ಶ್ವಾನ, ಬೆಕ್ಕುಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
ಮೂಕ ಪ್ರಾಣಿಗಳು ಬೀದಿ ಪಾಲಾಗದಂತೆ ತಡೆಯಲು ಕ್ರಮ
Team Udayavani, Jun 23, 2020, 5:19 AM IST
ಮಹಾನಗರ: ಶ್ವಾನ ಮತ್ತು ಬೆಕ್ಕುಗಳು ಬೀದಿ ಪಾಲಾಗದಂತೆ ತಡೆಯಲು ಲವ್ಸ್ 4 ಪಾವ್ಸ್ ಚಾರಿಟೆಬಲ್ ಟ್ರಸ್ಟ್ ಶ್ವಾನ, ಬೆಕ್ಕುಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ ಮಾಡುತ್ತಿದೆ. ಚಿಕಿತ್ಸೆ ಕೊಡಿಸಲಾಗದ ಬಡ ವರ್ಗದ ಮಂದಿಗೆ ಟ್ರಸ್ಟ್ ಈ ಸಹಾಯವನ್ನು ಮಾಡಲಾಗುತ್ತಿದೆ.
ಶ್ವಾನ ಮತ್ತು ಬೆಕ್ಕುಗಳ ಮೇಲೆ ಕಾಳಜಿ ಹೊಂದಿರುವ ಐವರು ಸದಸ್ಯರನ್ನೊಳಗೊಂಡ ಲವ್ಸ್ 4 ಪಾವ್ಸ್ ಟ್ರಸ್ಟ್ ಕಳೆದ ಹಲವಾರು ಸಮಯದಿಂದ 200ಕ್ಕೂ ಹೆಚ್ಚು ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗೆ ಆಶ್ರಯ ಕಲ್ಪಿಸಿದೆ. ಅನಾಮಿಕ ವ್ಯಕ್ತಿಗಳು ಚರಂಡಿ, ರಸ್ತೆ ಬದಿಗಳಲ್ಲಿ ಬಿಟ್ಟು ಹೋದ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ತಂದು ಸಾಕಿ ಸಲಹಿ ಉಚಿತ ದತ್ತು ಶಿಬಿರಗಳನ್ನು ಏರ್ಪಡಿಸುವ ಮೂಲಕ ಶ್ವಾನ, ಬೆಕ್ಕುಗಳ ಅಗತ್ಯವಿರುವವರಿಗೆ ಉಚಿತವಾಗಿ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ವಾನ ಮತ್ತು ಬೆಕ್ಕು ಮರಿಗಳು ಬೀದಿ ಪಾಲಾಗದಂತೆ ತಡೆಯುವ ನಿಟ್ಟಿನಲ್ಲಿ ಇದೀಗ ಸಂತಾನಹರಣ ಚಿಕಿತ್ಸೆಯನ್ನೂ ಟ್ರಸ್ಟ್ ವತಿಯಿಂದಲೇ ಕೊಡಿಸುತ್ತಿದ್ದಾರೆ.
ಸಂತಾನಹರಣ ಚಿಕಿತ್ಸೆಗೆ ವೈದ್ಯರು ಕನಿಷ್ಠ 4 ಸಾವಿರ ರೂ. ತೆಗೆದುಕೊಳ್ಳುತ್ತಾರೆ. ಆದರೆ ಬಡವರ್ಗದವರು ಇಷ್ಟೊಂದು ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಹಾಗಾಗಿ ಶ್ವಾನ, ಬೆಕ್ಕಿನ ಮರಿಗಳನ್ನು ರಸ್ತೆಗೆ ಬಿಡುವ ಸಾಧ್ಯತೆಯಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬಡವರ ಮನೆಯ ಶ್ವಾನಗಳನ್ನು ಉಚಿತವಾಗಿ ಸಂತಾನ ಹರಣ ಚಿಕಿತ್ಸೆಗೊಳಪಡಿಸುವುದು ಸಂಘಟನೆಯ ಉದ್ದೇಶವಾಗಿದೆ.
ಸಂಘಟನೆಯ ಈ ಕೆಲಸಕ್ಕೆ ಹೆಚ್ಚಿನ ಹಣ ಖರ್ಚಾಗುತ್ತಿರುವು ದರಿಂದ ದಾನಿಗಳು ಸಹಕರಿಸಿದರೆ ಶ್ವಾನ ಮತ್ತು ಬೆಕ್ಕುಗಳ ಜೀವ ಉಳಿಸಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಲವ್ಸ್ 4 ಪಾವ್ಸ್ ಟ್ರಸ್ಟ್‌ನ ಟ್ರಸ್ಟಿ ಉಷಾ ಸುವರ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.