![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 11, 2023, 7:02 AM IST
ಮಂಗಳೂರು: ಚುನಾವಣ ನೀತಿಸಂಹಿತೆಯ ನೆಪ ನೀಡಿ ದ.ಕ. ಜಿಲ್ಲೆಯಲ್ಲಿ “ಸಮುದಾಯದತ್ತ ಶಾಲೆ ಕಾರ್ಯಕ್ರಮ’ವನ್ನು ನಡೆಸಲಾಗಿಲ್ಲ ಎಂದು ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಆರೋಪಿಸಿದ್ದಾರೆ.
ಸಂವಿಧಾನಾತ್ಮಕವಾಗಿ ಪೋಷಕ ರಿಂದ ಆಯ್ಕೆಯಾಗುವಂತಹ ಶಾಲಾ ಭಿವೃದ್ಧಿ ಸಮಿತಿ ಹಾಗೂ ಪೋಷಕ ರೊಂದಿಗೆ ಸಂವಹನ ಮಾಡಲು ಶಿಕ್ಷಣ ಇಲಾಖೆಯು ವಾರ್ಷಿಕವಾಗಿ ಎರಡು ಬಾರಿ ಸಮುದಾಯದತ್ತ ಕಾರ್ಯಕ್ರಮ ಆಯೋಜಿಸುವಂತೆ ಆದೇಶ ನೀಡುತ್ತದೆ. ಅದರಂತೆ ಬಹುತೇಕ ಶಾಲೆಗಳಲ್ಲಿ ಎಸ್‌ಡಿಎಂಸಿಗಳು ಪೂರ್ವಭಾವಿ ಸಭೆಗಳನ್ನು ಕರೆದು ಶಾಲೆಯ ಆಗುಹೋಗುಗಳ ಬಗ್ಗೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಕಾದ ರೂಪರೇಖೆ ತಯಾರಿಸುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಕೊನೆಯ ಸಮುದಾಯದತ್ತ ಕಾರ್ಯಕ್ರಮವು ಎ. 8 ಮತ್ತು 10ರಂದು ನಡೆಸುವ ಬಗ್ಗೆ ಆದೇಶಿಸಲಾಗಿತ್ತು. ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಸಮುದಾಯದತ್ತ ಕಾರ್ಯಕ್ರಮ ನಡೆದಿದೆ. ದ.ಕ. ಜಿಲ್ಲೆಯಲ್ಲಿ ಎಲ್ಲ ಮುಖ್ಯ ಶಿಕ್ಷಕರಿಗೆ ಸಮುದಾಯದತ್ತ ಶಾಲೆ ಕಾರ್ಯಕ್ರಮದ ಸಭೆ ನಡೆಸದಿರಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೌಖೀಕವಾಗಿ ಸೂಚನೆ ನೀಡಿದ್ದಾರೆ. ಹಾಗಾಗಿ ಸೋಮವಾರ ಜಿಲ್ಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆದಿಲ್ಲ. ಶಾಲೆಗಳಿಗೆ ತೆರಳಿದ ಪೋಷಕರಿಂದ ಸಹಿ ಸಂಗ್ರಹಿಸಲಾಗಿದೆ. ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಸದೆ ಸಹಿ ಸಂಗ್ರಹಿಸಿರುವುದು ಖಂಡನೀಯ ಎಂದು ಅವರು ಆರೋಪಿಸಿದ್ದಾರೆ.
ಸಂಹಿತೆಗೆ ಅಡ್ಡಿ ಆಗದ ರೀತಿ ಕಾರ್ಯಕ್ರಮ !
ದ.ಕ. ಜಿಲ್ಲಾ ಡಿಡಿಪಿಐ ಡಿ.ಆರ್. ನಾಯಕ್ ಅವರನ್ನು ಈ ಬಗ್ಗೆ ಉದಯವಾಣಿ ವಿಚಾರಿಸಿದಾಗ, ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲಿ ಸಭೆ ನಡೆಸಲಾಗಿದೆ ಎಂಬ ಮಾಹಿತಿಯನ್ನು 7 ಮಂದಿ ಬಿಇಒಗಳು ತಿಳಿಸಿದ್ದಾರೆ. ನೀತಿ ಸಂಹಿತೆಗೆ ಅಡ್ಡಿ ಆಗದ ರೀತಿ ಕಾರ್ಯಕ್ರಮ ನಡೆಸುವಂತೆ ಮೌಖೀಕವಾಗಿ ತಿಳಿಸಲಾಗಿದೆಯೇ ಹೊರತು ಕಾರ್ಯಕ್ರಮ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ ಎಂದು ಬಿಇಒಗಳು ತಿಳಿಸಿರುವುದಾಗಿ ಹೇಳಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.