ಬಿಎಡ್‌, ಎಂಎ ಪದವೀಧರರಾದರೂ ಮಾಸಿಕ ವೇತನ 8,500 ರೂ.!

ಇದು ರಾಜ್ಯದ ವಾಲ್ಮೀಕಿ ಆಶ್ರಮ ಶಾಲೆ ಶಿಕ್ಷಕರ ಗೋಳು

Team Udayavani, Mar 29, 2023, 7:34 AM IST

ಬಿಎಡ್‌, ಎಂಎ ಪದವೀಧರರಾದರೂ ಮಾಸಿಕ ವೇತನ 8,500 ರೂ.!

ಮಂಗಳೂರು: ಎಲ್ಲ ಶಿಕ್ಷಕರಂತೆ ಇವರೂ ಮಕ್ಕಳಿಗೆ ಬೆಳಗ್ಗಿನಿಂದ ಸಂಜೆಯ ವರೆಗೆ ಶಾಲೆಗಳಲ್ಲಿ ಪಾಠ ಮಾಡುತ್ತಾರೆ. ಸರಕಾರಿ ಶಿಕ್ಷಕರು ನಿರ್ವಹಿಸುವ ಇತರ ಕೆಲಸಗಳನ್ನೂ ಮಾಡುತ್ತಾರೆ. ಬಿಎಡ್‌, ಡಿಎಡ್‌ ಪದವಿಯ ಜತೆಗೆ ಕೆಲವರು ಸ್ನಾತಕೋತ್ತರ ಪದವಿಯನ್ನೂ ಪಡೆದವರಿದ್ದಾರೆ. 20 ವರ್ಷಗಳ ಸೇವಾನುಭವವನ್ನೂ ಹೊಂದಿದ್ದಾರೆ. ಆದರೆ ಪಡೆಯುವ ಮಾಸಿಕ ವೇತನ ಮಾತ್ರ 8,500 ರೂ.!

ಸೇವಾನುಭವದ ಆಧಾರದಲ್ಲಿ ಇವರಿಗೆ ಭಡ್ತಿಯಾಗಲಿ, ಕನಿಷ್ಠ ವೇತನವಾಗಲಿ ಇಲ್ಲವೇ ಇಲ್ಲ. ಇದು ರಾಜ್ಯದ 119 ವಾಲ್ಮೀಕಿ ಆಶ್ರಮ ಶಾಲೆಗಳ ಸುಮಾರು 350 ಶಿಕ್ಷಕರ ಸ್ಥಿತಿ.

ವಿಶೇಷವಾಗಿ ಬುಡಕಟ್ಟು ಹಾಗೂ ಮೂಲ ನಿವಾಸಿಗಳ ಮಕ್ಕಳಿಗೆ ವಸತಿಯೊಂದಿಗೆ ಶಿಕ್ಷಣ ಒದಗಿಸಲು ಆರಂಭಿಸಲಾದ ವಾಲ್ಮೀಕಿ ಆಶ್ರಮ ಶಾಲೆಗಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸು ತ್ತಿವೆ. ಇಲ್ಲಿ ಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಲ್ಲಿ 20 ವರ್ಷಗಳಿಗೂ ಅಧಿಕ ಸೇವಾನುಭವ ಹೊಂದಿ ದವರೂ ಇದ್ದಾರೆ.ಅವರು ಕೂಡ 8,500 ರೂ. (ಭವಿಷ್ಯನಿಧಿ ಮತ್ತಿತರ ಕಡಿತ ಸೇರಿ ಕೈಗೆ ಸಿಗುವುದು 7,416 ರೂ. ಮಾತ್ರ)ಗಳ ಮಾಸಿಕ ಗೌರವ ಧನದಲ್ಲೇ ಬದುಕು ಸಾಗಿಸುತ್ತಿದ್ದಾರೆ.

ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳ ಜತೆಗೆ ಪರೀಕ್ಷಾ ಕಾರ್ಯ ಹಾಗೂ ಶಾಲೆಯ ಕಚೇರಿ ಕೆಲಸಗಳನ್ನೂ ನಿಭಾಯಿಸುತ್ತೇವೆ. ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ. ಶಿಕ್ಷಕರೆಲ್ಲರೂ ಪದವಿ ಜತೆ ಡಿಎಡ್‌, ಬಿಎಡ್‌ ಪದವಿಯನ್ನು ಪಡೆದಿದ್ದರೆ, ಸ್ನಾತಕೋತ್ತರ ಪದವಿಯನ್ನೂ ಪಡೆದವರಿದ್ದಾರೆ. ಆರಂಭದಲ್ಲಿ ನಾನು 5,600 ರೂ. ವೇತನ ಪಡೆಯುತ್ತಿದ್ದೆ. 2019ರಲ್ಲಿ 7,396 ರೂ.ಗಳಾಗಿದ್ದು, ಬಳಿಕ ಹೆಚ್ಚಳವಾಗಿಲ್ಲ. ಸರಕಾರಕ್ಕೆ ಮನವಿ ಸಲ್ಲಿಸುತ್ತ ಬರುತ್ತಿದ್ದೇವೆ. ಭರವಸೆ ಮಾತ್ರವೇ ದೊರಕುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ದ.ಕ. ಜಿಲ್ಲೆಯ ಆಶ್ರಮ ಶಾಲೆಯ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕಡತದಲ್ಲೇ ಉಳಿದ‌ ಸಚಿವರ ಭರವಸೆ
ಹೊರಗುತ್ತಿಗೆಯಲ್ಲಿರುವ ತಮ್ಮ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ಈ ಶಿಕ್ಷಕರ ನಿಯೋಗದ ಬೇಡಿಕೆ¿ಚು ಮೇರೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಸ್ಪಂದಿಸಿದ್ದಾರೆ. ಈ ಶಿಕ್ಷಕರ ಗೌರವ ಧನವನ್ನು 2 ಸಾವಿರ ರೂ.ಗಳಿಗೆ ಏರಿಕೆ ಮಾಡುವ ಕುರಿತು ಅವರು ಫೆ. 21ರಂದು ಟ್ವೀಟ್‌ ಮಾಡಿದ್ದರು. ಜತೆಗೆ ಈ ಶಿಕ್ಷಕರ ನೇರ ನೇಮಕಾತಿ, ಸೇವಾ ಭದ್ರತೆ ಮತ್ತು ಕನಿಷ್ಠ ವೇತನ 25,000 ರೂ.ಗಳ ಬೇಡಿಕೆಯನ್ನು ಪರಿಗಣಿಸುವುದಾಗಿಯೂ ಹೇಳಿ ದ್ದರು. ಅಲ್ಲದೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಕಳೆದ ವರ್ಷ ಸಭೆ ನಡೆದು ವೇತನ ಹೆಚ್ಚಳ ಹಾಗೂ ಶಿಕ್ಷಕರ ಸೇವಾನುಭವದ ಆಧಾರದಲ್ಲಿ ಖಾಯಂಗೊಳಿಸುವ ಕುರಿತಂತೆ ಒಪ್ಪಿಗೆ ನೀಡಲಾಗಿತ್ತು. ಕಳೆದ ಸೆಪ್ಟಂಬರ್‌ ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾವವಾಗಿತ್ತು. ವಿಶೇಷ ಪ್ರಕರಣದಡಿ ಶಿಕ್ಷಕರ ಪರವಾಗಿ ಸೇವಾ ಭದ್ರತೆ ಮತ್ತು ಮೂಲವೇತನ ಕೊಡಲು ಮಂಜೂರು ಮಾಡಿ ಕಡತ ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಬೇಡಿಕೆ ಮಾತ್ರ ಇನ್ನೂ ಕಡತಗಳಲ್ಲೇ ಬಾಕಿಯಾಗಿದೆ.

ಸುರತ್ಕಲ್‌ ಮಧ್ಯ: ರಾಜ್ಯದ
ಏಕಮಾತ್ರ ಆಶ್ರಮ ಹೈಸ್ಕೂಲ್‌
ದ.ಕ. ಜಿಲ್ಲೆಯ ಸುರತ್ಕಲ್‌ನ ಮಧ್ಯ ಆಶ್ರಮ ಶಾಲೆ ಹೈಸ್ಕೂಲ್‌ ತರಗತಿಗಳನ್ನೂ ಹೊಂದಿದ್ದು, ಇದು ರಾಜ್ಯದಲ್ಲಿ ಪ್ರೌಢ ಶಾಲಾ ತರಗತಿ ಹೊಂದಿರುವ ಏಕ ಮಾತ್ರ ಆಶ್ರಮ ಶಾಲೆ. ಇಲ್ಲಿ ಒಟ್ಟು 177 ಮಕ್ಕಳಿದ್ದು, 12 ಶಿಕ್ಷಕರಿದ್ದಾರೆ. ಈ ಶಾಲೆಯ 10ನೇ ತರಗತಿಯಲ್ಲಿ 12 ಮಕ್ಕಳು ಕಲಿಯುತ್ತಿದ್ದು, ಶಿಕ್ಷಕರು ಶಾಲಾ ವಧಿಯ ಬಳಿಕವೂ ವಿಶೇಷ ತರಗತಿ ನಿರ್ವ ಹಿಸು ತ್ತಾರೆ. ದ.ಕ. ಜಿಲ್ಲೆಯ 12 ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಒಟ್ಟು 44 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿದ್ದ ಐದು ಶಾಲೆಗಳಲ್ಲಿ ಪ್ರಸ್ತುತ ಒಂದು ಮಾತ್ರ ಕಾರ್ಯಾಚರಿಸುತ್ತಿದೆ. ಇಲ್ಲಿ ಮೂವರು ಶಿಕ್ಷಕರಿದ್ದಾರೆ.

ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕರಿಗೆ 8,500 ರೂ. ಗೌರವಧನ ಸಿಗುತ್ತಿದ್ದು, 2 ಸಾವಿರ ರೂ. ಏರಿಸ ಲಾ ಗಿದೆ. ಬಹಳ ವರ್ಷ ಗಳಿಂದ ದುಡಿ ಯು ತ್ತಿರುವ ಶಿಕ್ಷಕರ ಬೇಡಿಕೆ ಯಂತೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನದ ಬಗ್ಗೆ ಮುಖ್ಯ ಮಂತ್ರಿಗಳ ಜತೆ ಚರ್ಚಿ ಸಿದ್ದು, ಸಮ್ಮತಿ ಸೂಚಿಸಿದ್ದಾರೆ. ಶಿಕ್ಷಕರಿಗೆ ಪೂರಕ  ವಾದ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳ  ಲಾಗುವುದು.
– ಬಿ. ಶ್ರೀರಾಮುಲು,
ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ

- ಸತ್ಯಾ ಕೆ.

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.