ಹರಿದು ಬರಲಿ ಅಭಿವೃದ್ಧಿಯ ನೀರು: ಮಂಗಳೂರು ನಗರ ಈ ಗ್ರಾಮದ ನೆಂಟ
Team Udayavani, Jun 24, 2022, 5:34 PM IST
ಚೇಳ್ಯಾರು: ಮಂಗಳೂರು ಮಹಾನಗರ ಪಾಲಿಕೆ ಗಡಿಭಾಗದಲ್ಲಿರುವ ಚೇಳಾçರು ಕೃಷಿ, ಹೈನುಗಾರಿಕೆಯನ್ನು ನೆಚ್ಚಿ ಕೊಂಡ ಗ್ರಾಮ. ಜನಸಂಖ್ಯೆ ಅಂದಾಜು ಐದು ಸಾವಿರ.
ಪಟ್ಟಣ ಹತ್ತಿರದ ನೆಂಟನಾಗಿರುವುದರಿಂದ ಈ ಗ್ರಾಮದ ಹಲವರು ಪಟ್ಟಣದ ಕೈಗಾರಿಕೆ ಹಾಗೂ ಇತರ ಉದ್ಯೋಗಕ್ಕೆ ತೆರಳುತ್ತಾರೆ. ಮುಡಾ ಬಡಾವಣೆ, ಖಾಸಗಿ ಬಡಾವಣೆ ಇಲ್ಲಿ ನಿರ್ಮಾಣವಾಗುತ್ತಿದ್ದು ನಗರದಂತೆ ಬೆಳೆಯುವ ಮುನ್ಸೂಚನೆ ಗೋಚರಿಸುತ್ತಿದೆ.
ಕೃಷಿಯ ಕೀರ್ತಿ ಈ ಗ್ರಾಮದಲ್ಲಿ ಹಲವಾರು ಕೃಷಿಕರು ಕೃಷಿಗಾಗಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದವರಿದ್ದಾರೆ. ಪ್ರತೀ ವರ್ಷ ನೂರಾರು ಎಕರೆ ಭೂಮಿಯಲ್ಲಿ ಭತ್ತ ಬೇಸಾಯ ಮಾಡಲಾಗುತ್ತದೆ. ನಗರಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ಹೆಚ್ಚಿನ ಬೇಸಾಯ ನಡೆಯುತ್ತಿದೆ. ಹಡಿಲು ಭೂಮಿ ಬೇಸಾಯಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ.
ಎಂಆರ್‌ಪಿಎಲ್ ನಿರ್ವಸಿತರ ಕಾಲನಿ ಇಲ್ಲಿದೆ. ಇಲ್ಲಿನ ಪ್ರಮುಖ ಮತ್ತು ಕಾಲನಿಯ ಹರಿದು ಬರಲಿ ಅಭಿವೃದಿ œಯ ನೀರು ಮಂಗಳೂರು ನಗರ ಈ ಗ್ರಾಮದ ನೆಂಟ ಚೇಳಾçರು ಗ್ರಾಮ ಪಂಚಾಯತ್ ಕಚೇರಿ. ನಂದಿನಿ ನದಿಯಲ್ಲಿ ಹೂಳು ತುಂಬಿರುವ ಪ್ರದೇಶ. ಚೇಳಾçರು ಗ್ರಾಮರಸ್ತೆಗಳು ವಿಸ್ತರಣೆಯಾಗಿವೆ. ಇನ್ನು ಕೆಲವು ರಸ್ತೆಗಳಿಗೆ ಡಾಮರು ಹಾಕಿದ್ದರೂ ದುರಸ್ತಿ ಅಗತ್ಯವಿದೆ.
ಕುಡಿಯುವ ನೀರಿನ ವ್ಯವಸ್ಥೆ ಈಗ ಸ್ವಲ್ಪ ಸುಧಾರಿಸಿದೆ. ಇನ್ನಷ್ಟು ಸುಧಾರಿಸಬೇಕಿದೆ. ಅಗತ್ಯವಿದ್ದಾಗ ಪಂಚಾಯತ್ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಜಲಜೀವನ್ ಮಿಷನ್ ಯೋಜನೆ ಜಾರಿಗೊಂಡರೆ ನೀರಿನ ಸಮಸ್ಯೆ ಪರಿಹಾರವಾಗಬಹುದು ಎಂಬುದು ಗ್ರಾಮಸ್ಥರ ಲೆಕ್ಕಾಚಾರ. ಯೋಜನೆಯ ಅನುಷ್ಠಾನ ಪ್ರಗತಿಯಲ್ಲಿದೆ.
ಮಾಲಿನ್ಯ ತಡೆ ಇಲ್ಲಿಯೂ ನಂದಿನಿ ನದಿಯೇ ಜೀವಾಳ. ಆದರೆ ಅದರಲ್ಲಿ ಹೂಳು ತುಂಬಿದ ಪರಿಣಾಮ ಕೃಷಿಗೆ ಸಮಸ್ಯೆಯಾಗುತ್ತಿದೆ. ಹೂಳು ತೆಗೆದು ಕೃಷಿಗೆ ಅನುಕೂಲ ಮಾಡಿಕೊಟ್ಟರೆ ಗ್ರಾಮದ ಆರ್ಥಿಕತೆಯೂ ಬೆಳೆಯಬಹುದು. ಕೃಷಿಗೆ ಪೂರಕವಾಗಿ ನಂದಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿದಲ್ಲಿ ಗ್ರಾಮದ ನೀರಿನ ಬೇಡಿಕೆಯೂ ಈಡೇರಲಿದೆ. ಕೃಷಿಗೂ ಉತ್ತೇಜನ ದೊರಕಲಿದೆ. ಇದರೊಂದಿಗೆ ನದಿ ಮಾಲಿನ್ಯ ವಾಗದಂತೆ ತಡೆದರೆ ಮೀನುಗಾರಿಕೆ ವೃತ್ತಿಗೂ ಅನುಕೂಲವಾಗಲಿದೆ. ಅಕ್ರಮವಾಗಿ ಒಳಚರಂಡಿ ನೀರು ನಂದಿನಿ ನದಿಗೆ ಸೇರದಂತೆ ತಡೆಗೆ ಕ್ರಮ ಕೈಗೊಳ್ಳಬೇಕಿದೆ. ನದಿಯ ಹೂಳು ತೆಗೆಯಲು ಅಂದಾಜು 5 ಕೋ. ರೂ ಅಗತ್ಯವಿದ್ದು, ಸರಕಾರ ಅನು ಮೋದಿಸಬೇಕಿದೆ. ಹಾಗಾಗಿ ಮಾಲಿನ್ಯ ಮುಕ್ತ ಮಾಡುವ ಕೆಲಸ ಆಗ ಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹ.
ಘನ ತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ರಮ ಕೈಗೊಂಡಿದ್ದರೂ ಹಸಿ,ಒಣ ಕಸ ವಿಂಗಡನೆ ವ್ಯವಸ್ಥೆ ಆರಂಭವಾಗಿಲ್ಲ. ಹೀಗಾಗಿ ಕಸವನ್ನು ರಸ್ತೆ ಬದಿ ಬಿಸಾಡುವ ಪ್ರವೃತ್ತಿ ಇದೆ. ಇದಕ್ಕೂ ಪರಿಹಾರ ಹುಡುಕಬೇಕಿದೆ. ದಾರಿ ದೀಪದ ವ್ಯವಸ್ಥೆ ಸುಧಾರಿಸಬೇಕಿದೆ.
ಸೀಮಿತ ಸಂಖ್ಯೆಯಲ್ಲಿ ಖಾಸಗಿ ಬಸ್ ಗಳ ಸಂಚಾರವಿದೆ. ಒಂದು ನರ್ಮ್ ಬಸ್ ಮದ್ಯ ಗ್ರಾಮದಲ್ಲಿ ಸಂಚರಿಸುತ್ತಿದ್ದು, ಚೇಳಾçರಿಗೂ ಸೇರಿ ಎರಡಾದರೂ ನರ್ಮ್ ಬಸ್ ಅಗತ್ಯವಿದೆ ಎಂಬುದು ಜನರ ಬೇಡಿಕೆ.
ಅಗೋಳಿ ಮಂಜಣ್ಣ ನೆನಪು ತುಳುನಾಡಿನ ವೀರ ಪುರುಷ ಅಗೋಳಿ ಮಂಜಣ್ಣ ಸುರತ್ಕಲ್ ಕಟ್ಲದಲ್ಲಿ ಜನಿಸಿದರೂ, ಚೇಳಾçರುಗುತ್ತು ಅವರ ಅಜ್ಜಿ ಮನೆ ಚೇಳಾçರಿನಲ್ಲಿದ್ದು 300-400 ವರ್ಷಗಳ ಇತಿಹಾಸವಿದೆ. ವಿವಿಧ ಕಾರ್ಯಕ್ರಮ ಇವರ ಹೆಸರಿನಲ್ಲಿ ಜರಗುತ್ತದೆ.
ಮೂಲ ಸೌಕರ್ಯ ಒದಗಿಸಿ ಚೇಳ್ಯಾರುವಿನಲ್ಲಿ ಶಾಲೆ, ಪದವಿಪೂರ್ವ ಕಾಲೇಜಿದೆ. ಬೇರೆ ಆರಂಭಿಸುವ ಬದಲು ಇದನ್ನೇ ಸುಸಜ್ಜಿತಗೊಳಿಸಿದರೆ ಉತ್ತಮ. ನಗರ ಸಮೀಪ ಇದ್ದು, ಇನ್ನಷ್ಟು ಮೂಲ ಸೌಕರ್ಯ ಒದಗಿಸಬೇಕು. –ವೇಣುವಿನೋದ್ ಶೆಟ್ಟಿ, ಚೇಳ್ಯಾರು
ಲಕ್ಷ್ಮೀ ನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.