ಯೇಸು ಕ್ರಿಸ್ತರ ಪುನರುತ್ಥಾನ ನವ ಜೀವನಕ್ಕೆ ಆಹ್ವಾನ
ಮಂಗಳೂರು ಬಿಷಪ್ ಅವರಿಂದ ಈಸ್ಟರ್ ಸಂದೇಶ
Team Udayavani, Apr 12, 2020, 12:39 PM IST
ಮಂಗಳೂರು: ಯೇಸು ಕ್ರಿಸ್ತರ ಪುನರುತ್ಥಾನವು ನವ ಜೀವನಕ್ಕೆ ಆಹ್ವಾನ ಎಂಬುದಾಗಿ ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ತಮ್ಮ ಈಸ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ಸೋಂಕು ತಗುಲಿದವರ ಹಾಗೂ ಮೃತಪಟ್ಟವರ ಸಂಖ್ಯೆ ಗಮನಿಸುತ್ತಿರುವ ನಾವು ಅನಿಶ್ಚತತೆಯ ಕಾರ್ಮೋಡಗಳಿಂದ ಕಂಗೆಟ್ಟಿದ್ದೇವೆ. ಹೀಗಿರುವಾಗ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣವನ್ನಪ್ಪಿದ ಹಾಗೂ ಅವರು ಮರಣವನ್ನು ಜಯಿಸಿ ಪುನಃ ಜೀವಂತರಾಗಿ ಬಂದ ಪಾಸ್ಕ (ಈಸ್ಟರ್) ಹಬ್ಬವನ್ನು ಆಚರಿಸುತ್ತಿದ್ದೇವೆ. ಯೇಸು ಕ್ರಿಸ್ತರು ಪವಿತ್ರಾತ್ಮರ ಶಕ್ತಿಯಿಂದ ಕನ್ಯಾ ಮರಿಯಳ ಉದರದಲ್ಲಿ ಹುಟ್ಟಿ ಬಂದರು ಎಂಬುದು ಕ್ರೈಸ್ತರ ನಂಬಿಕೆ. ತನ್ನ ಜೀವನದ ಅಂತಿಮ 3 ವರ್ಷಗಳಲ್ಲಿ ಅನೇಕ ಬೋಧನೆಗಳನ್ನು, ಪವಾಡಗಳನ್ನು ಮಾಡುತ್ತಾ ಕೊನೆಗೆ ಕ್ರೂರ ಮರಣವನ್ನು ಸ್ವೀಕರಿಸಿದರು. ಆದರೆ ದೇವರು ಅವರನ್ನು ಸಮಾಧಿಯಲ್ಲಿ ಕೊಳೆಯಲು ಬಿಡಲಿಲ್ಲ. ಸತ್ತ 3ನೇ ದಿನ ಅವರು ಜೀವಂತರಾಗಿ ಎದ್ದು ಬಂದರು. ತನ್ನ ಶಿಷ್ಯರಿಗೆ ಕಾಣಸಿಕ್ಕರು ಹಾಗೂ ತನ್ನ ಮೇಲೆ ವಿಶ್ವಾಸವಿರಿಸಿದ ಪ್ರತಿಯೊಬ್ಬರಿಗೂ ಅನಂತ ಜೀವವನ್ನು ಕೊಡುವೆನೆಂದು ವಾಗ್ಧಾನ ಮಾಡಿದರು ಎಂಬುದಾಗಿ ಬೈಬಲ್ ತಿಳಿಸುತ್ತದೆ.
“ಪುನರುತ್ಥಾನವೂ ಜೀವವು ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ’ ಎಂದು ಯೇಸು ಹೇಳಿದ್ದರು. ಯೇಸುವೇ ಕತ್ತಲೆ ಕವಿದ ನಮ್ಮ ಜೀವನದಲ್ಲಿ ಪ್ರವೇಶಿಸಿ ನವ ಜೀವನವನ್ನು ನಮಗೆ ಕೊಡುತ್ತಾರೆ ಎನ್ನುವುದು ನಂಬಿಕೆ. “ಮಾರ್ಗವೂ, ಸತ್ಯವೂ, ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು’ ಎಂದು ಪ್ರೀತಿಯ ಮಾರ್ಗವನ್ನು ತೋರಿಸಿದ್ದಾರೆ. ಯಾರು ಪ್ರೀತಿಯ ಹಾದಿಯಲ್ಲಿ ನಡೆಯುತ್ತಾರೋ, ಯಾರ ಅಂತಃಕರಣ ಸ್ವತ್ಛವಾಗಿದೆಯೋ ಅವರಿಗೆ ಸಾವಿನ ಭಯವಿಲ್ಲ. “ಸತ್ತರೂ ದೇವರು ಹೊಸ ಜೀವನವನ್ನು ನನಗೆ ಕೊಡುವರು’ ಎಂಬ ವಿಶ್ವಾಸದಿಂದ ಜೀವಿಸುವ ಪ್ರತಿಯೊಬ್ಬರಿಗೂ ಪಾಸ್ಕ ಹಬ್ಬದ ಸಂತೋಷವನ್ನು ಅವರು ದಯಪಾಲಿಸುತ್ತಾರೆ. ಅಂತಹ ಸಂತೋಷ ಹಾಗೂ ತೃಪ್ತಿ ನಮಗೆಲ್ಲರಿಗೂ ಲಭಿಸಲಿ ಎಂದು ಅತೀ ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ ಸಂದೇಶ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.