ಜೋಡಿ ಹಳಿ ಜತೆ ವಿದ್ಯುದೀಕರಣಕ್ಕೆ ಚಾಲನೆ: ಕೊಂಕಣ ರೈಲ್ವೇ ನಿಗಮ

Team Udayavani, Apr 10, 2018, 6:00 AM IST

32.jpg

ಮಂಗಳೂರು: ಮಂಗಳೂರು- ಮುಂಬಯಿ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ರೈಲ್ವೇ ಹಳಿ ದ್ವಿಗುಣ ಯೋಜನೆ ಹಾಗೂ ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿ ಚುರುಕುಗೊಂಡಿದೆ. ಈ ಎರಡೂ ಕಾಮಗಾರಿಗಳನ್ನು ಆರಂಭಿಸಿರುವ ಕೊಂಕಣ ರೈಲ್ವೇ ನಿಗಮವು 2019ರ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಒಟ್ಟು 741 ಕಿ.ಮೀ. ಹಳಿ ದ್ವಿಗುಣ ಕಾಮಗಾರಿ ರೋಹಾದಿಂದ ಮನ್‌ಗಾಂವ್‌ವರೆಗೆ ಬಿರುಸಿನಿಂದ ನಡೆಯುತ್ತಿದೆ. ಹಳಿ ದ್ವಿಗುಣದಿಂದ ರೈಲು ಸಂಚಾರ ದಟ್ಟಣೆ ಬಗೆಹರಿಯಲಿದೆ. ಇನ್ನಷ್ಟು ಸೇವೆ ಆರಂಭಿಸಬಹುದಾಗಿದ್ದು, ಆದಾಯವೂ ಹೆಚ್ಚಲಿದೆ. 

ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ಅವಳಿ ಹಳಿ ನಿರ್ಮಾಣಕ್ಕೆ ಬೇಕಾದಷ್ಟು ಜಾಗ ನಿಗ‌ಮವು ಹೊಂದಿದೆ. ಈ ಮಧ್ಯೆ ದ. ರೈಲ್ವೇ ವಿಭಾಗದ ವತಿಯಿಂದ ಕೇರಳದ ಶೋರ್ನೂರು ಮತ್ತು ಮಂಗಳೂರು ಮಧ್ಯೆ 328 ಕಿ. ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮಂಗಳೂರು ಜಂಕ್ಷನ್‌ (ಕಂಕನಾಡಿ) ವರೆಗೆ ಪೂರ್ಣಗೊಂಡಿದ್ದು, ತೋಕೂರುವರೆಗೆ ಮುಂದುವರಿಯಲಿದೆ. ಅಲ್ಲಿಂದ ಮಹಾರಾಷ್ಟ್ರದ ರೋಹಾದವರೆಗೆ ಕೊಂಕಣ ರೈಲ್ವೇ ನಿಗಮವು ವಿದ್ಯುದೀಕರಣಗೊಳಿಸಲಿದೆ. ರೋಹಾದಿಂದ ವರ್ನಾವರೆಗೆ ಹಾಗೂ ವರ್ನಾದಿಂದ ತೋಕೂರು ಸೇರಿದಂತೆ ಎರಡು ಹಂತಗಳಲ್ಲಿ ಈ ಕಾಮಗಾರಿಯನ್ನು ಪ್ರತ್ಯೇಕ ಗುತ್ತಿಗೆದಾರರಿಗೆ ವಹಿಸಲಾಗಿದೆ. ಸುಮಾರು 950 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿ ಎರಡೂ ಭಾಗಗಳಲ್ಲಿ ಪ್ರಗತಿಯಲ್ಲಿದೆ. ವಿದ್ಯುದೀಕರಣಕ್ಕಾಗಿ ರೈಲ್ವೇ ಹಳಿಯ ಪಕ್ಕದಲ್ಲಿ ಅಡಿಪಾಯ ಹಾಕುವ ಕೆಲಸ ನಡೆಯುತ್ತಿದ್ದು, ಮುಂದೆ ಕಂಬಗಳನ್ನು ಕ್ರೇನ್‌ಗಳ ಸಹಾಯದಿಂದ ಜೋಡಿಸಲಾಗುವುದು. ರಾಜ್ಯ ಸರಕಾರವೂ ಇದಕ್ಕೆ ಅನುದಾನ ಒದಗಿಸಲಿದೆ.  

ಪರಿಸರ ಪೂರಕ
ರೈಲಿಗೆ ಪೆಟ್ರೋಲಿಯಂ ಮೂಲದ ಇಂಧನದ ಬದಲು ವಿದ್ಯುತ್ಛಕ್ತಿಯ ಬಳಕೆ ಪರಿಸರ ಸ್ನೇಹಿ. ಡೀಸೆಲ್‌ ಚಾಲಿತ ರೈಲು ಎಂಜಿನ್‌ ಬಂದ ಬಳಿಕ  ಕಲ್ಲಿದ್ದಲಿನ “ಉಗಿಬಂಡಿ’ ಇತಿಹಾಸಕ್ಕೆ ಸೇರಿತು. ಈಗ ಡೀಸೆಲ್‌ ಮತ್ತು ವಿದ್ಯುತ್‌ಚಾಲಿತ ಇಂಜಿನ್‌ಗಳು ಬಳಕೆಯಲ್ಲಿವೆ. ಡೀಸೆಲ್‌ ಇಂಜಿನ್‌ಗಳಿಂದ ಪರಿಸರ ಮಾಲಿನ್ಯವಾಗುತ್ತದೆ. ವಿದ್ಯುತ್‌ ಚಾಲಿತ ರೈಲುಗಳಲ್ಲಿ ಈ ಸಮಸ್ಯೆ ಇಲ್ಲ. ಜತೆಗೆ ಇಂಧನವೂ ಉಳಿತಾಯವಾಗಿ ವೆಚ್ಚ ಕಡಿಮೆಯಾಗಲಿದೆ. 

ಕೊಂಕಣ ರೈಲ್ವೇ ಮಾರ್ಗ  ಮಂಗಳೂರಿನ ತೋಕೂರಿನಿಂದ ಮುಂಬಯಿಯ ರೋಹಾ ತನಕ 741 ಕಿ.ಮೀ. ಉದ್ದವಿದೆ. ಮಂಗಳೂರಿನಿಂದ ಮುಂಬಯಿಗೆ ನೇರ ರೈಲ್ವೇ ಸಂಪರ್ಕ ಕಲ್ಪಿಸಲೆಂದು ರೈಲು ಮಾರ್ಗ ನಿರ್ಮಿ ಸಲು 1990 ಅ. 15ರಂದು ಕೊಂಕಣ ರೈಲ್ವೇ ನಿಗಮವನ್ನು ರಚಿಸಲಾಗಿತ್ತು. ಪ್ರಧಾನಿ ವಿಪಿ ಸಿಂಗ್‌ ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಕರಾವಳಿಯ ಜಾರ್ಜ್‌ ಫೆರ್ನಾಂಡಿಸ್‌ ಈ ಯೋಜನೆಯ ಜನಕ. ಜನತಾ ಪರಿವಾರದ ಮಧು ದಂಡವತೆ ಹಾಗೂ ರಾಮಕೃಷ್ಣ ಹೆಗಡೆ ಸಹಕರಿಸಿ ದ್ದರು. ಮಂಗಳೂರು -ಉಡುಪಿ ಮಧ್ಯೆ ಮೊದಲ ಪ್ಯಾಸೆಂಜರ್‌ ರೈಲು 1993ರಲ್ಲಿ ಆರಂಭ ವಾಗಿತ್ತು. ಸರಕು ತುಂಬಿದ ಟ್ರಕ್‌ಗಳ ಸಾಗಾಟ (ರೋ ರೋ) ನಿಗಮದ ಬಹು ಯಶಸ್ವಿ ಸೇವೆ.

741 ಕಿ.ಮೀ.  ಹಳಿ ದ್ವಿಗುಣ
950 ಕೋಟಿ ರೂ. ಅಂದಾಜು ವೆಚ್ಚ
2019 ಕಾಮಗಾರಿ ಪೂರ್ಣ ಗುರಿ

ದಿನೇಶ್‌ ಇರಾ

ಟಾಪ್ ನ್ಯೂಸ್

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

5-belthangady

Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ…

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ…

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

missing

Mangaluru: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನಾಪತ್ತೆ

15

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

5-belthangady

Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

‌Max Movie: ಬಿಗ್‌ ಬಾಸ್‌ ವೇದಿಕೆಯಲ್ಲಿ  ʼಮ್ಯಾಕ್ಸ್‌ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್

‌Max Movie: ಬಿಗ್‌ ಬಾಸ್‌ ವೇದಿಕೆಯಲ್ಲಿ ʼಮ್ಯಾಕ್ಸ್‌ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.