ಬಲವಂತದ ಡಿಸ್ಚಾರ್ಜ್ : ಹಸುಳೆ ಸಾವು
Team Udayavani, Aug 6, 2018, 3:00 PM IST
ಕಡಬ: ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ತಲುಪುವಷ್ಟರಲ್ಲಿ 6 ದಿನಗಳ ಹಸುಗೂಸು ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರಾಪ್ಪಾಡಿ ಗ್ರಾಮದ ಕಾಯರಡ್ಕದಲ್ಲಿ ರವಿವಾರ ಸಂಭವಿಸಿದ್ದು, ಮಂಗಳೂರಿನ ಲೇಡಿ ಗೋಶನ್ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯಿಂದ ಸಾವು ಸಂಭವಿಸಿದೆ ಎಂದು ಮಗುವಿನ ಹೆತ್ತವರು ಆರೋಪಿಸಿದ್ದಾರೆ. ದಲಿತ ಕೂಲಿ ಕಾರ್ಮಿಕ ಕಾಯರಡ್ಕ ನಿವಾಸಿ ಶೇಖರ ಅವರ ಪತ್ನಿ ವಸಂತಿ 2ನೇ ಹೆರಿಗೆಗಾಗಿ ಜು. 30ರಂದು ಕಡಬದ ಸಮುದಾಯ ಆಸ್ಪತ್ರೆಗೆ ಹೋಗಿದ್ದರು.
ಆದರೆ ಹೆರಿಗೆ ಕಷ್ಟಕರವಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ವೈದ್ಯರು ಮುಂಜಾಗ್ರತೆ ಕಾರಣ ಲೇಡಿಗೋಶನ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು. ಅದೇ ದಿನ ಸಿಸೇರಿಯನ್ ಮೂಲಕ ಹೆರಿಗೆ ನಡೆದು ವಸಂತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.
ಸಮಸ್ಯೆ ಇದ್ದರೂ ಡಿಸ್ಚಾರ್ಜ್
2.65 ಕೆ.ಜಿ. ತೂಕವಿದ್ದ ಮಗು ಆರಂಭದಲ್ಲಿ ಆರೋಗ್ಯವಾಗಿತ್ತು. ಆದರೆ ಆ ಬಳಿಕ ಸರಿಯಾಗಿ ಎದೆ ಹಾಲು ಉಣ್ಣು
ತ್ತಿರಲ್ಲಿ. ಈ ಬಗ್ಗೆ ವೈದ್ಯರಿಗೆ ತಿಳಿಸಿದ್ದೆವು. ಆದರೂ ಆ. 4ರಂದು ತಾಯಿ – ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು. ಮಗು ಆರೋಗ್ಯ ವಾಗಿಲ್ಲ ಎನ್ನುವ ಕಾರಣದಿಂದ ನಾವು ಆಸ್ಪತ್ರೆಯಲ್ಲೇ ಉಳಿದೆವು. ಆದರೆ ರವಿವಾರ ಬೆಳಗ್ಗೆ ಮಗುವಿನ ಬೆಡ್‌ನಲ್ಲಿ ಬೇರೆ ರೋಗಿಯನ್ನು ಮಲಗಿಸಿದರು. ನಮ್ಮನ್ನು ಬಲವಂತ ದಿಂದ 108 ಆ್ಯಂಬುಲೆನ್ಸ್‌ನಲ್ಲಿ ಕಡಬಕ್ಕೆ ಕಳುಹಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಕಡಬ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಅವರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಮಗುವಿನ ಆರೋಗ್ಯ ಸರಿಯಿಲ್ಲ ಚಿಕಿತ್ಸೆ ನೀಡಿ ಎಂದು ವೈದ್ಯರಲ್ಲಿ ಅಂಗಲಾಚಿದರೂ ನಿಮ್ಮ ಮಗು ಆರೋಗ್ಯವಾಗಿದೆ, ಆಸ್ಪತ್ರೆಯಲ್ಲಿಯೇ ಉಳಿದುಕೊಳ್ಳಲು ಈ ರೀತಿ ನಾಟಕ ಮಾಡುತ್ತೀರಿ ಎಂದು ದಬಾಯಿಸಿ 108 ಆ್ಯಂಬುಲೆನ್ಸ್‌ನಲ್ಲಿ ಕಡಬಕ್ಕೆ ಕಳುಹಿಸಿದ್ದಾರೆ. ನಾವು ಕಡಬ ತಲುಪಿ ಅರ್ಧತಾಸು ಆಗುವಷ್ಟರಲ್ಲಿ ಮಗು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ನಮಗೆ ನ್ಯಾಯ ಒದಗಿಸಬೇಕು.
– ವಸಂತಿ, ಮಗುವಿನ ಅಜ್ಜಿ
ನಾನು ಈ ಬಗ್ಗೆ ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕಿಯನ್ನು ಸಂಪರ್ಕಿಸಿದ್ದೇನೆ. ಅವರ ಪ್ರಕಾರ ಡಿಸ್ಚಾರ್ಜ್ ವೇಳೆ ಮಗು ಆರೋಗ್ಯವಾಗಿತ್ತು. ಸಾವಿನ ಕಾರಣ ಸ್ಪಷ್ಟವಾಗಬೇಕಾದರೆ ಪೊಲೀಸರಿಗೆ ದೂರು ನೀಡಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕುಟುಂಬದವರಿಗೆ ತಿಳಿಸಿದ್ದೇನೆ.
-ಡಾ| ರಾಮಕೃಷ್ಣ ರಾವ್, ಡಿಎಚ್‌ಒ
ವೈದ್ಯರ ಬೇಜವಾಬ್ದಾರಿಯಿಂದ ಬಡಕುಟುಂಬ ಮಗುವನ್ನು ಕಳೆದುಕೊಂಡಿದೆ. ಈ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ರಾಜ್ಯ ಆರೋಗ್ಯ ಸಚಿವರಿಗೂ ದೂರು ನೀಡಲಾಗುವುದು.
–ಗುರವಪ್ಪ ಕಲ್ಲುಗುಡ್ಡೆ, ದಸಂಸ ಮುಖಂಡರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.