ರಾ.ಹೆ.ಯಲ್ಲಿ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ನಿರೀಕ್ಷೆ
ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿ ವರೆಗೆ ಪ್ಲೈಓವರ್; ಕೈಗಾರಿಕ ವಲಯದ ಒಲವು
Team Udayavani, Jan 6, 2021, 4:58 AM IST
ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್ ನವರೆಗಿನ ರಾಷ್ಟ್ರೀಯ ಹೆದ್ದಾರಿ.
ಮಹಾನಗರ: ಕೈಗಾರಿಕ ವ್ಯಾಪ್ತಿಯನ್ನು ಹೊಂದಿರುವ ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಸರಕು ವಾಹನಗಳ ಓಡಾಟಕ್ಕೆ ಪ್ರತ್ಯೇಕ ರಸ್ತೆ ಆವಶ್ಯಕವಿರುವ ಕಾರಣ ಪ್ರಯಾಣಿಕ ವಾಹನಗಳಿಗೆ ಅನುಕೂಲವಾಗುವಂತೆ ಫ್ಲೈಓವರ್ ನಿರ್ಮಾಣಕ್ಕೆ ಒಲವು ವ್ಯಕ್ತವಾಗಿದೆ.
ಈ ವಿಚಾರದ ಬಗ್ಗೆ ಈಗಾಗಲೇ ನವ ಮಂಗಳೂರು ಬಂದರು ಮಂಡಳಿಯು ಆಸಕ್ತಿ ತೋರಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಗಮನಸೆಳೆಯುವ ನಿರೀಕ್ಷೆಯಿದೆ. ಜತೆಗೆ ವಿವಿಧ ಕೈಗಾರಿಕ ಸಂಸ್ಥೆಗಳು ಕೂಡ ವಾಹನ ಒತ್ತಡ ಕಡಿಮೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಆಗ್ರಹಿಸಿದೆ.
ಕೂಳೂರು ಸೇತುವೆಯ ಸನಿಹದ ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಕೆಐಓಸಿಎಲ್, ಎನ್‌ಎಂಪಿಟಿ, ಎಂಸಿಎಫ್, ಟೋಟಲ್ ಗ್ಯಾಸ್, ಚೆಟ್ಟಿನಾಡ್ ಸಿಮೆಂಟ್, ಗೈಲ್ ಸಹಿತ ಹಲವು ಕೈಗಾರಿಕ ಸಂಬಂಧಿತ ಸಂಸ್ಥೆಗಳಿವೆ. ಬೈಕಂಪಾಡಿ ಕೈಗಾರಿಕಾ ಪ್ರದೇಶ, ಎಸ್‌ಇಝಡ್, ಎಂಆರ್‌ಪಿಎಲ್ ಸಹಿತ ವಿವಿಧ ಕೈಗಾರಿಕ ಪ್ರದೇಶಕ್ಕೆ ಸಂಪರ್ಕಕ್ಕೆ ಇದೇ ರಸ್ತೆ ಅಗತ್ಯ ಆಗಿರುವುದರಿಂದ ಇಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಸರಕು ತುಂಬಿದ ವಾಹನಗಳೇ ಸಂಚರಿಸುತ್ತಿವೆ. ಜತೆಗೆ ಹಲವು ಘನ ವಾಹನಗಳು ಈ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ನಿಂತಿರುವುದರಿಂದ ಖಾಸಗಿ ವಾಹನಗಳ ಓಡಾಟಕ್ಕೂ ಸಮಸ್ಯೆ ಆಗುತ್ತಿದೆ. ಹಾಗಾಗಿ ಇಲ್ಲಿ ಫ್ಲೈಓವರ್ ನಿರ್ಮಾಣ ಅಗತ್ಯ ಎಂದು ಉಲ್ಲೇಖೀಸಲಾಗುತ್ತಿದೆ.
ಕೈಗಾರಿಕಾ ತಜ್ಞರ ಪ್ರಕಾರ, “ಇಲ್ಲಿನ ಕೈಗಾರಿಕೆಗಳಿಗೆ ತೆರಳುವ ವಾಹನ, ಇತರ ವಾಹನಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿದರೆ ವಾಹನ ದಟ್ಟನೆ ಕಡಿಮೆ ಮಾಡಬಹುದು. ಅದಕ್ಕಿಂತಲೂ ಬೈಕಂಪಾಡಿ ರೈಲ್ವೇ ಓವರ್‌ಬ್ರಿಡ್ಜ್ ಹೊಸದಾಗಿ ಆಗಬೇಕಿದೆ. ಇಲ್ಲಿ ಉಡುಪಿ- ಮಂಗಳೂರು ಭಾಗದಿಂದ ಬರುವ ವಾಹನಗಳು, ಸರ್ವೀಸ್ ರಸ್ತೆ, ಬೈಕಂಪಾಡಿ ಸಹಿತ ಹಲವು ಭಾಗದಿಂದ ವಾಹನಗಳು ಬರುವುದರಿಂದ ವಾಹನ ಒತ್ತಡ ಎದುರಾಗುತ್ತಿದೆ’ ಎನ್ನುತ್ತಾರೆ.
ಸರಕು ಸಾಗಾಟಕ್ಕೆ ಅನುಕೂಲ
69 ಕೋಟಿ ರೂ. ವೆಚ್ಚದ ಆರು ಪಥಗಳ ಕೂಳೂರು ಸೇತುವೆ ಕಾರ್ಯಗತವಾದರೆ ಈ ಭಾಗದಲ್ಲಿ ಸರಕು ಸಾಗಾಟದ ತೊಂದರೆ ನೀಗಲಿದೆ. ಜತೆಗೆ ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿಗಳೂ ಮುಂದಿನ ಹಂತದಲ್ಲಿ ಪೂರ್ಣಗೊಳ್ಳುವ ಕಾರಣದಿಂದ ಮಂಗಳೂರಿಗೆ ಸರಕು ಸಾಗಾಟ ವಾಹನಗಳ ಆಗಮನಕ್ಕೆ ಉಪಕಾರವಾಗಲಿದೆ. ಹೀಗಿರುವಾಗ ಮಂಗಳೂರಿನ ಕೈಗಾರಿಕ ಕೇಂದ್ರದ ಭಾಗದಲ್ಲಿ ವಾಹನ ದಟ್ಟಣೆಯನ್ನು ನಿಭಾಯಿಸಲು ಫ್ಲೈಓವರ್ ಅಗತ್ಯವಾಗಿದೆ ಎಂಬುದು ಎನ್‌ಎಂಪಿಟಿ ಅಭಿಪ್ರಾಯ.
ಷಟ್ಪಥ ಪ್ರಸ್ತಾವದಲ್ಲೇ ಬಾಕಿ!
ಬಿ.ಸಿ. ರೋಡ್ ಹಾಗೂ ಸುರತ್ಕಲ್ ಮಧ್ಯೆ ಷಟ್ಪಥ ಹೆದ್ದಾರಿ ನಿರ್ಮಾಣದ ಭಾರತ್ ಮಾಲಾ ಯೋಜನೆ ಪ್ರಸ್ತಾವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದಿಂದ ಕೇಂದ್ರ ಸಚಿವಾಲಯಕ್ಕೆ ಸಲ್ಲಿಸಿ ಮೂರು ವರ್ಷಗಳಾಗುತ್ತಿದ್ದರೂ ಅನುಮೋದನೆ ಮಾತ್ರ ದೊರಕಿಲ್ಲ. 9 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು (ಈಗ 30-35 ಮೀ. ಅಗಲ) ಸೇರಿಸಿಕೊಂಡು ಷಟ³ಥ ರಸ್ತೆ ನಿರ್ಮಾಣದ ಯೋಜನೆ ಇದಾಗಿತ್ತು. 3,924 ಕೋ.ರೂ. ಮೊತ್ತದ ಈ ಯೋಜನೆಗೆ ಶಿಲಾನ್ಯಾಸವೂ ನಡೆದಿತ್ತು. ಇದು ಸಾಧ್ಯವಾಗಿದ್ದರೆ ಎನ್‌ಎಂಪಿಟಿ ಮುಂಭಾಗದ ರಸ್ತೆ ಇನ್ನೂ ಅಗಲ/ಫ್ಲೈಓವರ್ ಕಾಣುವ ಸಾಧ್ಯತೆಯಿತ್ತು.
ಫ್ಲೈಓವರ್ ಆಗಬೇಕಿದೆ
ಮುಂದಿನ ಹಂತದಲ್ಲಿ ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿ ಕೈಗಾರಿಕ ಮತ್ತು ಇತರ ವಾಹನಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿದರೆ ವಾಹನ ದಟ್ಟಣೆಯೊಂದಿಗೆ ಅಪಘಾತಗಳನ್ನೂ ತಪ್ಪಿಸಬಹುದು. ಈ ಕುರಿತಾದ ಚಿಂತನೆ ಸದ್ಯ ಇದೆ.
-ವೆಂಕಟರಮಣ ಅಕ್ಕರಾಜು, ಅಧ್ಯಕ್ಷರು, ನವಮಂಗಳೂರು ಬಂದರು ಮಂಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.