ಮಳೆ ನೀರು ಹರಿಯುವ ಚರಂಡಿ ಮಣ್ಣು ಪಾಲು!
Team Udayavani, Apr 6, 2022, 10:21 AM IST
ಹಳೆಯಂಗಡಿ: ಕಳೆದ ವಾರ ಒಂದೆರಡು ಬಾರಿ ಹನಿ ಹನಿ ಮಳೆ ಬಂದು ಮಳೆಗಾಲದ ಮುನ್ಸೂಚನೆ ನೀಡಿದೆ. ಆದರೆ ಹಳೆಯಂಗಡಿ ಮತ್ತು ಪಡುಪಣಂಬೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿ, ಒಳ ರಸ್ತೆಯ, ಪಿಡಬ್ಲ್ಯುಡಿ ರಸ್ತೆಯಲ್ಲಿ ಮಳೆಗಾಲದಲ್ಲಿ ಸರಾಗವಾಗಿ ಹರಿಯಬೇಕಾದ ಚರಂಡಿ ಮಾತ್ರ ಮಣ್ಣುಪಾಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಮುಖ್ಯ ಜಂಕ್ಷನ್‌ನ ಕಮಲ್ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ಮಳೆಗಾಲದಲ್ಲಿ ನೀರು ನಿಂತು ಈಜುಕೊಳದ ಸ್ಥಿತಿ ನಿರ್ಮಾಣ ವಾಗುತ್ತದೆ. ಇಲ್ಲಿ ಚರಂಡಿಯೇ ನಿರ್ಮಾಣವಾಗಿಲ್ಲ, ಹೆದ್ದಾರಿ ನೇಕಾರ ಮಹಲ್‌ನ ಮುಂಭಾಗದಲ್ಲಿ ಕೊಳಚೆ ನೀರು ತುಂಬಿ ಹೊರ ಹರಿಯುತ್ತಿದೆ. ಮಳೆಗಾಲದಲ್ಲಿ ಹೀಗೆಯೇ ಇದ್ದರೆ ನೇರವಾಗಿ ಕಟ್ಟಡಕ್ಕೆ ನೀರು ನುಗ್ಗಲಿದೆ. ಇನ್ನು ಕೆನರಾ ಬ್ಯಾಂಕ್‌ನ ಮುಂಭಾಗದಲ್ಲಿ ಇದ್ದ ಚರಂಡಿ ರಸ್ತೆಯಾಗಿ ಮಾರ್ಪಾಡಾಗಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಇದ್ದಾಗ ಹೆದ್ದಾರಿಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತ್ತು.
ಕುಸಿತದ ಭೀತಿ
ಹಳೆಯಂಗಡಿ ಹೆದ್ದಾರಿಯಿಂದ ಕೊಪ್ಪಲ ರಸ್ತೆಯ ತಿರುವಿನ ಬಳಿಯಿರುವ ರಾಜ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ಕಟ್ಟಿರುವ ಕಲ್ಲುಗಳು ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ. ಇದಕ್ಕೆ ಸಂಪರ್ಕದ ಹೆದ್ದಾರಿಯ ಕೆಳಭಾಗದಲ್ಲಿನ ಸಿಮೆಂಟ್ ಪೈಪ್‌ನಲ್ಲಿ ಹೂಳು ತುಂಬಿದೆ. ಚೇಳಾçರಿನ ತಿರುವಿನಲ್ಲಿರುವ ರೈಲ್ವೇ ಸೇತುವೆಯ ಕೆಳಭಾಗವು ತಗ್ಗು ಪ್ರದೇಶವಾಗಿದ್ದು ಎರಡೂ ಬದಿಯಲ್ಲಿ ಚರಂಡಿ ಇಲ್ಲದಿರುವುದರಿಂದ ಮಳೆ ನೀರು ಹಾಗೂ ಸೇತುವೆಯ ಮೇಲಿಂದ ಹರಿಯುವ ನೀರು ಸಂಗ್ರಹಗೊಂಡು ರಸ್ತೆಯನ್ನು ಮುಳುಗಿಸಲು ಸಜ್ಜಾಗಿದೆ.
ಹೂಳು ಎತ್ತುವ ಭರವಸೆ ಈಡೇರಿಲ್ಲ!
ಇಂದಿರಾನಗರದ ಜನವಸತಿ ಪ್ರದೇಶದ ಬಳಿಯ ಇಂದಿರಾ ಪಾರ್ಕ್ ಬಳಿಯ ಚರಂಡಿಯಲ್ಲಿ ಕೊಳಚೆ ನೀರಿನ ತ್ಯಾಜ್ಯ ಶೇಖರಣೆಗೊಂಡು ಮಳೆ ನೀರು ನೇರವಾಗಿ ರಸ್ತೆಯಲ್ಲಿಯೇ ಹರಿಯಲು ಮುಂದಾಗಿದೆ.
ಪಡುಪಣಂಬೂರು ಹೆದ್ದಾರಿಯ ಕಿರು ಸೇತು ವೆಯ ರಾಜ ಕಾಲುವೆಯಲ್ಲಿ ಕಳೆದ ವರ್ಷ 10 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ನಡೆದು ಬೆಳ್ಳಾಯರು ಮತ್ತು ಪಡುತೋಟ, ಚಿತ್ರಾಪುವಿನ ನೂರಾರು ಎಕರೆ ಕೃಷಿ ಭೂಮಿ ಮುಳುಗುವುದರಿಂದ ಸಂರಕ್ಷಿಸಲ್ಪಟ್ಟಿತ್ತು. ಆದರೆ ಮತ್ತೆ ಈ ರಾಜ ಕಾಲುವೆಯಲ್ಲಿ ಹೂಳು ತುಂಬಿದೆ. ಸಮ ರ್ಪಕವಾಗಿ ಹೂಳು ತೆಗೆದಿಲ್ಲ ಎಂದು ಪಂಚಾಯತ್‌ಗೆ ಸ್ವತಃ ಸದಸ್ಯರೊಬ್ಬರು ದೂರು ನೀಡಿದ್ದರ ಪರಿಣಾಮ ಹೂಳೆತ್ತುವ ಭರವಸೆ ಮಳೆಗಾಲ ಹತ್ತಿರ ಬಂದರೂ ಈಡೇರಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.