![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 5, 2021, 2:41 PM IST
ಬಜಪೆ, ಮಾ. 4: ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಿದ ಜಾಗದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಗೋಶಾಲೆಯನ್ನು ಜಿಲ್ಲಾಡಳಿತದ ನಿರ್ದೇಶನದಂತೆ ಕೆಐಎಡಿಬಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನಲ್ಲಿ ಜೆಸಿಬಿ ಮೂಲಕ ಗುರುವಾರ ತೆರವುಗೊಳಿಸಿದರು.
ಈ ಕಾರ್ಯಾಚರಣೆ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ನಡೆಯಿತು. ಕೆಂಜಾರಿನ ಈ ಪ್ರದೇಶದಲ್ಲಿ ಕೆಐಎಡಿಬಿಯ 360 ಎಕ್ರೆ ಜಾಗ ಕೋಸ್ಟ್ ಗಾರ್ಡ್‌ಗೆ ಮೀಸಲಿಡಲಾಗಿತ್ತು. ಈ ಜಾಗದಲ್ಲಿ ಅಕ್ರಮ ಗೋಶಾಲೆಯನ್ನು ಖಾಸಗಿ ವ್ಯಕ್ತಿಯೊರ್ವರು ನಡೆಸುತ್ತಿದ್ದು ಈ ಅತಿಕ್ರಮಣ ತೆರವಿನ ಬಗ್ಗೆ ಕೆಂಜಾರಿನಲ್ಲಿ ನಾಗರಿಕ ಹಿತರಕ್ಷಣ ವೇದಿಕೆ ಬಜಪೆ ವಲಯದಿಂದ ಪ್ರತಿಭಟನೆ ಹಾಗೂ ಅವರಿಂದ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮನವಿ ನೀಡಲಾಗಿತ್ತು.
ಗೋಶಾಲೆಯಲ್ಲಿ ಸುಮಾರು 300 ಹಸುಗಳಿದ್ದು, ಇದೀಗ ಗೋಶಾಲೆ ತೆರವಿನಿಂದಾಗಿ ಹಸುಗಳು ಬೀದಿ ಬಿದ್ದಿರುವುದಾಗಿ ಗೋ ಶಾಲೆ ಮಾಲೀಕರು ದೂರಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.