ಡಂಪಿಂಗ್ ಯಾರ್ಡ್ ರಸ್ತೆಯಲ್ಲೂ ತ್ಯಾಜ್ಯ ರಾಶಿ
ಪಚ್ಚನಾಡಿ: ಲಾರಿಗಳಲ್ಲಿ ತಾಜ್ಯ ತಂದು ರಸ್ತೆ ಬದಿಯಲ್ಲಿ ಸುರಿಯುವಿಕೆ
Team Udayavani, Jun 27, 2023, 4:03 PM IST
ಮಹಾನಗರ: ಪಚ್ಚನಾಡಿ ಡಂಪಿಂಗ್ ಯಾರ್ಡ್ ಒಳಗೆ ಇರಬೇಕಾದ ತ್ಯಾಜ್ಯ ರಸ್ತೆ ಬದಿಯಲ್ಲಿ ಕಂಡು ಬರುತ್ತಿದ್ದು, ದೇವಿನಗರ ಬಳಿಯ ಆರ್‌ಟಿಒ ಕ್ರಾಸ್ ರಸ್ತೆಯಿಂದ ಎಸ್‌ಡಿಎಂ ಶಾಲೆಯ ವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ತ್ಯಾಜ್ಯ ಎಸೆಯಲಾಗಿದೆ.
ಪಚ್ಚನಾಡಿ ರಸ್ತೆಯಲ್ಲಿ ಸಾಗುವವರಿಗೆ ತ್ಯಾಜ್ಯದಿಂದ ಬರುವ ವಾಸನೆ ಉಚಿತÊ ಾಗಿದ್ದು, ಈಗ ರಸ್ತೆ ಬದಿಯಲ್ಲೂ ತ್ಯಾಜ್ಯ ರಾಶಿ ಬಿದ್ದಿರುವುದರಿಂದ ಮಳೆಗೆ ಅವುಗಳು ಕೊಳೆತು ವಾಸನೆ ಇನ್ನಷ್ಟು ಹೆಚ್ಚಾಗಿದೆ. ಸುಮಾರು ನಾಲ್ಕೈದು ಲೋಡ್ ಗಳಷ್ಟು ತ್ಯಾಜ್ಯ ಈಗಾಗಲೇ ರಾಶಿ ಬಿದಿದ್ದು, ಸಂಬಂಧಪಟ್ಟುವರು ಇದನ್ನು ತೆರವು ಗೊಳಿಸದಿದ್ದಲ್ಲಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಯಿದೆ. ರಸ್ತೆಯಲ್ಲಿ ಸಾಗುವವರೂ ಮನೆಯ ತಾಜ್ಯವನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಕಟ್ಟಿ ಎಸೆದು ಹೋಗಿರುವುದೂ ಕಂಡು ಬಂದಿದೆ.
ಮಂಗಳೂರು ಮಹಾನಗರ ಪಾಲಿಕೆ ಹಾಗೂ ಆಸುಪಾಸಿನ ಪಟ್ಟಣ ಪಂಚಾಯತ್, ಪುರಸಭೆಗಳ ತ್ಯಾಜ್ಯವನ್ನು ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ನಿರ್ವಹಿಸಲಾಗುತ್ತಿದೆ. ಆದರೂ ತಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಂಪಿಂಗ್ ಯಾರ್ಡ್ ನಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದೇವೆ. ಸಂಚಾರಕ್ಕೆ ಸುಸಜ್ಜಿತ ರಸ್ತೆ ಇದ್ದರೂ ಎರಡೂ ಬದಿಯಲ್ಲಿ ತ್ಯಾಜ್ಯ ಎಸೆದಿರುವುದರಿಂದ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ ಎಂದು ರವಿ ವಾಮಂಜೂರು ಆರೋಪಿಸಿದ್ದಾರೆ.
ಕಟ್ಟಡ ನಿರ್ಮಾಣ ತ್ಯಾಜ್ಯವೂ ಇದೆ
ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ತಾಜ್ಯವನ್ನೂ ಇಲ್ಲಿ ರಸ್ತೆ ಬದಿಯಲ್ಲಿ ಸುರಿಯಲಾಗಿದೆ. ಸಿಮೆಂಟ್ ಚೀಲಗಳು, ಮಣ್ಣು-ಕಾಂಕ್ರೀಟ್ ಮಿಶ್ರಣ, ಕ್ಯೂರಿಂಗ್ ಬಳಸಲಾಗುವ ಬೈ ಹುಲ್ಲು, ಮೊದಲಾದವರುಗಳ ರಾಶಿಯೇ ಇದೆ. ಈ ತ್ಯಾಜ್ಯವನ್ನು ಲಾರಿಗಳಲ್ಲಿ ರಾತ್ರಿ ವೇಳೆ ತಾಜ್ಯ ತಂದು ಸುರಿದಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ
ಜಾಗದಲ್ಲೂ ತ್ಯಾಜ್ಯ
ಪಚ್ಚನಾಡಿಯಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ನೆಡುತೋಪಿನಲ್ಲೂ ತಾಜ್ಯ ಸರಿಯಲಾಗಿದೆ. ನೆಡುತೋಪಿನ ಬದಿಯಲ್ಲಿ ಕಚ್ಚಾ ರಸ್ತೆಯಿದ್ದು, ಅದರ ಎರಡೂ ಬದಿಯಲ್ಲಿ ತಾಜ್ಯದ ರಾಶಿ ಬಿದ್ದಿದೆ. ಕಳೆದ ಬೇಸಗೆಯಲ್ಲಷ್ಟೇ ಅರಣ್ಯ ಇಲಾಖೆಯವರು ಕಳೆಗಿಡಗಳು, ತ್ಯಾಜ್ಯವನ್ನು ಹೆಕ್ಕಿ ಸ್ವತ್ಛಗೊಳಿಸಿದ್ದರು.
ಬೀದಿ ನಾಯಿಗಳ ಹಾವಳಿ
ಪಚ್ಚನಾಡಿ ಪ್ರದೇಶದಲ್ಲಿ ಮೊದಲೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈಗ ರಸ್ತೆಯಲ್ಲಿ ತ್ಯಾಜ್ಯವನ್ನು ಎಸೆದು ಹೋಗಿರುವುದರಿಂದ ನಾಯಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು. ಪರಸ್ಪರ ಜಗಳ ಮಾಡಿಕೊಂಡು ತ್ಯಾಜ್ಯವನ್ನು ಎಳೆದಾಡಿಕೊಂಡು ರಸ್ತೆಗೆ ತಂದು ಹಾಕುವುದರಿಂದ ಸ್ಥಳದಲ್ಲಿ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ. ಕಾಗೆಗಳ ಜತೆಗೆ ಪಚ್ಚನಾಡಿ ಪ್ರದೇಶದಲ್ಲಿ ಹೆಚ್ಚಾಗಿರುವ ಹದ್ದುಗಳೂ ತ್ಯಾಜ್ಯ ರಾಶಿ ಬಿದ್ದರುವ ಪ್ರದೇಶದಲ್ಲಿ ಕಂಡು ಬರುತ್ತಿವೆ.
ತಡೆಯುವ ನಿಟ್ಟಿನಲ್ಲಿ ಕ್ರಮ
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದು ದಂಡನಾರ್ಹ ಅಪರಾಧ. ಪಚ್ಚನಾಡಿಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಿಸಿ ಕೆಮರಾ ಅಳವಡಿಸಿ ಅಥವಾ ಕಾವಲು ನಿಂತು ಎಸೆಯುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
– ಜಯಾನಂದ ಅಂಚನ್, ಮೇಯರ್
-ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.