ಇ-ಸಂಜೀವಿನಿ ಒಪಿಡಿ ಆ್ಯಪ್; ಮನೆಯಲ್ಲಿದ್ದೇ ಚಿಕಿತ್ಸೆ ಪಡೆಯಿರಿ
ಬೆಳಗ್ಗೆ 10ರಿಂದ ಸಂಜೆ 4.30
Team Udayavani, Sep 30, 2020, 6:17 AM IST
ಮಂಗಳೂರು: ಕೋವಿಡ್ ಆತಂಕದ ದಿನಗಳಲ್ಲಿ ಜನರು ಆರೋಗ್ಯ ಸಮಸ್ಯೆಗಳು ಬಂದರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ಭಯಪಡುತ್ತಾರೆ. ಇಂತಹ ಸಂದರ್ಭದಲ್ಲಿ ಹೊರಗಡೆ ತೆರಳುವುದೂ ಸರಿಯಲ್ಲ. ಅದಕ್ಕಾಗಿ ಕೇಂದ್ರ ಸರಕಾರವು ನ್ಯಾಶನಲ್ ಟೆಲಿ ಕನ್ಸಲ್ಟೆಶನ್ ಸರ್ವೀಸಸ್ ಯೋಜನೆಯಡಿ ಇ-ಸಂಜೀವಿನಿ ಒಪಿಡಿ ಆ್ಯಪ್ ಪರಿಚಯಿಸಿದೆ. ಇದರಿಂದ ಅನಗತ್ಯ ಆಸ್ಪತ್ರೆ ಅಲೆದಾಟ ತಪ್ಪಲಿದೆ. ಆ್ಯಪ್ ಬಗ್ಗೆ ಇ-ಸಂಜೀವಿನಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ| ರತ್ನಾಕರ್ ಮತ್ತು ವೆನ್ಲಾಕ್ ನೋಡೆಲ್ ಅಧಿಕಾರಿ ಡಾ| ಸದಾನಂದ ಪೂಜಾರಿ ಅವರು ನಗರದಲ್ಲಿ ಮಾಹಿತಿ ನೀಡಿದರು.
ಈ ಸೇವೆಗಾಗಿ ಈಗಾಗಲೇ ರಾಜ್ಯಾದ್ಯಂತ ವಿವಿಧ ವೈದ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಆಸ್ಪತ್ರೆಯಲ್ಲಿ ಪ್ರತಿದಿನ ಇಬ್ಬರು ವೈದ್ಯರು ಲಾಗಿನ್ ಆಗಿರುತ್ತಾರೆ. ರೋಗಿಯು ಕರೆ ಮಾಡಿದಾಗ ಆ ರೋಗಿಯ ಚಿಕಿತ್ಸೆಗೆ ಸಂಬಂಧಪಟ್ಟ ಯಾವ ವೈದ್ಯರು ಲಾಗಿನ್ ಆಗಿರುತ್ತಾರೋ ಆ ವೈದ್ಯರು ಕರೆ ಸ್ವೀಕರಿಸಿ ಸಮಾಲೋಚಿಸುತ್ತಾರೆ. ಆಯಾ ಜಿಲ್ಲೆಯ ರೋಗಿಗಳಿಗೆ ಅವರ ಜಿಲ್ಲೆಯ ವೈದ್ಯರೇ ಸಿಗುತ್ತಾರೆ ಎಂದು ಹೇಳಲಾಗದು. ಯಾವ ವೈದ್ಯರು ಕರೆ ಸ್ವೀಕರಿಸಿದರೂ ರೋಗಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ರೋಗದ ಸ್ಥಿತಿಯನ್ನು ಅವಲಂಬಿಸಿ ಯಾವ ಔಷಧ, ಸೇವನೆಯ ಪ್ರಮಾಣ ಇತ್ಯಾದಿ ಎಲ್ಲವನ್ನೂ ಹೇಳುತ್ತಾರೆ.
ಸಂಪರ್ಕ ಹೇಗೆ?
ಮೊಬೈಲ್‌ನ ಪ್ಲೇ ಸ್ಟೋರ್ ಅಥವಾ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿದರೆ ಆ್ಯಪ್ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ರಿಜಿಸ್ಟ್ರೇಶನ್ ಕಾಲಂನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿದ ಬಳಿಕ ರಿಜಿಸ್ಟ್ರೇಶನ್ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗಿನ್ ಆಗಬೇಕು. ಆಗ ಟೋಕನ್ ನಂಬರ್ ಲಭಿಸುತ್ತದೆ. ಟೋಕನ್ ನಂಬರ್ ನೀಡಿ ವೈದ್ಯರನ್ನು ವೀಡಿಯೋ ಕರೆ ಮೂಲಕ ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.