ಹಕ್ಕಿ ಹಬ್ಬಕ್ಕೆ ಚಾಲನೆ; ಪರಿಸರ ಜಾಥಾ
Team Udayavani, Feb 10, 2018, 1:45 PM IST
ಮಹಾನಗರ: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಮಂಗಳೂರಿನಲ್ಲಿ ಮೂರು ದಿನ ಆಯೋಜಿ ಸಲಾದ ರಾಜ್ಯ ಮಟ್ಟದ ‘4ನೇ ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಚಾಲನೆ ದೊರಕಿದೆ.
ರವಿವಾರದವರೆಗೆ ಹಕ್ಕಿ ಹಬ್ಬ ಸಂಘಟಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯದ ಹಲವು ಮಂದಿ ಹಕ್ಕಿ ಪ್ರಿಯರು, ಬರ್ಡ್ ಫೋಟೋಗ್ರಾಫರ್ ಹಕ್ಕಿಹಬ್ಬದಲ್ಲಿ ಭಾಗವಹಿಸಿದ್ದಾರೆ. ಪುರಭವನದಲ್ಲಿ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಪುರಭವನದ ಮುಂಭಾಗ ಪರಿಸರ ಜಾಥಾ ನೆರವೇರಿತು. ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹಕ್ಕಿಗಳ ಕಲರವ ಇನ್ನಷ್ಟು ಕೇಳುವಂತಾಗಲು ಹಕ್ಕಿಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸುವಂತೆ ಫಲಕ ಪ್ರದರ್ಶಿಸಲಾಯಿತು. ವಿವಿಧ ಛಾಯಾಚಿತ್ರಗಾರರು ಸೆರೆಹಿಡಿದ ಹಕ್ಕಿಗಳ ವಿಭಿನ್ನ ಫೋಟೋಗಳನ್ನು ಮಂಗಳೂರು ಪುರಭವನದ ಮುಂಭಾಗದಲ್ಲಿ ಪ್ರದರ್ಶಿಸಲಾಯಿತು.
ಫೆ. 10 ಹಾಗೂ 11ರಂದು ಪಿಲಿಕುಳದಲ್ಲಿ ಉಪನ್ಯಾಸ, ವ್ಯಂಗ್ಯಚಿತ್ರ ಕಾರ್ಯಾಗಾರ, ರಸಪ್ರಶ್ನೆ ನಡೆಯಲಿದೆ. ಅಲ್ಲದೆ ಸಸಿಹಿತ್ಲು, ಮಂಜಲ್ಪಾದೆ ಸಹಿತ ಮಂಗಳೂರು ಜೌಗು ಪ್ರದೇಶ ಹಾಗೂ ಮಂಗಳೂರು ವಿ.ವಿ.ಗಳಲ್ಲಿ ಪಕ್ಷಿ ಪ್ರವಾಸೋದ್ಯಮ ಏರ್ಪಡಿಸಲಾಗಿದೆ. ಫೆ. 11ರಂದು ಸಮುದ್ರಕ್ಕೆ ಬೋಟಿನಲ್ಲಿ ತೆರಳಿ ಅಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.