ಮಂಗಳೂರಿನಲ್ಲಿ ಕೋವಿಡ್-19 ಸೋಂಕಿಗೆ ವೃದ್ಧ ಸಾವು
Team Udayavani, Jun 23, 2020, 2:43 PM IST
ಮಂಗಳೂರು: ಕೋವಿಡ್-19 ಸೋಂಕಿಗೆ ಮಂಗಳೂರಿನಲ್ಲಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದ 70 ವರ್ಷದ ವ್ಯಕ್ತಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೇರಿದೆ. ಮತ್ತೆ ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣಹೊಂದಿದ್ದಾರೆ.
ಜೂನ್ 7ರಂದು ಬೆಂಗಳೂರಿನಿಂದ ಆಗಮಿಸಿದ್ದ 70 ವರ್ಷ ಪ್ರಾಯದ ವೃದ್ಧ ಮಧುಮೇಹ ಮತ್ತು ನ್ಯೂಮೋನಿಯದಿಂದ ಬಳಲುತ್ತಿದ್ದರು. ಜೂ.12 ರಂದು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ SARI ಪ್ರಕರಣದಿಂದ ದಾಖಲಾಗಿದ್ದರು. ಸದ್ಯ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನ ಹೊಂದಿದ್ದಾರೆ.
ಸೋಮವಾರ ಸಂಜೆಯ ತನಕದ ಆರೋಗ್ಯ ಇಲಾಖೆ ವರದಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 437 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ. 244 ಜನರು ಬಿಡುಗಡೆಯಾಗಿದ್ದು, 184 ಸಕ್ರಿಯ ಪ್ರಕರಣಗಳಿವೆ.