ನೋಟು ಅಮಾನ್ಯ: ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
Team Udayavani, Nov 10, 2018, 12:27 PM IST
ಮಹಾನಗರ: ದೇಶದ ಆರ್ಥಿಕತೆ ದಿವಾಳಿಯಂಚಿಗೆ ತಲುಪಿದಾಗ ಮಾತ್ರ ಬ್ಯಾಂಕ್‌ನ ಮೀಸಲು ಹಣವನ್ನು ಬಳಕೆ ಮಾಡುತ್ತಾರೆ. ಕೇಂದ್ರ ಸರಕಾರವು ಆರ್‌ಬಿ ಐ ಮೀಸಲು ಹಣದ ಮೇಲೆ ಕನ್ನ ಹಾಕಲು ಹೊರಟಿರುವುದು ದೇಶದ ಆರ್ಥಿಕ ದಿವಾಳಿಯ ಲಕ್ಷಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.
ಕೇಂದ್ರ ಸರಕಾರದ ನೋಟು ಅಮಾನ್ಯದಿಂದ ಜನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ವಿಜಯ ಬ್ಯಾಂಕ್‌ನ್ನು ಉಳಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಶುಕ್ರವಾರ ಮಾತನಾಡಿದರು.
ರಿಸರ್ವ್ ಬ್ಯಾಂಕ್‌ನಲ್ಲಿರುವ 6.66 ಸಾವಿರ ಕೋ.ರೂ.ಗಳಿಗಿಂತ ಹೆಚ್ಚು ಮೀಸಲು ಹಣದ ಮೇಲೆ ಕನ್ನ ಹಾಕುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಸಿಬಿಐಯಂತಹ ಸ್ವತಂತ್ರ ಸಂಸ್ಥೆಯನ್ನೂ ನಾಶ ಮಾಡುವ ಕೆಲಸ ಮೋದಿ ಸರಕಾರ ದಿಂದ ಆಗುತ್ತಿದೆ ಎಂದವರು ಆಪಾದಿಸಿದರು.
ಕೈಗಾರಿಕೆಗಳ ಅಧಃಪತನ
ನೋಟು ಅಮಾನ್ಯ ಮಾಡಿದರೆ ಕಪ್ಪು ಹಣ ನಿಗ್ರಹವಾಗಿ ದೇಶದ ಆರ್ಥಿಕ ಶಕ್ತಿ ಉತ್ತಮವಾಗುತ್ತದೆ ಎಂದೆಲ್ಲ ಸುಳ್ಳು ಮಾಹಿತಿಗಳನ್ನು ಕೇಂದ್ರ ಸರಕಾರ ನೀಡಿತ್ತು. ಆದರೆ ನೋಟು ಅಮಾನ್ಯವಾಗಿ 2 ವರ್ಷ ಕಳೆದರೂ ಅದರ ಪರಿಣಾಮವನ್ನು ಜನ ಈಗಲೂ ಅನುಭವಿಸುತ್ತಿದ್ದಾರೆ. ಇದರಿಂದಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನ ತತ್ತರಿಸುವಂತಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅಧಃಪತನ ದತ್ತ ಸಾಗಿವೆ. ನೋಟು ಅಮಾನ್ಯದಿಂದಾಗಿ ದೇಶದ ಇಡೀ ವ್ಯವಸ್ಥೆಯೇ ಸಮತೋಲನ ತಪ್ಪಿದೆ ಎಂದವರು ವಿಷಾದಿಸಿದರು.
ಮೋದಿ ಜಿಂದಾಬಾದ್!
ಸುಳ್ಳು ಭರವಸೆ ಮತ್ತು ಪ್ರಚಾರದ ಉದ್ದೇಶವನ್ನಿಟ್ಟುಕೊಂಡು ಜನ ಸಾಮಾನ್ಯರನ್ನು ನಿರಂತರ ಮೋಸ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಎಲ್ಲಿ ಹೋದರೂ ಮೋದಿ ಮೋದಿ ಎಂದು ಹೇಳುವುದೇ ಅವರ ಕೆಲಸವಾಗಿದೆ. ಹಿಂದೆಲ್ಲ ಕೃಷ್ಣಾಷ್ಟಮಿ, ಗಣೇಶ ಚೌತಿ ಹಬ್ಬ ಹರಿದಿನಗಳಲ್ಲಿ ಕೃಷ್ಣ, ಗಣೇಶನ ಹೆಸರು ಹೇಳುತ್ತಿದ್ದರು. ಈಗ ಅಷ್ಟಮಿ, ಚೌತಿಯಲ್ಲಿ, ಮೆರವಣಿಗೆಗಳಲ್ಲಿಯೂ ಮೋದಿ ಜಿಂದಾಬಾದ್ ಎನ್ನಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿ’ಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಬಿ.ಎ. ಮೊದಿನ್ ಬಾವ, ಮೇಯರ್ ಭಾಸ್ಕರ್ ಮೊಲಿ, ಕಾಂಗ್ರೆಸ್ ನಾಯಕರಾದ ಮೋಹನ್ ಪಿ.ವಿ., ಕಳ್ಳಿಗೆ ತಾರನಾಥ ಶೆಟ್ಟಿ, ಜಿ.ಎ. ಬಾವ, ಎಂ.ಎಸ್. ಮೊಹಮ್ಮದ್, ನವೀನ್ ಡಿ’ಸೋಜಾ, ಯು. ಕೆ. ಮೋನು, ಶಶಿಧರ್ ಹೆಗ್ಡೆ, ಬಲ್‌ರಾಜ್ ರೈ, ಸದಾಶಿವ ಉಳ್ಳಾಲ್, ಪುರುಷೋತ್ತಮ ಚಿತ್ರಾಪುರ, ಇಬ್ರಾಹಿಂ ಕೋಡಿಜಾಲ್, ವಿಶ್ವಾಸ್‌ದಾಸ್, ನೀರಜ್‌ಪಾಲ್, ಕವಿತಾ ಸನಿಲ್, ಪ್ರವೀಣ್ ಆಳ್ವ, ಟಿ.ಕೆ. ಸುಧೀರ್, ಖಾಲಿದ್ ಉಜಿರೆ, ನಜೀರ್ ಬಜಾಲ್, ಅಶೋಕ್ ಡಿ.ಕೆ., ದೀಪಕ್ ಪೂಜಾರಿ ಮತ್ತಿತರರಿದ್ದರು.
ವಿಜಯ ಬ್ಯಾಂಕ್ ಜಿಲ್ಲೆಯ ಸ್ವಾಭಿಮಾನದ ಸಂಕೇತ
ಎ.ಬಿ. ಶೆಟ್ಟಿ ಅವರು ಆರಂಭಿಸಿದ, ಮೂಲ್ಕಿ ಸುಂದರರಾಮ ಶೆಟ್ಟಿ ಅವರ ದೂರದೃಷ್ಟಿಯ ಫಲವಾದ ವಿಜಯ ಬ್ಯಾಂಕ್ ನಮ್ಮ ಜಿಲ್ಲೆಯ ಗೌರವದ ಪ್ರತೀಕವಾಗಿದೆ. ಜಿಲ್ಲೆಯ ಸ್ವಾಭಿಮಾನದ ಸಂಕೇತ ಈ ಬ್ಯಾಂಕ್. ಲಾಭದಾಯಕವಾಗಿ ಮುನ್ನಡೆಯುತ್ತಿರುವ ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿರುವ ದೇನಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲು ಹೊರಟಿರುವುದು ಖಂಡನೀಯ ಎಂದು ರಮಾನಾಥ ರೈ ತಿಳಿಸಿದರು. ಜಿಲ್ಲೆಯ ಸಂಸದರು, ಶಾಸಕರು ವಿಜಯಾ ಬ್ಯಾಂಕ್‌ನ ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಬ್ಯಾಂಕ್ ವಿಲೀನಗೊಂಡಲ್ಲಿ ಸಂಸದರು ಮತ್ತು ಶಾಸಕರು ಇದ್ದೂ ಇಲ್ಲದಂತೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.