ಕುಡಿಯುವ ನೀರಿಗೆ ಪ್ರಥಮ ಆದ್ಯತೆ: ಜಿಲ್ಲಾಧಿಕಾರಿ
Team Udayavani, May 5, 2023, 3:52 PM IST
ಸ್ಟೇಟ್‌ಬ್ಯಾಂಕ್: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಲಭ್ಯ ನೀರನ್ನು ದುರ್ಬಳಕೆ ಮಾಡದೆ ಸಮರ್ಪಕ ಬಳಕೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ| ಕುಮಾರ್ ಅವರು ಮಾತನಾಡಿ, ಮಾಣಿ ಮತ್ತು ಸರಪಾಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದು, ಎಎಂಆರ್ ಡ್ಯಾಂನ ನೀರನ್ನು ಆಧಾರವನ್ನಾಗಿರಿಸಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಎಎಂಆರ್ ಡ್ಯಾಂನ ಕೆಳ ಭಾಗದಲ್ಲಿ ಲಭ್ಯವಿರುವ ನೀರನ್ನು ಪಂಪ್ ಮಾಡುವ ಮೂಲಕ ಮೇಲೆತ್ತಿ ಪರ್ಯಾಯ ದಿನಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. 4 ಎಂಎಲ್‌ಡಿಯಷ್ಟು ನೀರಿನ ಅವಶ್ಯಕತೆ ಇದ್ದು, ಪ್ರಸ್ತುತ ನೀರಿನ ಲಭ್ಯತೆಯ ಅನುಸಾರ ಪರ್ಯಾಯ ದಿನಗಳಲ್ಲಿ 2 ಎಂಎಲ್‌ಡಿಯಷ್ಟು ನೀರನ್ನು ಪಂಪ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಉಳ್ಳಾಲ ತಾಲೂಕಿನ ನರಿಂಗಾನ, ಬಾಳೆಪುಣಿ, ಕೊಣಾಜೆ, ತಲಪಾಡಿ ಪ್ರದೇಶಗಳಲ್ಲಿ ನೀರಿನ ಮೂಲಗಳು ಇರುವುದಿಲ್ಲ. ಈ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳನ್ನು ಆಳ, ಪ್ಲಶ್ಶಿಂಗ್ ಮಾಡಲಾಗಿದೆ. ಪ್ರಸ್ತುತ ಎಎಂಆರ್ ಡ್ಯಾಂನಲ್ಲಿ ಲಭ್ಯವಿರುವ ನೀರಿನ ಮಟ್ಟದನುಸಾರ ಮುಂದಿನ ಕೆಲವೇ ದಿನಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ತಿಳಿಸಿದರು.
ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿ, ನದಿಯ ಇಕ್ಕೆಲಗಳಲ್ಲಿರುವ ಆರ್‌ಆರ್ ನಂಬರ್ ಇರುವಂತಹ 28 ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಯಾವುದೇ ಅನಧಿಕೃತ ಪ್ರಕರಣಗಳು ಕಂಡುಬಂದಿಲ್ಲ ಎಂದರು. ಎಂಆರ್‌ಪಿಎಲ್ ಸಂಸ್ಥೆಯು ಪ್ರಸ್ತುತ ಎಎಂಆರ್ ಡ್ಯಾಂನಿಂದ ಶೇ.20ರಷ್ಟು ನೀರನ್ನು ಕುಡಿಯುವ ಉದ್ದೇಶಕ್ಕೆ ತೆಗೆಯಲಾಗುತ್ತಿದೆ. ಎಸ್‌ಇಝಡ್ ಅವರು ಎಎಂಆರ್ ಡ್ಯಾಂನಿಂದ ನೀರೆತ್ತುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಚನ್ನಬಸಪ್ಪ ಸಹಿತ ಮೆಸ್ಕಾಂ, ಪಾಲಿಕೆ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.