ದ.ಕ. ಜಿಲ್ಲೆ: 9 ಮಂದಿ ಸಾವು, 243 ಪಾಸಿಟಿವ್
Team Udayavani, Aug 11, 2020, 11:31 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 243 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದೇ ವೇಳೆ 9 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ. 519 ಮಂದಿ ಗುಣಮುಖರಾಗಿದ್ದಾರೆ.
23 ಮಂದಿಗೆ ಸೋಂಕಿತರ ಸಂಪರ್ಕದಿಂದ, 123 ಮಂದಿಗೆ ಇನ್‌ಫ್ಲೂಯೆನಾ ಲೈಕ್ ಇಲ್‌ನೆಸ್, 9 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್ ದೃಢಪಟ್ಟಿದೆ. 88 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ದೃಢ ಪ್ರಕರಣಗಳ ಪೈಕಿ 189 ಮಂದಿ ಮಂಗಳೂರು, 30 ಮಂದಿ ಬಂಟ್ವಾಳ, 6 ಮಂದಿ ಪುತ್ತೂರು, ನಾಲ್ವರು ಸುಳ್ಯ, 10 ಮಂದಿ ಬೆಳ್ತಂಗಡಿ ಹಾಗೂ ನಾಲ್ವರು ಹೊರ ಜಿಲ್ಲೆಯವರಾಗಿದ್ದಾರೆ.
ಸೋಂಕಿತರಲ್ಲಿ 94 ಪುರುಷರು, 43 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 75 ಮಂದಿ ಪುರುಷರು ಮತ್ತು 31 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ.
ಮೂಲ್ಕಿ: 5 ಪಾಸಿಟಿವ್
ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ಮಂಗಳವಾರ 5 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಾರ್ನಾಡು ಸದಾಶಿವ ನಗರದ ಮಹಿಳೆ, ಬಪ್ಪನಾಡು ಅಕ್ಕಸಾಲಿಗರ ಕೇರಿಯ ಮಹಿಳೆ ಹಾಗೂ ಪುರುಷ, ಕಟೀಲು ನಡುಗೋಡಿನ ಪುರುಷ, ಕೆಮ್ರಾಲ್ ಗ್ರಾಮದ ಮುಲ್ಲೊಟ್ಟಿನ ಪುರುಷ ಬಾಧಿತರು.
ಬಂಟ್ವಾಳ: 23 ಪಾಸಿಟಿವ್
ಬಂಟ್ವಾಳ: ತಾಲೂಕಿನಲ್ಲಿ ಮಂಗಳವಾರ 23 ಮಂದಿಗೆ ಕೊರೊನಾ ದೃಢಪಟ್ಟಿದೆ. ಬಿ.ಸಿ. ರೋಡ್, ಬಂಟ್ವಾಳ, ಇರಾ, ನಾವೂರು, ಬಿ.ಮೂಡ, ವಿಟ್ಲ, ಮಣಿನಾಲ್ಕೂರಿನ ತಲಾ ಇಬ್ಬರು, ಬಡಗಬೆಳ್ಳೂರು, ಕರಿಯಂಗಳ, ಅನಂತಾಡಿ, ಪಾಣೆಮಂಗಳೂರು, ತುಂಬೆ, ಪೆರುವಾಯಿ, ಕೇಪು, ಸಜೀಪನಡು, ಫರಂಗಿಪೇಟೆಯ ತಲಾ ಒಬ್ಬೊಬ್ಬರು ಬಾಧಿತರಾಗಿದ್ದಾರೆ. ಮೃತಪಟ್ಟ 9 ಮಂದಿಯ ಪೈಕಿ 9 ಮಂದಿ ಮಂಗಳೂರಿನವರು ಹಾಗೂ ಓರ್ವ ಹೊರ ಜಿಲ್ಲೆಯವರಾಗಿದ್ದಾರೆ.
ಪುತ್ತೂರು, ಕಡಬ: 9 ಪ್ರಕರಣ ದೃಢ
ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಮಂಗಳವಾರ ಒಟ್ಟು 9 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಬೆಟ್ಟಂಪಾಡಿಯ ಮಹಿಳೆ ಮತ್ತು ಪುರುಷ, ತಿಂಗಳಾಡಿಯ ಮಹಿಳೆ, ಕೆಮ್ಮಿಂಜೆಯ ಪುರುಷ, ಮಹಿಳೆ ಮತ್ತು ಬಾಲಕ, ಪರ್ಲಡ್ಕದ ಮಹಿಳೆ, ಕೂರ್ನಡ್ಕದ ಪುರುಷ, ಕಡಬ ತಾಲೂಕು ಕಾಣಿಯೂರಿನ ಪುರುಷ ಬಾಧಿತರಾಗಿದ್ದಾರೆ.
ವೃದ್ಧ ಸಾವು
ಅನಾರೋಗ್ಯದಿಂದ ಬಳಲುತ್ತಿದ್ದ ಕಬಕ ಶೇವಿರೆಯ 80 ವರ್ಷದ ವ್ಯಕ್ತಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಮಂಗಳವಾರ ಮೃತಪಟ್ಟಿದ್ದಾರೆ. ಅವರನ್ನು ಕೊರೊನಾ ಬಾಧಿಸಿ ರುವುದು ದೃಢಪಟ್ಟಿದೆ. ಮೊದಲಿನ ಕೋವಿಡ್- 19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಎರಡನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.