ಮಾರುಕಟ್ಟೆಯಲ್ಲಿ ಮೀನು ತುಟ್ಟಿ
Team Udayavani, Jun 12, 2019, 11:45 AM IST
ಮಂಗಳೂರು: ಈ ಸಾಲಿನ ಮೀನುಗಾರಿಕೆ ಋತು ಮುಕ್ತಾಯಗೊಂಡಿದೆ. ಚಂಡ ಮಾರುತದ ಹಿನ್ನೆಲೆಯಲ್ಲಿ ನಾಡ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಪರಿಣಾಮ ಮಾರು ಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದ್ದು, ದರ ಗಗನಕ್ಕೇರಿದೆ.
ಈಗ ತಮಿಳು ನಾಡಿನ ಕರಾವಳಿಯಲ್ಲಿ ಮೀನು ಗಾರಿಕೆ ಆರಂಭ ಗೊಂಡಿದೆ. ಅಲ್ಲಿಂದ ಕೆಲವು ಜಾತಿಯ ಮೀನುಗಳು ಮಂಗಳೂರಿಗೆ ಬರುತ್ತಿವೆ. ಆದ್ದರಿಂದ ದರ ಏರಿದೆ.
ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇರುವ ಸಿಲ್ವರ್ ಫಿಶ್ ಸದ್ಯ 100 ರೂ.ಗೆ ಕೇವಲ 30 ಸಿಗುತ್ತಿವೆ. ಸದ್ಯ ತಮಿಳುನಾಡಿನಿಂದ ಬಂಗುಡೆ, ಬೂತಾಯಿ ಸೇರಿದಂತೆ ಕೆಲವೊಂದು ಮೀನುಗಳು ಮಾರುಕಟ್ಟೆಗೆ ಬರು ತ್ತಿದೆ. ಆದರೆ, ದರ ಹೆಚ್ಚಾಗಿದ್ದು ಒಂದು ಕೆ.ಜಿ. ಬಂಗುಡೆಗೆ ಸುಮಾರು 350 ರೂ. ಇದೆ. ಈ ಹಿಂದೆ ಒಂದು ಕೆ.ಜಿ. ಬಂಗುಡೆ ಸುಮಾರು 200 ರಿಂದ 250 ರೂ.ಗೆ ಸಿಗುತ್ತಿತ್ತು. ಸದ್ಯ ಒಂದು ಬೂತಾಯಿಗೆ 15 ರೂ. ಇದೆ. ಅಂಜಲ್ ಮೀನಿಗೆ ಬೇಡಿಕೆ ಇದ್ದರೂ, ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಇದೆ.
ತಿಂಗಳ ಬಳಿಕ ದರ ಕಡಿಮೆ ಸಾಧ್ಯತೆ
ಮೀನುಗಾರಿಕೆ ಮುಖಂಡರ ಪ್ರಕಾರ ಈ ತಿಂಗಳಿಡೀ ದರ ಏರಿದ ಸ್ಥಿತಿಯಲ್ಲಿಯೇ ಇರಲಿದೆ. ರಾಜ್ಯ ಕರಾವಳಿಗೆ ಮುಂಗಾರು ಆಗಮಿಸಿದ ಕೆಲವು ದಿನಗಳ ಬಳಿಕ ನಾಡದೋಣಿ ಮೀನು ಗಾರರು ಸಮುದ್ರಕ್ಕೆ ತೆರಳುತ್ತಾರೆ. ಬಳಿಕ ಮೀನಿನ ದರದಲ್ಲಿ ಕೊಂಚ ಕಡಿಮೆಯಾಗ ಬಹುದು.
ಮೀನುಗಾರಿಕೆ ಋತು ಪೂರ್ಣಗೊಂಡಿದ್ದು, ಬೋಟ್‌ಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಚಂಡಮಾರುತ ಹಿನ್ನೆಲೆಯಲ್ಲಿ ನಾಡದೋಣಿಗಳು ಕೂಡ ಹೋಗುತ್ತಿಲ್ಲ. ಇದರಿಂದಾಗಿ ಮೀನಿನ ದರ ಹೆಚ್ಚಾಗಿದೆ.
– ನಿತಿನ್ ಕುಮಾರ್, ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.