ಕಾರಾಗೃಹದೊಳಗೆ ನಳನಳಿಸುತ್ತಿದೆ ಕೈ ತೋಟ; ನರ್ಸರಿ
ಮಂಗಳೂರಿನ ಜಿಲ್ಲಾ ಕಾರಾಗೃಹ
Team Udayavani, Apr 21, 2022, 11:56 AM IST
ಮಹಾನಗರ: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಕೈಯಿಂದಲೇ ಸಿದ್ಧಗೊಂಡಿರುವ ತರಕಾರಿ ತೋಟ ಈಗ ಫಲ ನೀಡಲಾರಂಭಿಸಿದ್ದು, ಅಡಿಕೆ ಸಸಿಗಳನ್ನೊಳಗೊಂಡ ನರ್ಸರಿ ಬೆಳೆದು ನಿಂತಿದೆ.
ಮೂರು ತಿಂಗಳ ಹಿಂದೆ ಸುಮಾರು 20 ಮಂದಿ ವಿಚಾರಣಾಧೀನ ಕೈದಿಗ ಳಿಗೆ ತೋಟಗಾರಿಕೆ ಬಗ್ಗೆ ತರಬೇತಿ ನೀಡ ಲಾಗಿತ್ತು. ಇದೀಗ ಅವರು ಬೆಳೆಸಿದ ತರಕಾರಿ ತೋಟ ಫಲ ನೀಡುತ್ತಿದೆ. ಸಾವಿರಾರು ಹೂವಿನ ಗಿಡಗಳು ಕೂಡ ಸೊಂಪಾಗಿ ಬೆಳೆದಿವೆ.
ಕಾರಾಗೃಹದಲ್ಲಿಯೇ ಬಳಕೆ
ಮೂಲಂಗಿ, ಬದನೆಕಾಯಿ, ಮೆಣಸಿನ ಕಾಯಿ ಗಿಡಗಳು, ಬಸಳೆ ಬಳ್ಳಿ ಜತೆಗೆ ಅಡಿಕೆ ಸಸಿಗಳನ್ನು ಕೂಡ ಬೆಳೆಯಲಾಗಿದೆ.
ಹೂವಿನ ಗಿಡಗಳು ನಳನಳಿಸುತ್ತಿವೆ. ಈಗಾಗಲೇ ಕೈತೋಟದಲ್ಲಿ ಸಿಕ್ಕಿರುವ ತರಕಾರಿಯನ್ನು ಕಾರಾಗೃಹದಲ್ಲಿ ಅಡುಗೆಗೆ ಬಳಸಲಾಗಿದೆ. ಅಡಕೆ ಸಸಿಗಳನ್ನು ಅಗತ್ಯವುಳ್ಳವರಿಗೆ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
ನರ್ಸರಿ ತರಬೇತಿಗೆ 25ರಿಂದ 45 ವರ್ಷ ವಯೋಮಾನದ ಸುಮಾರು 20 ವಿಚಾರಣಾಧೀನ ಕೈದಿಗಳು ಆಸಕ್ತಿ ತೋರಿಸಿದ್ದು ಅವರಿಗೆ ಜಗನ್ನಾಥ ಮತ್ತು ಶ್ರವಣ್ ಶೆಣೈ ತರಬೇತಿ ನೀಡಿದ್ದಾರೆ.
ಕೆಲವು ವಿಚಾರಣಾಧೀನ ಕೈದಿಗಳಿಗೆ ಕರಕುಶಲ ವಸ್ತುಗಳ ತಯಾರಿಕೆಗೂ ತರಬೇತಿ ನೀಡಲಾಗಿದ್ದು ಅವರು ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ.ಕೇಂದ್ರ ಕಾರಾ ಗೃಹಗಳಲ್ಲಿ ಕೈದಿಗಳಿಗೆ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಿ ಆದಾಯಗಳಿಸಿ ಬದುಕಿನ ಬಗ್ಗೆ ಭರವಸೆ ಬೆಳೆಸಿಕೊಳ್ಳಲು ಅವಕಾಶ ಈಗಾಗಲೇ ನೀಡಲಾಗಿದೆ. ಇದೇ ಮಾದರಿಯಲ್ಲಿ ಜಿಲ್ಲಾ ಕಾರಾಗೃಹದಲ್ಲಿಯೂ ಕೌಶಲಾಭಿವೃದ್ಧಿ ಸಹಿತವಾದ ವೃತ್ತಿ ತರಬೇತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.