆ ಆರಂಭವಾಗಿದೆ. ಮೋನಪ್ಪ ಭಂಡಾರಿ ಸಹಿತ 3-4 ಮಂದಿ ಆಕಾಂಕ್ಷಿಗಳ ಹೆಸರು ಬಿಜೆಪಿಯಿಂದಲೂ ಕೇಳಿ ಬರುತ್ತಿದೆ.
ಕೋರ್ ಸಮಿತಿಯಲ್ಲಿ ಚರ್ಚೆ
ಪರಿಷತ್ ಚುನಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಮತ್ತು ಕೋರ್ ಕಮಿಟಿ ಚರ್ಚೆ ನಡೆಸಲಿದೆ. ಅದರಲ್ಲಿ ದ.ಕ ಜಿಲ್ಲೆಯ ಅವಕಾಶಗಳ ಬಗೆಗೂ ಪ್ರಸ್ತಾವವಾಗಲಿದೆ.
– ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ
ಮರು ಆಯ್ಕೆ ಪಕ್ಷಕ್ಕೆ ಬಿಟ್ಟಿದ್ದು
ಕಳೆದ 6 ವರ್ಷಗಳಲ್ಲಿ ನಾನು ಸದನದಲ್ಲಿ ಜಿಲ್ಲೆಯ ಪರವಾಗಿ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದೇನೆ. ನನಗೆ ಲಭಿಸಿದ ಅನುದಾನವನ್ನು ಜಿಲ್ಲೆಯ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸಿದ್ದೇನೆ. ಸಿಎಂ ಪರಿಹಾರ ನಿಧಿಯಿಂದ ನೂರಾರು ಮಂದಿಗೆ ವೈದ್ಯಕೀಯ ಸೌಲಭ್ಯ ಪಡೆಯಲು ನೆರವಾಗಿದ್ದೇನೆ. ನನ್ನ ಮರು ಆಯ್ಕೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ.
– ಐವನ್ ಡಿ’ಸೋಜಾ, ವಿಧಾನ ಪರಿಷತ್ ಸದಸ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.