ಮಗುಚಿ ಬಿದ್ದ ಮೀನುಗಾರಿಕಾ ದೋಣಿ: ಈಜಿ ದಡ ಸೇರಿದ ಮೀನುಗಾರರು
Team Udayavani, Jul 24, 2020, 10:27 AM IST
ಸಸಿಹಿತ್ಲು: ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲುವಿನಲ್ಲಿ ಮೀನುಗಾರರ ದೋಣಿಯೊಂದು ಸಮುದ್ರದ ಮಧ್ಯದಲ್ಲಿ ಮಗುಚಿಬಿದ್ದು ಅದರಲ್ಲಿದ್ದ ಆರು ಮಂದಿ ಮೀನುಗಾರರು ಯಾವುದೇ ಪ್ರಾಣಾಯಪಾಯ ಇಲ್ಲದೇ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸಸಿಹಿತ್ಲುವಿನ ಸುಧಾಕರ್, ತಾರಾನಾಥ್, ಹೇಮನಾಥ್ ಮತ್ತಿತರರು ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದರು. ಆದರೆ ಸಮುದ್ರ ಮಧ್ಯೆ ಹವಾಮಾನ ವೈಪರಿತ್ಯದ ಕಾರಣದಿಂದ ದೋಣಿಯು ಮಗುಚಿ ಬಿದ್ದಿದೆ. ಇದರಲ್ಲಿದ್ದ ಮೂರು ಮಂದಿ ಈಜಿಕೊಂಡು ದಡ ಸೇರಿದ್ದು, ಇನ್ನಿಬ್ಬರನ್ನು ಮತ್ತೊಂದು ದೋಣಿಯ ಮೂಲಕ ರಕ್ಷಿಸಲಾಗಿದೆ.
ಉಳಿದ ಒರ್ವ ಮೀನುಗಾರ ಉತ್ತರ ದಿಕ್ಕಿನಲ್ಲಿ ಸಾಗುತ್ತಿದ್ದ ದೋಣಿಯವರೆಗೆ ಈಜಿಕೊಂಡು ಸಾಗಿ ಸ್ವಯಂ ರಕ್ಷಣೆಗೊಳಗಾಗಿದ್ದಾರೆ. ಅವರು ಆ ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ಸೇರಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.