ಅಭಿವೃದ್ಧಿ ಹೆಸರಲ್ಲಿ ಮರ ಕಡಿಯದಿರಿ
Team Udayavani, Jul 15, 2018, 3:13 PM IST
ಆಧುನಿಕ ಜೀವನ ಶೈಲಿಗೆ ಪ್ರತಿಯೊಬ್ಬರು ಒಗ್ಗಿಕೊಂಡಾಗಿದೆ. ಕಣ್ಣಿಗೆ ಆಕರ್ಷವಾಗಿ ಕಾಣುವ ಜೀವನದ ಕಡೆಗೆ ಎಲ್ಲರ ಒಲವು. ಮಾಲ್, ಸಿನೆಮಾ ಎನ್ನುವ ಮಾಯಾಲೋಕದತ್ತ ಜನ ವಾಲಿಕೊಂಡಾಗಿದೆ. ಇದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ ನೈಸರ್ಗಿಕ ವಾತಾವರಣಕ್ಕೆ ಧಕ್ಕೆ ತರುವ ನಡೆಯ ಬಗ್ಗೆ ದನಿ ಎತ್ತುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದರೆ ಬೇಸರವಾಗುತ್ತದೆ.
ತಮ್ಮ ಸ್ವ ಹಿತಾಸಕ್ತಿಗಾಗಿ ಕಾಡುಗಳನ್ನು ಕಡಿದು ಕಟ್ಟಡಗಳನ್ನು ಕಟ್ಟುವ ಕೆಲಸವಾಗುತ್ತಿದೆ. ಇದರೊಂದಿಗೆ ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯುವ ಸನ್ನಿವೇಶಗಳು ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿದೆ. ಹೆಮ್ಮೆರವಾಗಿ ಬೆಳೆದ ಮರಗಳನ್ನು ಕಡಿಯುವುದು ಸುಲಭ. ಆದರೆ ಸಸಿ ನೆಟ್ಟು ಬೆಳೆಸುವುದು ಬಹಳ ಕಷ್ಟ ಎನ್ನುವ ಅಂಶ ಯಾರಿಗೂ ಮನದಟ್ಟಾಗುತ್ತಿಲ್ಲ.
ಗಿಡ, ಮರ, ಅರಣ್ಯ ನಾಶದಿಂದ ಪರಿಸರ ಹಾಗೂ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿರಬಹುದು. ಪ್ರಕೃತಿ ತನ್ನ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಕೃತಕ ನೆರೆ, ಸುನಾಮಿ ಮೊದಲಾದ ವಿಕೋಪಗಳ ಮೂಲಕ ತಿಳಿಸುತ್ತಿದೆ. ಆದರೆ ಜನರು ಪ್ರಕೃತಿಯ ಮೇಲಿನ ದಾಳಿಗಳನ್ನು ಮಂದುವರಿಸುತ್ತಿದ್ದಾರೆ. ಇತ್ತೀಚೆಗೆ ಮಂಗಳಾ ಸ್ಟೇಡಿಯಂ ಬಳಿ ವಾಲಿಬಾಲ್ ಆಡಲು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಹಲವಾರು ಮರಗಳನ್ನು ಕಡಿಯಲಾಗಿತ್ತು. ಇದಕ್ಕೆ ಪರಿಸರವಾದಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.
ನಗರ ಪ್ರದೇಶಗಳಲ್ಲಿ ಕೆಲವೇ ಕೆಲವು ಭಾಗಗಳಲ್ಲಿ ಮರಗಳಿವೆ. ಅದನ್ನು ವಿವಿಧ ಕಾಮಗಾರಿಗಳ ನೆಪದಲ್ಲಿ ಆಗಾಗ್ಗೆ ಕಡಿಯಲಾಗುತ್ತಿದೆ. ಇಂದು ಮರ ಕಡಿಯುವುತ್ತಿರುವ ಬಗ್ಗೆ ನಿರ್ಲಕ್ಷ್ಯ ತನಕ್ಕೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗಬಹುದು ಎಂಬುದನ್ನು ಮರೆಯಬಾರದು. ವರ್ಷಕ್ಕೊಮ್ಮೆ ವನಮಹೋತ್ಸವ ನಡೆಸಿದರೆ ಸಾಲದು. ರಸ್ತೆ ಬದಿಯಲ್ಲಿ ನೆಟ್ಟ ಮರವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗುವ ಜವಾಬ್ದಾರಿಯೂ ಇದೆ. ಒಂದು ವೇಳೆ ಇಲಾಖೆಗೆ ಇದು ಕಷ್ಟವಾದರೆ ಸ್ಥಳೀಯ ಸಂಘಸಂಸ್ಥೆಗಳಿಗೆ ಈ ಜವಾಬ್ದಾರಿಯನ್ನು ಹಂಚಬಹುದು. ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಸಂಸ್ಥೆಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿದರೆ ಕಾಡಿನ ಜತೆಗೆ ನಾಡಿನ ಅಭಿವೃದ್ಧಿಯೂ ಸಾಧ್ಯ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.