![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 3, 2018, 1:44 PM IST
ಮಹಾನಗರ : ಇತರರಿಗೆ ಗೌರವ ನೀಡಿ ತನ್ನ ಗೌರವವನ್ನು ಕಾಪಾಡಿಕೊಳ್ಳುವುದು ಭಾರತೀಯ ಸಂಸ್ಕೃತಿಯಾಗಿದೆ. ಪರಿಶುದ್ಧ ಹೃದಯ ಹಾಗೂ ಮನಸ್ಸು ಇದ್ದವರಿಗೆ ಮಾತ್ರ ಇತರರನ್ನು ಗೌರವಿಸಿ ಸ್ವಾಭಿಮಾನದೊಂದಿಗೆ ಬದುಕಲು ಸಾಧ್ಯ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್. ಎಜುಕೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.
ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ವಿದಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಸಂಬಂಧಗಳಿಗಿಂತಲೂ ಮುಖ್ಯವಾದದ್ದು, ಮಾನವೀಯ ಸಂಬಂಧ. ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಪರಸ್ಪರ ಸಂಬಂಧಗಳನ್ನು ಸುಧಾರಿಸಿ ಅದನ್ನು ಬಲಪಡಿಸುವ ಮೂಲಕ ತನ್ನ ಯಶಸ್ಸಿನ ಜತೆಗೆ ಇತರರ ಯಶಸ್ಸಿಗೂ ಸಹಕಾರಿಯಾಗಬೇಕು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಗಳಾದ ಶಿಸ್ತು, ತಾಳ್ಮೆ, ಪರಿಶ್ರಮ, ತ್ಯಾಗ ಮುಂತಾದ ಗುಣಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಜೀವನದಲ್ಲಿ ಯಶಸ್ಸು ಹಾಗೂ ಆತ್ಮ ಸಂತೃಪ್ತಿ ಹೊಂದಬಹುದು ಎಂದರು.
ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಲತಾ ಜಿ. ರಾವ್, ಕರಾವಳಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ| ನಾರಾಯಣ ಸ್ವಾಮಿ, ಪ್ರೊ| ಮಹಮ್ಮದ್ ಮುಬೀನ್ ಹಾಗೂ ಡಾ| ರವಿಕುಮಾರ್ ಉಪಸ್ಥಿತರಿದ್ದರು. ಐಸಮ್ಮ ಸ್ವಾಗತಿಸಿದರು. ಧನುಷ್ ವಂದಿಸಿದರು. ಕಾರ್ಯಕ್ರಮವನ್ನು ಮಹಮ್ಮದ್ ಶರೀಫ್ ಮತ್ತು ಅಪೂರ್ವ ಆಳ್ವ ನಿರೂಪಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.