ಅನ್ನನಾಳ ಸಮಸ್ಯೆ: ಇಬ್ಬರಿಗೆ ಯಶಸ್ವೀ ಚಿಕಿತ್ಸೆ
Team Udayavani, Apr 23, 2018, 6:00 AM IST
ಮಂಗಳೂರು: ಅನ್ನನಾಳದಲ್ಲಿ ಉಂಟಾದ ಸಮಸ್ಯೆಯಿಂದಾಗಿ ಹಲವು ಸಮಯಗಳಿಂದ ಆಹಾರ ಸೇವನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಇಬ್ಬರು ರೋಗಿಗಳು ನಗರದ ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ಅಪರೂಪದ ಚಿಕಿತ್ಸೆಗೊಳಪಟ್ಟು ಗುಣ ಮುಖರಾಗಿದ್ದಾರೆ.
ಕೆಲದಿನಗಳ ಹಿಂದೆ, ಅನ್ನನಾಳ ಮುಚ್ಚಿಕೊಂಡ ರೀತಿಯಲ್ಲಿ ಇದ್ದುದರಿಂದ ಆಹಾರ ಸೇವನೆಯ ಸಂದರ್ಭ ತೊಂದರೆ ಅನುಭವಿಸುತ್ತಿದ್ದ ಇಬ್ಬರು ರೋಗಿಗಳು ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ| ಬಿ.ವಿ. ತಂತ್ರಿ ಹಾಗೂ ಡಾ| ಅನುರಾಗ್ ಜೆ. ಶೆಟ್ಟಿ ಬಳಿ ಬಂದಿದ್ದರು. ಪರೀಕ್ಷೆಗೊಳಪಡಿಸಿದಾಗ ಸಮಸ್ಯೆ ಆರಿತ ವೈದ್ಯರು ರೋಗಿಗಳನ್ನು ಪರ್ ಓರಲ್ ಎಂಡೋಸ್ಕೋಪಿಕ್ ಮ್ಯೋಟಮಿ ಎಂಬ ಚಿಕಿತ್ಸೆಗೊಳಪಡಿಸಿ ದರು. ಆಸ್ಪತ್ರೆಯ ತಜ್ಞ ವೈದ್ಯ ಡಾ| ವಿಕಾಸ್ ಸಿಂಗ್ಲಾ ಅವರ ಮಾರ್ಗ ದರ್ಶನದಲ್ಲಿ ನಡೆದ ಈ ಚಿಕಿತ್ಸೆ, ಕರಾವಳಿ ಕರ್ನಾಟಕದಲ್ಲಿ ಮಾಡಿದ ಮೊದಲ ಚಿಕಿತ್ಸೆಯಾಗಿದೆ.
ಅನ್ನನಾಳದಲ್ಲಿ ಚಿಕ್ಕ ರಂಧ್ರದ ಮೂಲಕ ಈ ಶಸ್ತ್ರಚಿಕಿತ್ಸೆ ನೆರವೇರಿಸ ಲಾಗಿದ್ದು, ಈ ಚಿಕಿತ್ಸಾ ವಿಧಾನದಲ್ಲಿ ರೋಗಿ ಹಲವು ದಿನಗಳವರೆಗೆ ಆಸ್ಪತ್ರೆ ಯಲ್ಲೇ ಇದ್ದು ವಿಶ್ರಾಂತಿ ಪಡೆದು ಕೊಳ್ಳ ಬೇಕಾಗಿಲ್ಲ. ಚಿಕಿತ್ಸೆಯ ಸಂದರ್ಭ ರಕ್ತಸ್ರಾವವಾಗಲೀ, ಶಸ್ತ್ರಚಿಕಿತ್ಸೆಯ ಗಾಯದ ಗುರುತಾಗಲೀ ಕಾಣ ಸಿಗುವು ದಿಲ್ಲ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕರಾದ ಡಾ| ಆನಂದ ವೇಣುಗೋಪಾಲ್ ಅವರು ತಿಳಿಸಿ ದ್ದಾರೆ. ಇಂತಹ ಚಿಕಿತ್ಸೆ ಒದಗಿಸಲು ತಜ್ಞ ವೈದ್ಯರ ತಂಡ ಮತ್ತು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆ ಹೊಂದಿರುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.