‘ಮಾದಕ ವಸ್ತು ಸೇವನೆ: ಪ್ರತಿ 96 ನಿಮಿಷಕ್ಕೆ ಒಂದು ಸಾವು’
ವಿವಿ ಕಾಲೇಜಿನಲ್ಲಿ ಮಾದಕ ವಸ್ತು ಜಾಗೃತಿ ಅಭಿಯಾನ
Team Udayavani, Aug 22, 2019, 5:00 AM IST
ಮಹಾನಗರ: ಮಾದಕ ವಸ್ತು ಸೇವನೆಯಿಂದ ಪ್ರತಿ 96 ನಿಮಿಷಕ್ಕೆ ಒಬ್ಬ ಹರೆಯದ ವ್ಯಕ್ತಿ ಸಾವನ್ನಪ್ಪುತ್ತಾರೆ. ಮಾದಕ ದ್ರವ್ಯ ವಿದ್ಯಾರ್ಥಿಗಳ ಮೇಲೆ ಒತ್ತಡ ಬೀರಿ ಅವರನ್ನು ಅಪರಾಧ ಲೋಕಕ್ಕೆ ತಳ್ಳುತ್ತದೆ. ಡ್ರಗ್ಸ್ ಸೇವನೆ ಚಟವಾದಾಗ ಕಲಿಕೆಗೆ ಅಡ್ಡಿಯಾಗುತ್ತದೆ ಎಂದು ನರಮನೋರೋಗ ತಜ್ಞೆ ಡಾ| ಕೆರೋಲಿನ್ ಪಿ. ಡಿ’ಸೋಜಾ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಎನ್ನೆಸ್ಸೆಸ್ ಘಟಕ ಮತ್ತು ಎಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಮ್ ಪೊಲೀಸ್ ಠಾಣೆಯ ಸಹಯೋಗದಲ್ಲಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆದ ಮಾದಕ ವಸ್ತು ಜಾಗೃತಿ ಅಭಿಯಾನದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಎಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಮ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಶ್ರೀಲತಾ ಅವರು ಮಾದಕ ವ್ಯಸನಿಯ ವಿರುದ್ಧ ಅಥವಾ ಜಾಲದ ವಿರುದ್ಧ ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳನ್ನು ತಿಳಿಸಿದರು.
ಸಮ್ಮಾನ
ಡಾ| ಕೆರೋಲಿನ್ ಪಿ. ಡಿ’ಸೋಜಾ ಅವರನ್ನು ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಹೆಡ್‌ಕಾನ್‌ಸ್ಟೆಬಲ್ ಲಕ್ಷ್ಮೀಶ್, ಕಾಲೇಜಿನ ಎನ್‌ಎಸ್‌ಎಸ್ ಘಟಕಾಧಿಕಾರಿ ಡಾ| ಗಾಯತ್ರಿ ಮತ್ತಿತರರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ| ಉದಯ ಕುಮಾರ್ ಎಂ.ಎ. ಅವರು ಮಾತನಾಡಿ, ವಿದ್ಯಾರ್ಥಿಗಳು ಅನೌಪಚಾರಿಕ ಸ್ಥಳಗಳಲ್ಲಿ ಕಾಣಿಸಿ ಕೊಂಡರೆ, ಅಹಿತಕರ ಘಟನೆಗಳಲ್ಲಿ ಪಾಲ್ಗೊಂಡರೆ, ಪೊಲೀಸ್ ಅಧಿಕಾರಿಗಳು ಅವರ ಚಲನವಲನಗಳ ಮೇಲೆ ಕಣ್ಣಿಟ್ಟು ಮಾಹಿತಿ ನೀಡುತ್ತಾರೆ ಎಂದು ಹೇಳಿ ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆಯನ್ನು ಪ್ರಶಂಸಿಸಿದರು.
ಪೊಲೀಸರ ಕರ್ತವ್ಯ ಪ್ರಜ್ಞೆ ಪ್ರಶಂಸನೀಯ
ಕಾಲೇಜಿನ ಪ್ರಾಂಶುಪಾಲ ಡಾ| ಉದಯ ಕುಮಾರ್ ಎಂ.ಎ. ಅವರು ಮಾತನಾಡಿ, ವಿದ್ಯಾರ್ಥಿಗಳು ಅನೌಪಚಾರಿಕ ಸ್ಥಳಗಳಲ್ಲಿ ಕಾಣಿಸಿ ಕೊಂಡರೆ, ಅಹಿತಕರ ಘಟನೆಗಳಲ್ಲಿ ಪಾಲ್ಗೊಂಡರೆ, ಪೊಲೀಸ್ ಅಧಿಕಾರಿಗಳು ಅವರ ಚಲನವಲನಗಳ ಮೇಲೆ ಕಣ್ಣಿಟ್ಟು ಮಾಹಿತಿ ನೀಡುತ್ತಾರೆ ಎಂದು ಹೇಳಿ ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆಯನ್ನು ಪ್ರಶಂಸಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.