ನಗರದಲ್ಲಿ ಉಕ್ಕಿ ಹರಿಯುವ ಮ್ಯಾನ್‌ಹೋಲ್‌ಗಳಿಗೆ ಮುಕ್ತಿ ನೀಡಿ
ಪ್ರತೀ ಮಳೆಗಾಲದಲ್ಲಿ ಈ ಸಮಸ್ಯೆ ಸಾಮಾನ್ಯ
Team Udayavani, May 8, 2023, 2:40 PM IST
ಮಹಾನಗರ: ನಗರದಲ್ಲಿ ಮಳೆಗಾಲದಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ಗಳಲ್ಲಿ ಕೊಳಚೆ ನೀರು ಉಕ್ಕಿ ಹರಿ ಯುವ ಸಮಸ್ಯೆ ಸಾಮಾನ್ಯವಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪಾಲಿಕೆ ಈಗಿನಿಂದಲೇ ಕ್ರಮ ವಹಿಸಬೇಕಾದ ಅಗತ್ಯವಿದೆ.
ಪ್ರತಿ ವರ್ಷ ಮಳೆಗಾಲ ಬಂದರೆ ನಗರದ ತಗ್ಗು ಪ್ರದೇಶಗಳೂ ಸಹಿತ ನಗರದ ವಿವಿಧೆಡೆ ಒಳಚರಂಡಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿ ಯುತ್ತವೆ. ಪಾಲಿಕೆ ವತಿಯಿಂದ ಮುಂಗಾರಿಗೆ ಸಿದ್ಧಗೊಳ್ಳು ನಡೆಸುವ ರಾಜಕಾಲುವೆ, ತೋಡುಗಳ ಹೂಳು ತೆರವು ಕಾರ್ಯಾಚರಣೆಯಂತೆಯೇ ಒಳಚರಂಡಿಗೆ ಸಂಬಂಧಿಸಿದ ಕೆಲಸಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ಪ್ರಸ್ತುತ ಒಂದೆರಡು ಬಾರಿ ನಗರ ವ್ಯಾಪ್ತಿಯ ಕೆಲವೆಡೆ ಸಾಮಾನ್ಯ ಮಳೆ ಸುರಿದಿದೆ. ಎರಡು ದಿನಗಳ ಹಿಂದೆ ಸುರಿದ ಮಳೆಗೆ ಕೊಡಿಯಾಲಬೈಲು ವ್ಯಾಪ್ತಿಯಲ್ಲಿ ಒಳಚರಂಡಿಯ ಕೊಳಚೆ ನೀರು ಮ್ಯಾನ್‌ಹೋಲ್‌ಗಳ ಮೂಲಕ ಹೊರಗೆ ಬಂದಿತ್ತು.
ಒಳಚರಂಡಿ ಸಮಸ್ಯೆ ಮಂಗಳೂರು ನಗರವನ್ನು ಬೆನ್ನು ಬಿಡದೆ ಕಾಡುತ್ತಿರುವ ಸಮಸ್ಯೆಯಾಗಿದೆ. ಹೊಸದಾಗಿ ಒಳಚರಂಡಿ ವ್ಯವಸ್ಥೆ ನಿರ್ಮಾಣವಾದ ಪ್ರದೇಶದಲ್ಲಿ ಅಸಮರ್ಪಕ ಮತ್ತು ದೂರದೃಷ್ಟಿ ರಹಿತ ಕಾಮಗಾರಿಯಿಂದಾಗಿ ಕೆಲಸ ಮಾಡಿದರೂ, ಪ್ರಯೋಜನಕ್ಕೆ ಬಾರದಂತಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗಳು ಉಕ್ಕಿ ಮಲೀನ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ.
ಒಳ ಚರಂಡಿ
ಸಮಸ್ಯೆ ವ್ಯಾಪಕ
ನಗರದ ಶಿವಬಾಗ್, ಬೆಂದೂರು, ಮರೋಳಿ, ಕಂಕನಾಡಿ, ದೇರೆಬೈಲು ದಕ್ಷಿಣ, ದೇರೆಬೈಲು ಪೂರ್ವ, ಕಾವೂರು, ಕದ್ರಿ ಉತ್ತರ, ಬಿಜೈ, ಕೊಡಿಯಾಲಬೈಲು, ಪದವು ಸೆಂಟ್ರಲ್, ಜಪ್ಪಿನಮೊಗರು, ಬಜಾಲ್, ಅತ್ತಾವರ ಸೇರಿದಂತೆ
ಪಾಲಿಕೆಯ ಬಹುತೇಕ ವಾರ್ಡ್ ಗಳಲ್ಲಿ ಒಳ ಚರಂಡಿ ಸಮಸ್ಯೆ ವ್ಯಾಪಕವಾಗಿ ಕಂಡು ಬರುತ್ತಿದೆ. ಗುಜ್ಜರಕೆರೆ ಬಳಿಯ ಅರೆಕರೆಬೈಲು ಪ್ರದೇಶದಲ್ಲಿ ಪ್ರತಿ ಮಳೆಗಾಲದಲ್ಲಿ ಕಾರಂಜಿಯಂತೆ ಡ್ರೈನೇಜ್ ನೀರು ಹೊರಕ್ಕೆ ಚಿಮ್ಮುತ್ತದೆ ಎಂದು ಸ್ಥಳೀಯರು ಪ್ರತೀ ಬಾರಿಯೂ ಆರೋಪ ಮಾಡುತ್ತಾರೆ.
ಒಳಚರಂಡಿ ಜಾಲಕ್ಕೆ
ಮಳೆ ನೀರಿನ ಸಂಪರ್ಕ
ಕೆಲವು ಬಹುಮಹಡಿ ಕಟ್ಟಡಗಳ ಮಳೆ ನೀರು ಹರಿಯುವ ಕೊಳ ವೆ ಯ ಸಂಪರ್ಕವನ್ನೂ ಒಳಚರಂಡಿ ಜಾಲಕ್ಕೆ ನೀಡುವುದು ಮಳೆಗಾಲದಲ್ಲಿ ಒಳಚರಂಡಿಗಳ ತ್ಯಾಜ್ಯ ನೀರು ಉಕ್ಕಿಹರಿಯಲು ಪ್ರಮುಖ ಕಾರಣ. ಪಾಲಿಕೆ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ, ಇದನ್ನು ತಡೆದರೆ ಸ್ವಲ್ಪ ಮಟ್ಟಿಗೆ ಈ ಸಮಸ್ಯೆ ಉಂಟಾಗದಂತೆ ತಡೆಯಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಶೀಘ್ರ ಬ್ಲಾಕ್ ತೆರವು
ಒಳಚರಂಡಿ ಮ್ಯಾನ್‌ಹೋಲ್‌ಗಳಿಂದ ಕೆಲವೆಡೆ ಕೊಳಚೆ ನೀರು ಹೊರ ಬರುತ್ತಿರುವುದು ತಿಳಿದಿದೆ. ಸಮರ್ಪಕ ಕಾಮಗಾರಿ ನಡೆಸುವ ಮೂಲಕ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆಗಾಲಕ್ಕೆ ಮುನ್ನ ಕೊಳವೆ ಮಾರ್ಗದಲ್ಲಿ ಬ್ಲಾಕ್‌ಗಳಿದ್ದಲ್ಲಿ, ಮಳೆ ನೀರಿನ ಅಕ್ರಮ ಸಂಪರ್ಕ ನೀಡಿದ್ದರೆ ಅದನ್ನೂ ತೆರವುಗೊಳಿಸುವಂತೆಯೂ ಸೂಚನೆ ನೀಡಲಾಗುವುದು. – ಚನ್ನಬಸಪ್ಪ ಕೆ., ಪಾಲಿಕೆ ಆಯುಕ್ತ
-ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.