![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Apr 21, 2022, 1:23 PM IST
ಲಾಲ್‌ಬಾಗ್: ರಾಜ್ಯಾ ದ್ಯಂತ ಗುತ್ತಿಗೆದಾರರ ವಿಚಾರ ಚರ್ಚೆಯಲ್ಲಿ ರುವಾಗಲೇ, ಗುತ್ತಿಗೆದಾರರಿಗೆ ನೆರವಾದ ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ ವಿಚಾರ ಮನಪಾ ವ್ಯಾಪ್ತಿಯಲ್ಲಿ ಸಂಚಲನ ಸೃಷ್ಟಿಸಿದೆ.
ಸೆಕ್ಯುರಿಟಿಗೆ ಸಂಬಂಧಿಸಿದ ಟೆಂಡರ್ ನಿರ್ವಹಣೆ ಸಂದರ್ಭ ತಾಂತ್ರಿಕ ಪರಿಶೀಲನೆ ಸಮರ್ಪಕವಾಗಿ ನಡೆಸದೆ ಗುತ್ತಿಗೆಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯ ಸಹಾಯಕ ಎಂಜಿನಿಯರ್ ರಾಜೇಶ್ ಕುಮಾರ್ ಹಾಗೂ ಪ್ರಥಮ ದರ್ಜೆ ಸಹಾಯಕ ಪುಷ್ಪರಾಜ್ ಎಚ್. ಅಮಾನತುಗೊಂಡಿದ್ದಾರೆ. ಈ ಮುಖೇನ ಪಾಲಿಕೆ ಒಳಗಿನ ‘ಕಾಣದ ಕೆಲಸ’ ದ ವಿಚಾರ ಬಯಲಿಗೆ ಬಂದಿದ್ದು, ಇಂತಹ ಇನ್ನಷ್ಟು ಪ್ರಕರಣಗಳು ಪಾಲಿಕೆಯಲ್ಲಿ ನಡೆದಿವೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಏನಿದು ಪ್ರಕರಣ?
ಮಂಗಳೂರು ಪಾಲಿಕೆಯ ವಾರ್ಡ್ ನಂ.21 ರಿಂದ 40ರ ವ್ಯಾಪ್ತಿಯಲ್ಲಿ ಬರುವ ಮಂಗಳೂರು ಪಾಲಿಕೆ ಕಚೇರಿ, ನೀರು ಸರಬರಾಜು ರೇಚಕ ಸ್ಥಾವರ, ಉದ್ಯಾನವನಗಳಿಗೆ ಅಗತ್ಯವಿರುವ ಭದ್ರತೆ ಸಿಬಂದಿಯನ್ನು ಹೊರಗುತ್ತಿಗೆಯಲ್ಲಿ ಒದಗಿಸುವ ನಿರ್ವಹಣೆ ಕಾಮಗಾರಿಗೆ ಸಂಬಂಧಪಟ್ಟಂತೆ ಕೆಲವು ಮಾನದಂಡ ನಿಗದಿಪಡಿಸಿ ಇ-ಪ್ರೊಕ್ಯೂರ್‌ವೆುಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿತ್ತು. ಇದರಂತೆ 2ನೇ ಕರೆಗೆ ಒಟ್ಟು 4 ಜನ ಟೆಂಡರ್‌ದಾರರು ಬಿಡ್ ಸಲ್ಲಿಸಿದ್ದರು. ಈ ಪೈಕಿ ಓರ್ವರ ಬಿಡ್ ತಾಂತ್ರಿಕವಾಗಿ ಅರ್ಹತೆ ಹೊಂದಿಲ್ಲವಾದ್ದರಿಂದ ಅವರ ಬಿಡ್ ತಿರಸ್ಕರಿಸಿ ಉಳಿದ ಮೂರು ಜನ ಗುತ್ತಿಗೆದಾರರ ಆರ್ಥಿಕ ಬಿಡ್ ತೆರೆಯಲಾಗಿತ್ತು.
ಈ ಪೈಕಿ ಕಡಿಮೆ ದರ ಸೂಚಿಸಿದ ಓರ್ವ ಗುತ್ತಿಗೆದಾರರ ಟೆಂಡರ್ ಅಂಗೀಕರಿಸುವ ಬಗ್ಗೆ ಶಿಫಾರಸು ಆಗಿತ್ತು. ಈ ಟೆಂಡರ್ ನಲ್ಲಿ ಬಿಡ್‌ದಾರರು ಟೆಂಡರ್ ಸಲ್ಲಿಸುವ ಅವಧಿಯಲ್ಲಿ ಪಾಲಿಕೆ ನಿಗದಿಪಡಿಸುವ ಮಾನದಂಡದ ದಾಖಲೆಗಳನ್ನು ಪೋರ್ಟಲ್‌ನಲ್ಲಿ ಲಗತ್ತಿಸಬೇಕಾಗಿತ್ತು.
ಅದರಂತೆ ಪೊಲೀಸ್ ಇಲಾಖೆಯ ಪರವಾನಿಗೆ ಪತ್ರ ಸಲ್ಲಿಸಬೇಕಾಗಿತ್ತು. ಆದರೆ ಮಂಗಳೂರಿನಲ್ಲಿ ವ್ಯವಹಾರ ನಡೆಸಲು ಬೇಕಾದ ಪೊಲೀಸ್ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಅಂಗೀಕೃತಗೊಂಡ ಬಿಡ್‌ದಾರರು ಹೊಂದಿಲ್ಲ. ಆದರೆ, ಈ ಟೆಂಡರ್‌ನಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಸಮರ್ಪಕವಾಗಿ ತಾಂತ್ರಿಕ ಪರಿಶೀಲನೆ ನಡೆಸದೆ ಉದ್ದೇಶಪೂರ್ವಕವಾಗಿ ಮೇಲಧಿಕಾರಿಗಳ ಗಮನಕ್ಕೂ ತಾರದೆ ತಾಂತ್ರಿಕವಾಗಿ ಅರ್ಹತೆ ಹೊಂದಿರುವಾಗಿ ಶಿಪಾರಸ್ಸು ಮಾಡಿರುವುದು ಗಂಭೀರ ಕರ್ತವ್ಯ ಲೋಪ ಎಂದು ಆರೋಪಿಸಿ ಇಬ್ಬರು ಅಧಿಕಾರಿಗಳನ್ನು ಪಾಲಿಕೆ ಆಯುಕ್ತರು ಅಮಾನತುಗೊಳಿಸಿದ್ದಾರೆ.
ಇಬ್ಬರು ಅಮಾನತು, ಇಬ್ಬರಿಗೆ ಶೋಕಾಸ್ ನೋಟೀಸ್
ಟೆಂಡರ್‌ನಲ್ಲಿ ಕರ್ತವ್ಯ ಲೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ವಿಚಾರಣೆ ವೇಳೆ ಅವರ ಹೇಳಿಕೆ ಪಡೆದು ತಪ್ಪಿದ್ದರೆ ಅವರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು. – ಅಕ್ಷಯ್ ಶ್ರೀಧರ್, ಆಯುಕ್ತರು,ಮಹಾನಗರ ಪಾಲಿಕೆ
You seem to have an Ad Blocker on.
To continue reading, please turn it off or whitelist Udayavani.