ದಾಳಿಯ ಬಗ್ಗೆ ಚಿತ್ರ ನಟ ಅನಂತನಾಗ್ ಆಕ್ರೋಶ
Team Udayavani, Feb 17, 2019, 4:25 AM IST
ಮಂಗಳೂರು: ಜಮ್ಮು ಕಾಶ್ಮೀರದ ಅವಂತಿಪೋರಾದಲ್ಲಿ ಭಾರತೀಯ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರಿಂದ ನಡೆದ ದಾಳಿ ಆಕ್ರೋಶ ಉಂಟು ಮಾಡಿದೆ. ಸಿಟ್ಟಿನೊಂದಿಗೆ ಅಸಹಾಯಕತೆ ಕಾಡುತ್ತಿದೆ. ಈ ಘಟನೆಗಳ ಹಿಂದಿರುವ ಭಯೋತ್ಪಾದಕ ದೇಶ ಪಾಕಿಸ್ಥಾನಕ್ಕೆ ಮೋದಿ ನೇತೃತ್ವದ ಸರಕಾರ ತಕ್ಕ ಪಾಠ ಕಲಿಸಬೇಕು ಎಂದು ಹಿರಿಯ ಚಿತ್ರನಟ ಅನಂತನಾಗ್ ಹೇಳಿದರು.
ನಗರದ ಲಕ್ಷ್ಮೀ ಮೆಮೋರಿಯಲ್ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಉಗ್ರರನ್ನು ಹತ್ತಿಕ್ಕಲು ಸೇನೆಗೆ ಹೆಚ್ಚಿನ ಬಲ ನೀಡಬೇಕು. ಕಾಶ್ಮೀರದಲ್ಲಿ ಸೇಬು ಬೆಳೆಯುತ್ತದೆ. ಜತೆಗೆ ಭಯೋತ್ಪಾದನೆಯೂ ಹುಲುಸಾಗಿ ಬೆಳೆಯುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದವರು ಹೇಳಿದರು.
ತುಳುವಿನಲ್ಲಿ ಬಣ್ಣ
ತುಳು ಚಲನಚಿತ್ರ ರಂಗ ಬೆಳೆಯುತ್ತಿದ್ದು, “ಇಂಗ್ಲಿಷ್’ ಚಲನಚಿತ್ರದ ಮುಖೇನ ಇದೇ ಮೊದಲ ಬಾರಿಗೆ ತುಳು ಭಾಷೆಯ ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದೇನೆ ಎಂದು ಇದೇವೇಳೆ ಅನಂತ್‌ನಾಗ್ ಹೇಳಿದರು. ಚಲನಚಿತ್ರದಲ್ಲಿ ಇಂಗ್ಲಿಷ್ ಅಧ್ಯಾಪಕನ ಪಾತ್ರ ನಿರ್ವಹಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಭಾಷೆ ವ್ಯಾಪ್ತಿ ಹೆಚ್ಚುತ್ತಿದೆ. ಇದರ ನಡುವೆ ಮಾತೃ ಭಾಷೆಗೆ ಪೆಟ್ಟು ಬೀಳಬಾರದು. ಈ ತಾತ್ಪರ್ಯ ಚಲನಚಿತ್ರದಲ್ಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನಂತ್‌ನಾಗ್ ಅವರ ಪತ್ನಿ ಗಾಯತ್ರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.